ಪ್ರತಿಭೆ

ಚೆನ್ನಯ್ಯನಕೋಟೆ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಲೋತ್ಸವ

ಸಿದ್ದಾಪುರ, ನ 28; : ಚೆನ್ನಯ್ಯನಕೋಟೆ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಲೋತ್ಸವದಲ್ಲಿ ಚೆನ್ನಂಗಿ-ಬಸವನಹಳ್ಳಿ ಸರಕಾರಿ ವಾಲ್ಮೀಕಿ ಆಶ್ರಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಕಿರಿಯರ ಹಾಗೂ ಹಿರಿಯರ ವಿಭಾಗಕ್ಕೆ ನಡೆಸಿದ ಎಲ್ಲಾ ಸ್ಪರ್ಧೆಯಲ್ಲಿ ಗಣನೀಯ ಸಾಧನೆ ಮಾಡುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ.ಕಿರಿಯರ ವಿಭಾಗದ ಭಕ್ತಿ ಗೀತೆ,ದೇಶ ಭಕ್ತಿ ಗೀತೆ,ಮಣ್ಣಿನ ಮಾದರಿ,ಕಥೆ ಹೇಳುವುದು,ಇಂಗ್ಲಿಷ್ ಕಂಠಪಾಠ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.ಹಿರಿಯರ ವಿಭಾಗದಲ್ಲಿ ಮಣ್ಣಿನ ಮಾದರಿ ಪ್ರಥಮ ಹಾಗೂ ಭಕ್ತಿ ಗೀತೆ,ದೇಶ ಭಕ್ತಿ ಗೀತೆ,ಅಭಿನಯ ಗೀತೆ,ಕವನ ವಾಚನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆಯುವ ಮೂಲಕ ತಾಲ್ಲೂಕು ಮಟ್ಟದ ಸ್ಪರ್ಧೆ ಗೆ ಆಯ್ಕೆಯಾಗಿದ್ದಾರೆ.
ಸರಕಾರಿ ವಾಲ್ಮೀಕಿ ಆಶ್ರಮ ಶಾಲೆಯ ವಿದ್ಯಾರ್ಥಿಗಳ ಸಾಧನೆಗೆ ಪೋಷಕರು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಈ ಸಂದರ್ಭದಲ್ಲಿ ವಾಲ್ಮೀಕಿ ಶಾಲೆಯ ಮುಖ್ಯ ಶಿಕ್ಷಕರಾದ ರಾಣಿ ಎ ಕೆ,ಸಹ ಶಿಕ್ಷಕರಾದ ವೆಂಕಟ ಮೂರ್ತಿ, ಪ್ರವೀಣ್ ಕುಮಾರ್,ಸಿಂದು,ಮೀನಾಕ್ಷಿ, ವಿದ್ಯಾ ,ಪವಿತ್ರ ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!