ಟ್ರೆಂಡಿಂಗ್

ಏಪ್ರಿಲ್ 1 ರಂದು ಕುಶಾಲನಗರದಲ್ಲಿ ಸಿದ್ದಗಂಗಾ ಶ್ರೀಗಳ ಹುಟ್ಟುಹಬ್ಬ ಅಚರಣೆ

ಕುಶಾಲನಗರ,‌ಮಾ 20: ಭಕ್ತ ಜನರ ಪಾಲಿಗೆ ನಡೆದಾಡುವ ದೇವರೆಂದೇ ಜನಜನಿತವಾಗಿದ್ದ ಸಿದ್ದಗಂಗಾ ಮಠದ ಡಾ.ಶ್ರೀ ಶಿವಕುಮಾರ ಮಹಾಸ್ವಾಮೀಜಿ ಯವರ ಹುಟ್ಟು ಹಬ್ಬ ಆಚರಣೆ ಕುಶಾಲನಗರದಲ್ಲಿ ಏಪ್ರಿಲ್ 1 ರಂದು ಬೆಳಗ್ಗೆ 9 ಗಂಟೆಗೆ ಜರುಗಲಿದೆ.
ಕುಶಾಲನಗರದ ಶ್ರೀ ಸಿದ್ದಗಂಗಾ ಭಕ್ತ ಮಂಡಳಿ ವತಿಯಿಂದ ನಡೆಯಲಿರುವ ಶ್ರೀಗಳ ಹುಟ್ಟು ಹಬ್ಬದಾಚರಣೆ ನಿಮಿತ್ತ, ಪಟ್ಟಣದ ಗಣಪತಿ ದೇವಾಲಯದಿಂದ ಅಂದು ಬೆಳಗ್ಗೆ 8-30 ಗಂಟೆಗೆ ಶ್ರೀಗಳ ಭಾವಚಿತ್ರ ಹೊತ್ತ ಅಲಂಕೃತ ವಾಹನದ ಶೋಭಾಯಾತ್ರೆ ರಥಬೀದಿಗಾಗಿ ಸೋಮೇಶ್ವರ ದೇವಾಲಯದವರೆಗೆ ಸಾಗಲಿದೆ.
ನಂತರ ದೇವಾಲಯದ ಆವರಣದಲ್ಲಿ ಪೂಜಾ ಕಾರ್ಯಕ್ರಮ ಜರುಗಲಿದೆ.
ಇದೇ ಸಂದರ್ಭ ಎಲೆ ಮರೆಯ ಕಾಯಿಯಂತೆ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸಾಧಕರನ್ನು ಗುರುತಿಸಿ ಸಿದ್ದಗಂಗಾ ಶ್ರೀ ಕಾಯಕ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಗುತ್ತದೆ.
ಬಳಿಕ ನೆರೆದ ಭಕ್ತಜನರಿಗೆ ಪ್ರಸಾದ ದಾಸೋಹದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸಿದ್ದಗಂಗಾ ಭಕ್ತ ಮಂಡಳಿ ಸಂಚಾಲಕ ಕೆ.ಎಸ್.ಮೂರ್ತಿ ಹಾಗೂ ಬಿ.ನಟರಾಜು ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!
WhatsApp us