ಕುಶಾಲನಗರ ಮಾ.29: ಕುಶಾಲನಗರದ ಶ್ರೀ ವಾಸವಿ ಕನ್ನಿಕಾಪರಮೇಶ್ವರಿ ಟ್ರಸ್ಟ್ ವತಿಯಿಂದ ಯುಗಾದಿ ಹಬ್ಬದ ಅಂಗವಾಗಿ ಕೂಡಿಗೆಯ ಶ್ರೀ ಶಕ್ತಿ ವೃದ್ಧಾಶ್ರಮದ ಹಿರಿಯ ನಾಗರಿಕರಿಗೆ ದಿನ ನಿತ್ಯ ಬಳಕೆಯಾಗುವ ಔಷಧ, ಬಟ್ಟೆ ಮತ್ತು ನಿತ್ಯ ಬಳಕೆಯಾಗುವ ವಸ್ತುಗಳನ್ನು ಅಧ್ಯಕ್ಷ ಬಿ.ಎಲ್.ಉದಯ್ ಕುಮಾರ್ ನೇತೃತ್ವದಲ್ಲಿ ಶುಕ್ರವಾರ ನೀಡಲಾಯಿತು.
ಇದೇ ವೇಳೆ ಮಾತನಾಡಿ, ಇಂತಹ ಹಿರಿಯ ಚೇತನಗಳನ್ನು ಪ್ರತಿನಿತ್ಯ ಗೌರವಿಸುವ ಕಾಯಕವನ್ನು ಮಾಡಬೇಕು. ಇದರಿಂದ ಅವರ ಮನಸ್ಸಿನಲ್ಲಿ ಸಂತೋಷದ ಭಾವನೆ ಮೂಡುತ್ತದೆ ಮತ್ತು ಬದುಕಿನಲ್ಲಿ ಚೈತನ್ಯ ದೊರೆಯುತ್ತದೆ. ಇಂತಹ ಕಾರ್ಯಗಳಿಂದ ಒಂದು ದಿನದ ಮಟ್ಟಿಗಾದರೂ ಅವರ ಮನಸಿನಲ್ಲಿ ಖುಷಿ ಮೂಡಿಸಿದ ತೃಪ್ತಿ ಸಿಗುತ್ತೆ ಎಂದು ಉದಯ್ ಕುಮಾರ್ ಭಾವುಕರಾದರು. ತಮ್ಮ ತಮ್ಮ ಹಿರಿಯರನ್ನು ತಮ್ಮ ಮನೆಗಳಲ್ಲೇ ಗೌರವ ಪೂರ್ವಕವಾಗಿ ನಡೆಸಿಕೊಳ್ಳಲು ಅವರು ಕರೆ ನೀಡಿದರು.
ಶ್ರೀ ವಾಸವಿ ಕನ್ನಿಕಾಪರಮೇಶ್ವರಿ ಟ್ರಸ್ಟ್ ನ ಕಾರ್ಯದರ್ಶಿ ಬಿ.ಎಲ್.ಅಶೋಕ್, ಖಜಾಂಚಿ ಬಿ.ಆರ್.ನಟರಾಜ್, ನಿರ್ದೇಶಕ ಎಂ.ಪಿ.ಸತ್ಯನಾರಾಯಣ ಇತರರು ಹಾಜರಿದ್ದರು.
Back to top button
error: Content is protected !!