ಸಭೆ
ಕೊಡಗು ವಿವಿ ಉಳಿಸಿಕೊಳ್ಳಲು ಜಿಲ್ಲೆಯಿಂದ ಮುಖ್ಯಮಂತ್ರಿಗಳ ಬಳಿಗೆ ನಿಯೋಗ ತೆರಳಲು ತೀರ್ಮಾನ

ಕುಶಾಲನಗರ, ಫೆ 16 : ತಾಲ್ಲೂಕಿನ ಚಿಕ್ಕ ಅಳುವಾರ ಸ್ನಾತಕೋತ್ತರ ಕೇಂದ್ರದಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಆರಂಭಗೊಂಡ ಪ್ರತ್ಯೇಕ ಕೊಡಗು ವಿಶ್ವವಿದ್ಯಾಲಯವನ್ನು ಯಾವುದೇ ಕಾರಣಕ್ಕೂ ಮುಚ್ಚದಂತೆ ಸರ್ಕಾರವನ್ನು ಒತ್ತಾಯಿಸಲು ಭಾನುವಾರ ನಡೆದ ಕೊಡಗು ವಿಶ್ವವಿದ್ಯಾಲಯ ಹಿತರಕ್ಷಣಾ ಬಳಗದ ಸಭೆಯಲ್ಲಿ ನೂತನ ಹೋರಾಟ ಸಮಿತಿಯನ್ನು ರಚನೆ ಮಾಡಲಾಯಿತು.ಸ ಮೀಪದ ಚಿಕ್ಕ ಅಳುವಾರ ಗ್ರಾಮದ ಅಳುವಾರದಮ್ಮ ದೇವಾಲಯ ಸಮುದಾಯ ಭವನದಲ್ಲಿ ಕೊಡಗು ವಿಶ್ವ ವಿದ್ಯಾನಿಲಯ ಹಿತರಕ್ಷಣಾ ಬಳಗದ ಅಧ್ಯಕ್ಷ ಕೆ.ಎಸ್.ಕೃಷ್ಣೇಗೌಡ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೊಡಗು ವಿವಿ ಉಳಿಸಲು ಜಿಲ್ಲಾಮಟ್ಟದಲ್ಲಿ ಹೋರಾಟ ರೂಪಿಸಲು ಹಾಗೂ ಸರ್ಕಾರದ ಬಳಿಗೆ ನಿಯೋಗ ತೆರಳಲು ಪಕ್ಷಾತೀತವಾಗಿ ಹಂತ ಹಂತವಾಗಿ ಹೋರಾಟ ನಡೆಸಲು ಚಾಲನ ಸಮಿತಿಯನ್ನು ರಚನೆ ಮಾಡಲಾಯಿತು.ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ ಸಚಿವ ಸಂಪುಟದ ಉಪಸಮಿತಿಯಲ್ಲಿ ಬೀದರ್ ಹೊರತುಪಡಿಸಿ 9 ನೂತನ ವಿವಿಗಳನ್ನು ಮುಚ್ಚಲು ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ.ಆದರೆ ಕೊಡಗು ಗುಡ್ಡಗಾಡು ಪ್ರದೇಶವಾಗಿದ್ದು, ಪ್ರತ್ಯೇಕ ಮಾನದಂಡದಲ್ಲಿ ಕೊಡಗು ವಿಶ್ವ ವಿದ್ಯಾನಿಲಯ ಮುಂದುವರೆಸಬೇಕು.ಕೊಡಗು ವಿವಿ ನಮ್ಮ ಆತ್ಮಗೌರವದ ಪ್ರಶ್ನೆಯಾಗಿದೆ.ಕೊಡಗು ವಿವಿಗೆ ಯಾವುದೇ ತಾಂತ್ರಿಕ ಅಡಚಣೆ ಇಲ್ಲ.ಎಲ್ಲ ಮೂಲಭೂತ ಸೌಕರ್ಯ ಗಳೊಂದಿಗೆ ನೂತನ ವಿವಿ ರಚನೆ ಆಗಿದೆ.ಎಲ್ಲಾ ಮಾನದಂಡವನ್ನು ಹೊಂದಿದೆ.ಆಡಳಿತ್ಮಾಕವಾಗಿ ವಿಭಜನೆ. ಸಿಬ್ಬಂದಿಗಳು ನೇಮಕವಾಗಿದೆ.ಮಂಗಳೂರು ವಿವಿ ಯಿಂದ ಸಂಬಳ ಬರುತ್ತಿತ್ತು.ಸರ್ಕಾರದ ಅನುದಾನ ಇಲ್ಲದೆ ವಿವಿ ನಡೆಯುತ್ತಿದೆ.ಜೊತೆಗೆ ನೂರು ಎಕರೆ ಪ್ರದೇಶವನ್ನು ಹೊಂದಿದೆ.ನೂತನ ಕುಲಪತಿಗಳು ಯಾವುದೇ ಅನುದಾನವಿಲ್ಲದೆ ವಿವಿಯನ್ನು ಮುನ್ನಡೆಸುತ್ತಿದ್ದಾರೆ.ನಮ್ಮ ಜಿಲ್ಲೆಯ ವಿದ್ಯಾರ್ಥಗಳ ಶೈಕ್ಷಣಿಕ ಪ್ರಗತಿಗಾಗಿ ಕೊಡಗು ವಿವಿ ಅನಿವಾರ್ಯವಾಗಿದ್ದು, ವಿವಿ ಉಳಿಸಲು ಸಂಘಟಿತ ಹೋರಾಟ ನಡೆಸಬೇಕು ಎಂದರುಸಮಾಜ ಸೇವಕ ನಾಪಂಡ ಮುತ್ತಪ್ಪ ಮಾತನಾಡಿ,ನೂತನ ವಿವಿಗಳಿಗೆ ಬಜೆಟ್ ನಲ್ಲಿ ಯಾವುದೇ ಅನುದಾನ ಘೋಷಣೆ ಮಾಡಿಲ್ಲ.ಕೊಡಗು ವಿವಿಗೆ ರೂ.3 ಕೋಟಿ ಅನುದಾನ ಬೇಕು.ಬೀದರ್ ಬಿಟ್ಟು ಉಳಿದ 9 ವಿಶ್ವ ವಿದ್ಯಾನಿಲಯ ಮುಚ್ಚಲು ತೀರ್ಮಾನ ಕೈಗೊಂಡಿರುವುದು ದುರದೃಷ್ಟಕರ. ಸರ್ಕಾರ ದಸರಾ, ಕ್ರೀಡಾಕೂಟಗಳಿಗೆ ಅನುದಾನ ನೀಡುತ್ತದೆ. ಆದರೆ ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡುವ ಹಾಗೂ ಅವರ ಶೈಕ್ಷಣಿಕ ಪ್ರಗತಿಯೊಂದಿಗೆ ಭವಿಷ್ಯ ರೂಪಿಸುವ ವಿವಿಗಳಿಗೆ ಅನುದಾನ ನೀಡಲು ಮೀನಾ ಮೇಷ ಎಣಿಸುತ್ತಿರುವುದು ಸರಿಯಲ್ಲ.ವಿವಿ ಮುಚ್ಚುವ ನಿರ್ಧಾರ ಕೈಬಿಡಬೇಕು.ವಿವಿಯೊಂದಿಗೆ ಭಾವನಾತ್ಮಕ ಸಂಬಂಧ ಇದೆ ಕೊಡಗಿನಲ್ಲಿ ವಿವಿ ಉಳಿಯಬೇಕು. ಉಳಿಸುವ ಪ್ರಯತ್ನ ಮಾಡಬೇಕು ಎಂದರು.ಮಾಜಿ ಸೆನೆಟ್ ಸದಸ್ಯಡಿ.ಆರ್.ಪ್ರೇಮ್‌ಕುಮಾರ್ ಮಾತನಾಡಿ, ಸರ್ಕಾರಿ ಜಾಗವನ್ನು ಕೆಲವು ವ್ಯಕ್ತಿಗಳು ಅತಿಕ್ರಮಣ ಮಾಡಲು ಯತ್ನಿಸಿದಾಗ ಸಂಘಟಿತ ಹೋರಾಟ ನಡೆಸಿ ಜಾಗವನ್ನು ಉಳಿಸಿದ್ದೇವೆ.ಇದೇ ಜಾಗದಲ್ಲಿ ಈಗ ಸ್ನಾತಕೋತ್ತರ ಕೇಂದ್ರ ಹಾಗೂ ಕೊಡಗು ವಿವಿ ಸ್ಥಾಪನೆಯಾಗಿದೆ.ಇದರಿಂದ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಮನೆ ಬಾಗಿಲಲ್ಲಿ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗಿದೆ ಎಂದರು.ತೊರೆನೂರು ಗ್ರಾಮ ಪಂಚಾಯತಿ ಸದಸ್ಯ ದೇವರಾಜ್ ಮಾತನಾಡಿ ಕೊಡಗು ವಿವಿ ಉಳಿಸಲು ಶಾಸಕರು ಹೆಚ್ಚಿನ ಒತ್ತು ನೀಡಬೇಕು. ವಿವಿ ಉಳಿಸಲು ಶಿಕ್ಷಣ ತಜ್ಞ, ಸಂಘಸಂಸ್ಥೆಗಳ ಮುಖಂಡರು ಹೋರಾಟ ಕೈಜೋಡಿಸಬೇಕು ಎಂದರು.ಹೆಬ್ಬಾಲೆ ಗ್ರಾಮದ ಮುಖಂಡ ಎಚ್.ಕೆ.ನಟೇಶ್ ಗೌಡ ಮಾತನಾಡಿ, ಕೊಡಗಿನ ಮಟ್ಟದಲ್ಲಿ ಹೋರಾಟ ನಡೆಸಬೇಕು.ಮಂಗಳೂರು ವಿವಿ ವ್ಯಾಪ್ತಿಗೆ ಮತ್ತೆ ಸೇರ್ಪಡೆ ಮಾಡಲು ಅವಕಾಶ ನೀಡಬಾರದು.ಇದು ಪ್ರತ್ಯೇಕ ವಿವಿ ಆಗಿ ಕೊಡಗಿನಲ್ಲಿಯೇ ಉಳಿಸಬೇಕು.ಇದಕ್ಕಾಗಿ ಸಂಘಟಿತ ಹೋರಾಟ ನಡೆಸಬೇಕು ಎಂದರು.ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ದೀಪಕ್ ಮಾತನಾಡಿ, ವಿವಿ ಉಳಿವಿಗಾಗಿ ಎಲ್ಲಾ ರೀತಿಯ ಹೋರಾಟಕ್ಕೆ ನಮ್ಮ ಸಂಘಟನೆಯ ಬೆಂಬಲ ಇದೆ. ಕೊಡಗು ಬಂದ್ ಕೂಡ ಮಾಡಲು ನಾವು ಸಿದ್ದರಾಗಿದ್ದೇವೆ ಎಂದರು.ತೊರೆನೂರು ವಿ.ಎಸ್.ಎಸ್.ಎನ್.ನಿರ್ದೇಶಕ ಎಚ್.ಬಿ.ಚಂದ್ರಪ್ಪ ಮಾತನಾಡಿ, ಪಕ್ಷಾತೀತ ಹೋರಾಟ ನಡೆಸಬೇಕು.ಸರ್ಕಾರದ ಮೇಲೆ ಒತ್ತಡ ಹಾಕಬೇಕು.ಕೊಡಗು ವಿಶ್ವವಿದ್ಯಾಲಯ ಹಿತರಕ್ಷಣಾ ಬಳಗದ ಅಧ್ಯಕ್ಷ ಕೆ.ಎಸ್.ಕೃಷ್ಣೇಗೌಡ ಅಧ್ಯಕ್ಷತೆ ವಹಿಸಿದ್ದರು.ಈ ಸಂದರ್ಭ ಅಳುವಾರದಮ್ಮ ದೇವಾಲಯ ಸಮಿತಿ ಅಧ್ಯಕ್ಷ ರಮೇಶ್,ತೊರೆನೂರು ಗ್ರಾಮ ಪಂಚಾಯತಿ ಅಧ್ಯಕ್ಷ ಶೋಭಾ ಪ್ರಕಾಶ್,ಉಪಾಧ್ಯಕ್ಷ ಬೇಬಿ,ಹೆಬ್ಬಾಲೆ ಗ್ರಾಮ ಪಂಚಾಯತಿ ಅಧ್ಯಕ್ಷ ಅರುಣಾಕುಮಾರಿ,ಸದಸ್ಯರಾದ ಮಹಾದೇವ್,ನಿಂಗಜಮ್ಮ, ದೇವಾಲಯ ಸಮಿತಿ ಅಧ್ಯಕ್ಷ ಎ.ಎನ್.ರಮೇಶ್ ಮುಖಂಡರಾದ ಎಸ್.ಎಸ್.ಚಂದ್ರಶೇಖರ್, ರಮೇಶ್,ಟಿ.ಕೆ.ಪಾಂಡುರಂಗ, ಲೋಕೇಶ್ ಸಾಗರ್,ಗಣೇಶ್,ಲೋಕೇಶ್,ಟಿ.ಪಿ.ಜಗದೀಶ್, ರಮೇಶ್,ಶಾಂತಿ,ಗೀತಾಧರ್ಮಪ್ಪ,ಅಜ್ಜಳ್ಳಿ ರವಿ,ಬಸಪ್ಪ,ಶಿವಪ್ಪ, ಉಮೇಶ್,ವಿಎಸ್ಎಸ್ಎನ್ ನಿರ್ದೇಶಕ ಎಚ್.ಸಿ.ಮೂರ್ತಿ ಮತ್ತಿತರರು ಪಾಲ್ಗೊಂಡಿದ್ದರು.