ಕುಶಾಲನಗರ: ಬುಧವಾರ ರಾತ್ರಿಯಿಂದ ಕಾಣೆಯಾಗಿರುವ
ಚೆಟ್ಟಳ್ಳಿ ಕಂಡಕೆರೆ ನಿವಾಸಿ,ಮಾಜಿ ಯೋಧ ಗಿರೀಶ್ (46) ಎಂಬವರಿಗೆ ಎರಡನೇ ದಿನವೂ ಹುಡುಕಾಟ ಮುಂದುವರೆದಿದೆ. ಇವರ ಸ್ಕೂಟಿ ಕೀ ಮತ್ತು ಹೆಲ್ಮೆಟ್ ಸಹಿತ ಗುಡ್ಡೆಹೊಸೂರು ತೆಪ್ಪದಕಂಡಿ ಬಳಿ ಪತ್ತೆಯಾಗಿತ್ತು. ಮೊಬೈಲ್ ಕೂಡ ಸ್ವಿಚ್ ಆಫ್ ಆಗಿರುವ ಹಿನ್ನಲೆಯಲ್ಲಿ ಕುಟುಂಬಸ್ಥರು ಕುಶಾಲನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಆತ್ಮಹತ್ಯೆ ಶಂಕೆ ವ್ಯಕ್ತಗೊಂಡು ಗುರುವಾರ ಇಡೀ ದಿನ ಕಾವೇರಿ ನದಿಯಲ್ಲಿ ಶೋಧ ಕಾರ್ಯ ನಡೆಸಲಾಯಿತು.
ಅಗ್ನಿಶಾಮಕ ದಳ, ರಿವರ್ ರಾಫ್ಟ್ ಸಿಬ್ಬಂದಿಗಳು ಕಣಿವೆ ತನಕ ಶೋಧ ಕಾರ್ಯ ನಡೆಸಿದರು ಸಂಜೆಯವರೆಗೆ ನಾಪತ್ತೆಯಾದವರ ಸುಳಿವು ದೊರೆಯಲಿಲ್ಲ. ಎರಡನೇ ದಿನ ಶುಕ್ರವಾರ ಕೂಡ ಕಾವೇರಿ ಸೇತುವೆ ಬಳಿ ಶೋಧ ಕಾರ್ಯ ಆರಂಭಿಸಲಾಗಿದೆ.
ಕಾಣೆಯಾದ ಗಿರೀಶ್ ಅವರು ಕುಶಾಲನಗರದ ಪ್ರತಿಷ್ಠಿತ ಖಾಸಗಿ ಸಂಸ್ಥೆಯ ಉದ್ಯೋಗಿಯಾಗಿದ್ದಾರೆ.
Back to top button
error: Content is protected !!