ಶಿಕ್ಷಣ

ಕೂಡಿಗೆ: ರಾಷ್ಟ್ರೀಯ ಜಂತು ಹುಳು ನಿರ್ವಹಣಾ ಕಾರ್ಯಕ್ರಮ

ಕುಶಾಲನಗರ, ಆ 11: ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಜಂತು ಹುಳು ನಿರ್ವಹಣಾ ಕಾರ್ಯಕ್ರಮವು ಮೊರಾರ್ಜಿ ಶಾಲೆಯ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ತೇಜಶ್ರೀ ನೆರವೇರಿಸಿದರು. ನಂತರ ಮಾತನಾಡುತ್ತ, ವಿದ್ಯಾರ್ಥಿಗಳಿಗೆ ಜಂತು ಹುಳುಗಳಿಂದ ಅಗುವ ಸಮಸ್ಯೆ, ಸ್ವಚ್ಚತೆಯ ಮಹತ್ವ, ಹುಳಗಳ ನಿರ್ವಹಣೆಯ ಮಾತ್ರೆಗಳ ಬಗ್ಗೆ ಸಮಗ್ರವಾದ ಮಾಹಿತಿಯನ್ನು ತಿಳಿಸಿದರು.
ತಾಲ್ಲೂಕು ಅರೋಗ್ಯ ನಿರೀಕ್ಷಣಾಧಿಕಾರಿ ವಿಶ್ವಜ್ಞ ನವರು ಡೆಂಗ್ಯೂ ಮತ್ತು ಮಲೇರಿಯಾ ರೋಗದ ಬಗ್ಗೆ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮುಖ್ಯೋಪಾಧ್ಯಾಯ ಪ್ರಕಾಶ್ ವಹಿಸಿದ್ದರು.
ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರಾದ ದಿನೇಶ್, ನಾಗೇಂದ್ರ, ಚಿದಂಬರ್, ಹರಿಣಾಕ್ಷಿ, ಜಗದೀಶ್, ದೊಡ್ಡಯ್ಯ, ಶುಶ್ರೂಷಕರಾದ ಮೀನಾ ಹಾಗೂ ಅರೋಗ್ಯ ಕೇಂದ್ರದ ಸಿಬ್ಬಂದಿ ವರ್ಗದವರು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!