ಕುಶಾಲನಗರ ಆ 11: ಇತ್ತೀಚೆಗೆ ಗೋಣಿಕೊಪ್ಪದಲ್ಲಿ ARDC ನೃತ್ಯ ಸಂಸ್ಥೆ ಆಯೋಜಿಸಿದ್ದ ‘ಸಪ್ತಸ್ವರ ತಕದಿಮಿತಾ’ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ. ಕುಶಾಲನಗರದ ‘ಟೈಮ್ ಬ್ರೇಕರ್ಸ್ ಡ್ಯಾನ್ಸ್ ಸ್ಟುಡಿಯೋ ‘ ನೃತ್ಯ ಸಂಸ್ಥೆಯ ಮಕ್ಕಳಿಗೆ ಸಬ್ ಜ್ಯೂನಿಯರ್ ಸೋಲೋ, ಜೂನಿಯರ್ ಸೋಲೋ, ಜೂನಿಯರ್ ಗ್ರೂಪ್ ಡ್ಯಾನ್ಸ್ ವಿಭಾಗದಲ್ಲಿ ಪ್ರಥಮ ಬಹುಮಾನ ಲಭಿಸಿದೆ.
ಗೋಣಿಕೊಪ್ಪದಲ್ಲಿ ನಡೆದ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಬೆಂಗಳೂರು, ಮೈಸೂರು, ಮಂಗಳೂರು, ಚಾಮರಾಜನಗರ, ಮಡಿಕೇರಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ನೃತ್ಯ ತಂಡಗಳು ಭಾಗವಹಿಸಿದ್ದು. ಈ ಪೈಕಿ
ಸಬ್ ಜೂನಿಯರ್ ಸೋಲೋ ವಿಭಾಗದಲ್ಲಿ ಟೈಮ್ ಬ್ರೇಕರ್ಸ್ ಡ್ಯಾನ್ಸ್ ಸ್ಟುಡಿಯೋ ನೃತ್ಯ ಸಂಸ್ಥೆಯ ಭುವನೇಶ್ ಗೆ ಪ್ರಥಮ ಬಹುಮಾನ ಲಭಿಸಿದೆ.
ಜೂನಿಯರ್ ಸೋಲೋ ವಿಭಾಗದಲ್ಲಿ ಯಶಸ್ವಿನಿ ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ.
ಜೂನಿಯರ್ ಗ್ರೂಪ್ ಡ್ಯಾನ್ಸ್ ವಿಭಾಗದಲ್ಲಿ ಟೈಮ್ ಬ್ರೇಕರ್ಸ್ ಡ್ಯಾನ್ಸ್ ಸ್ಟುಡಿಯೋ ನೃತ್ಯ ಸಂಸ್ಥೆಯ ಕ್ರಿಶ್, ಪೂರ್ವಿಕ, ಸಾನ್ವಿ, ಪ್ರಜ್ವಿತ, ಮೋನಿಷಾ, ಪ್ರಜ್ವಲ್, ಸಮರ್ಥ್, ಸೂರ್ಯ, ಸನತ್, ವಿಪ್ರುತ್, ವೈಭವ್, ಧನ್ವಿಷ್, ನಂದನ ಪ್ರದರ್ಶಿಸಿದ ಹನುಮಾನ್ ನೃತ್ಯ ಪ್ರಕಾರಕ್ಕೆ ಪ್ರಥಮ ಬಹುಮಾನ ಲಭ್ಯವಾಗಿದೆ.
ಕುಶಾಲನಗರದ ಟೈಮ್ ಬ್ರೇಕರ್ಸ್ ನೃತ್ಯ ಸಂಸ್ಥೆಯ ನೃತ್ಯ ಸಂಯೋಜಕ ಪ್ರದೀಪ್ ಅವರ ನೇತೃತ್ವದಲ್ಲಿ ಮಕ್ಕಳು ಉತ್ತಮ ಪ್ರದರ್ಶನ ನೀಡಿ 3 ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆದಿದ್ದಾರೆ.
ಬೆಂಗಳೂರಿನ ನೃತ್ಯ ಸಂಯೋಜಕರಾದ ಜಗ್ಗು ಮಾಸ್ಟರ್ ಹಾಗೂ ಭೂಷಣ್ ಮಾಸ್ಟರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ರಿಯಾಲಿಟಿ ಶೋ ನೃತ್ಯ ಸಂಯೋಜಕರಾದ ಚೇತನ್, ಜಯ್ ಹಾಗೂ ದಿಲೀಪ್ ರವರು ತೀರ್ಪುಗಾರರಾಗಿದ್ದರು.
Back to top button
error: Content is protected !!