ಕುಶಾಲನಗರ, ಫೆ 16:ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ: 30-11-2024 ರಂದು ಬಿಟ್ಟಂಗಾಲ ಗ್ರಾಮದ ಅಂಚೆ ಕಛೇರಿಯ ಬಾಗಿಲು ಮುರಿದು ಖಜಾನೆ ಬಾಕ್ಸ್, ಸ್ಟಾಂಪ್‌ಗಳು, ಅಂಚೆ ಪಾಸ್ ಪುಸ್ತಕಗಳು ಮತ್ತು ಸಿಸಿಟಿವಿಯ ಡಿವಿಆರ್ ಅನ್ನು ಕಳವು ಮಾಡಿರುವ ಕುರಿತು ಹಾಗೂ ಬಿಟ್ಟಂಗಾಲ ಗ್ರಾಮದ ನಿವಾಸಿಯಾದ ಮಾಚಯ್ಯ ಎಂಬುವವರ ಮನೆಯ ಶೆಡ್ ನಲ್ಲಿ ನಿಲ್ಲಿಸಿದ್ದ ಕೆಎ-04-ಎನ್-5010 ಮಾರುತಿ ಓಮಿನಿ ವಾಹನ ಕಳ್ಳತನವಾಗಿರುವ ಬಗ್ಗೆ ದೂರು ಸ್ವೀಕರಿಸಿದ್ದು, ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡು ಅಧಿಕಾರಿ/ ಸಿಬ್ಬಂದಿಗಳು ಘಟನೆ ಸ್ಥಳಕ್ಕೆ ಭೇಟಿ ನೀಡಿ ಅಪರಾಧ ಕೃತ್ಯಕ್ಕೆ ಸಂಬಧಿಸಿದ ಮಾಹಿತಿ ಹಾಗೂ ಸಾಕ್ಷಾಧಾರಗಳನ್ನು ಕಲೆಹಾಕಲಾಗಿರುತ್ತದೆ.
ಸದರಿ ಪ್ರಕರಣಗಳ ಆರೋಪಿಗಳ ಪತ್ತೆಯ ಸಲುವಾಗಿ ಮಹೇಶ್ ಕುಮಾರ್, ಡಿಎಸ್ ಪಿ, ವಿರಾಜಪೇಟೆ ಉಪವಿಭಾಗ, ಅನೂಪ್ ಮಾದಪ್ಪ, ಸಿಪಿಐ, ವಿರಾಜಪೇಟೆ ವೃತ್ತ & ಲತಾ, ಪಿಎಸ್‌ಐ, & ವಾಣಿಶ್ರೀ, ಪಿಎಸ್‌ಐ, ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ ಉಪವಿಭಾಗ ಮಟ್ಟದ ಅಪರಾಧ ಪತ್ತೆ ಸಿಬ್ಬಂದಿಗಳು & ತಾಂತ್ರಿಕ ಸಿಬ್ಬಂದಿಗಳ ವಿಶೇಷ ತಂಡವನ್ನು ರಚಿಸಿ ತನಿಖೆ ಕೈಗೊಂಡು ಮಾಹಿತಿ ಸಂಗ್ರಹಿಸಿ ದಿನಾಂಕ: 10-02-2025 ರಂದು 03 ಜನ ಆರೋಪಿಗಳನ್ನು ದಸ್ತಗಿರಿ ಮಾಡಿ ಘನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ.
ಸದರಿ ಆರೋಪಿಗಳು ಗೋಣಿಕೊಪ್ಪ, ಭಾಗಮಂಡಲ, ಮಡಿಕೇರಿ ಗ್ರಾಮಾಂತರ ಹಾಗೂ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಚೆನ್ನ-ಬೆಳ್ಳಿ ಆಭರಣಗಳು, ದ್ವಿಚಕ್ರ ವಾಹನ ಹಾಗೂ ಮರ ಕುಯ್ಯುವ ಯಂತ್ರವನ್ನು ಕಳ್ಳತನ ನಡೆಸಿರುವುದು ತನಿಖೆಯಲ್ಲಿ ತಿಳಿದುಬಂದಿರುತ್ತದೆ.
ಆರೋಪಿಗಳ ವಿವರ:
1. ಕೆ.ಸಿ ಆಶೋಕ @ ಕುಡಿಯರ ಅಶೋಕ, 35 ವರ್ಷ, ನಾಲಡಿ, ಕಕ್ಕಟ್ಟೆ ಗ್ರಾಮ.
2. ಕೆ.ಪಿ.ಕೀರ್ತಿ, 25 ವರ್ಷ, ಅಯ್ಯಪ್ಪ ಕಾಲೋನಿ, ಕಿಬ್ಬೆಟ್ಟ ಗ್ರಾಮ ಸೋಮವಾರಪೇಟೆ.
3. ರಿಯಾಜ್ ಸಾಬು, 26 ವರ್ಷ, ರೇಂಜರ್ ಬ್ಲಾಕ್, ಸೋಮವಾರಪೇಟೆ,
ವಶಪಡಿಸಿಕೊಂಡ ಸ್ವತ್ತುಗಳ ವಿವರ:
1. ಸಿಸಿಟಿವಿ ಡಿವಿಆರ್ & ಖಜಾನೆ ಬಾಕ್ಸ್ ಮತ್ತು ರೂ.930/- ಮೌಲ್ಯದ ಸ್ಟಾಂಪ್‌ಗಳು
2. ಮಾರುತಿ ಓಮ್ನಿ.
3. 2 ದ್ವಿಚಕ್ರ ವಾಹನ.
4. ಮರ ಕುಯ್ಯುವ ಯಂತ್ರ,
5. 1 ಏರ್ ಗನ್
6. ಕಾಫಿ 200 ಕೆಜಿ.
7. ಕಾಳು ಮೆಣಸು 250 ಕೆ.ಜಿ
8. ಚಿನ್ನ 30 ಗ್ರಾಂ
9. ಬೆಳ್ಳಿ 229 ಗ್ರಾಂ
Back to top button
error: Content is protected !!