ಸನ್ಮಾನ

ಲಯನ್ಸ್ ಜಿಲ್ಲಾ ಗವರ್ನರ್‌ ಬಿ.ಎಂ.ಭಾರತಿ ಕುಶಾಲನಗರ ಭೇಟಿ: ಸಭೆ

ಕುಶಾಲನಗರ, ಫೆ 22: ಕುಶಾಲನಗರ ಲಯನ್ಸ್ ಕ್ಲಬ್ ಗೆ ಲಯನ್ಸ್ ಜಿಲ್ಲಾ ಗವರ್ನರ್‌ ಬಿ.ಎಂ.ಭಾರತಿ ಅಧಿಕೃತ ಭೇಟಿ ಕಾರ್ಯಕ್ರಮ ನಡೆಯಿತು. ಕುಶಾಲನಗರ ಗೌಡ ಸಮಾಜ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡ ಅವರು, ಕುಶಾಲನಗರ, ಮಡಿಕೇರಿ, ಸುಂಟಿಕೊಪ್ಪ, ಸೋಮವಾರಪೇಟೆ ಕ್ಲಬ್ ಪ್ರಮುಖರೊಂದಿಗೆ ಚರ್ಚೆ ನಡೆಸಿದರು.

ಕುಶಾಲನಗರ ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ಪ್ರವೀಣ್ ದೇವರಗುಂಡ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ
ಆಯಾ ಕ್ಲಬ್ ಗಳ ಕಾರ್ಯದರ್ಶಿ ಗಳು ತಮ್ಮ‌ ಕ್ಲಬ್ ನ‌ ವಾರ್ಷಿಕ ವರದಿ ವಾಚಿಸಿದರು.
ಇದೇ ಸಂದರ್ಭ ರಾಜ್ಯಮಟ್ಟದ ಪ್ರಶಸ್ತಿಗೆ ಭಾಜನರಾದ ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭ ಮಾತನಾಡಿದ ಜಿಲ್ಲಾ ಗವರ್ನರ್ ಬಿ.ಎಂ.ಭಾರತಿ, ಜಿಲ್ಲೆಯ‌ ಲಯನ್ಸ್ ಕ್ಲಬ್ ಗಳ‌ ಪದಾಧಿಕಾರಿಗಳು ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ಮತ್ತಷ್ಟು ತೊಡಗಿಸಿಕೊಂಡು ಸಾಧನೆ ತೋರಬೇಕಿದೆ. ಈ ನಿಟ್ಟಿನಲ್ಲಿ ಎಲ್ಲರ ಶ್ರಮ ಅಗತ್ಯ. ಜಿಲ್ಲೆಯಲ್ಲಿ ಹೆಚ್ಚಿನ ಸದಸ್ಯತ್ವಕ್ಕೆ‌ ಕೂಡ ಎಲ್ಲರೂ ಒತ್ತು‌ ನೀಡಬೇಕಿದೆ.
ಮಕ್ಕಳನ್ನು ಸುಶಿಕ್ಷಿತರಾಗಿಸುವುದೇ ಅವರಿಗೆ ನೀಡುವ ನಿಜವಾದ ಸಂಪತ್ತು.‌ ಆಸ್ತಿ ಹೊಂದಿಸುವುದೇ ಪ್ರಮುಖ ಉದ್ದೇಶವಾಗದೆ ಮಕ್ಕಳಿಗೆ ಜವಾಬ್ದಾರಿ ಹಾಗೂ ಜೀವನ ಮೌಲ್ಯಗಳ‌ ಬಗ್ಗೆ ಅರಿವು ಮೂಡಿಸಬೇಕಿದೆ ಎಂದು ಕರೆ‌ ನೀಡಿದರು.

ಈ ಸಂದರ್ಭ ಕ್ಯಾಬಿನೆಟ್ ಕಾರ್ಯದರ್ಶಿ ಗೀತಾ ರಾವ್, ವಲಯ ಅಧ್ಯಕ್ಷರುಗಳಾದ ಸುಮನ್ ಬಾಲಚಂದ್ರ, ಬೊಳ್ಳಪ್ಪ, ಮಹದೇವಪ್ಪ, ರೀಜನ್ ಅಂಬಾಸಿಡರ್ ಮೋಹನ್ ದಾಸ್, ಕುಶಾಲನಗರ ಲಯನ್ಸ್ ಕ್ಲಬ್, ಕಾರ್ಯದರ್ಶಿ ನಿತಿನ್ ಗುಪ್ತ, ಖಜಾಂಚಿ ಎಂ.ಜಿ ಕಿರಣ್, ಮಡಿಕೇರಿ ಲಯನ್ಸ್ ಕ್ಲಬ್ ಅಧ್ಯಕ್ಷ ನಟರಾಜ್ ಕೆಸ್ತೂರ್, ಕಾರ್ಯದರ್ಶಿ ಮದನ್ ಮಾದಯ್ಯ, ಖಜಾಂಚಿ ಸೋಮಣ್ಣ, ಸುಂಟಿಕೊಪ್ಪ ಕ್ಲಬ್ ಅಧ್ಯಕ್ಷ ಶಶಾಂಕ್, ಕಾರ್ಯದರ್ಶಿ ಗ್ಲೆನ್ ನಿಶಾಂತ್, ಖಜಾಂಚಿ ಪ್ರೀತಮ್ ಪ್ರಭಾಕರ್, ಸೋಮವಾರಪೇಟೆ ಕ್ಲಬ್ ಅಧ್ಯಕ್ಷ ಸಿ.ಕೆ ಶಿವಕುಮಾರ್, ಕಾರ್ಯದರ್ಶಿ ಪದ್ಮಾಕರ್ ರಾಜ್ ಅರಸ್, ಖಜಾಂಚಿ ಜಗತ್ ಪ್ರಧಾನ್, ಕ್ಯಾಬಿನೆಟ್ ಮೆಂಬರ್ ಕೆ.ಅರ್.ಹರ್ಷ, ಮಾಜಿ ಅಧ್ಯಕ್ಷರುಗಳು, ನಾಲ್ಕು ಕ್ಲಬ್ ಸದಸ್ಯರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!