ಕುಶಾಲನಗರ, ಫೆ 13: ಗುಡ್ಡೆ ಹೊಸೂರು ಸಮೀಪದಲ್ಲಿರುವ ಸೋಮವಾರಪೇಟೆ ತಾಲ್ಲೂಕು ಗಿರಿಜನ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಯಲ್ಲಿ ಇಂದು ನಡೆಯಿತು. ಮಾಜಿ ಅಧ್ಯಕ್ಷ ಅರುಣ್ ರಾವ್ ನೇತೃತ್ವದ 10 ಮಂದಿ ತಂಡ ಜಯಗಳಿಸಿದೆ. ಒಟ್ಟು 10 ಮಂದಿಯ ನಿರ್ದೇಶಕರ ಆಯ್ಕೆ ಪ್ರಕ್ರಿಯೆಗೆ ಚುನಾವಣೆ ನಡೆಯಿತು ಅದರಲ್ಲಿ ಸೋಮವಾರಪೇಟೆ ವಲಯ ಮತ್ತು ಕುಶಾಲನಗರ ವಲಯದ ಒಟ್ಟು 20. ಮಂದಿ ಆಭ್ಯರ್ಥಿಗಳು ಕಣದಲ್ಲಿದರು. ಚುನಾವಣೆಯಲ್ಲಿ ಒಟ್ಟು 177 ಮತದಾರರಿದ್ದು, ಅದರಲ್ಲಿ 174 ಮತಗಳು ಚಲಾವಣೆಗೊಂಡಿದವು. ಇದರಲ್ಲಿ ಎರಡು ಮತಗಳು ತಿರಸ್ಕರಗೊಂಡಿದವು. ಚುನಾವಣಾ ಪ್ರಕ್ರಿಯೆ ಮುಗಿದ ನಂತರ ಸಂಘದ ಸಭಾಂಗಣದಲ್ಲಿ ಮತ ಎಣಿಕೆಯ ಪ್ರಕ್ರಿಯೆ ಆರಂಭಗೊಂಡಿತು. ಇದರಲ್ಲಿ ಸೋಮವಾರಪೇಟೆ ವಲಯದಿಂದ ಎಸ್. ಆರ್. ಅರುಣ್ ರಾವ್, ಉದಯಕುಮಾರ್, ಗಂಗಾಧರ್, ಶ್ಯಾಮ್, ದೇವಿರಮ್ಮ, ಕುಶಾಲನಗರ ವಲಯ ವಿಭಾಗದಿಂದ ಕಾಳಯ್ಯ, ಬಿ. ಎಸ್. ಚಂದ್ರು, ಕಮಲ, ಜಿ.ಕೆ.ರಾಜು, ಕಾವೇರಿ ಜಯಗಳಿಸಿದರು. ವಿಜೇತ ತಂಡದವರಿಂದ ಕುಶಾಲನಗರ ಮತ್ತು ಕೂಡಿಗೆಯಲ್ಲಿ ವಿಜಯೋತ್ಸವ ಆಚರಿಸಲಾಯಿತು. ಬೆಂಬಲಿಗರು, ಕಾಂಗ್ರೆಸ್ ಮುಖಂಡರು ಪಟಾಕಿ ಸಿಡಿಸಿ ವಿಜಯೋತ್ಸವನ್ನು ಆಚರಿದರು. ಈ ಸಂದರ್ಭದಲ್ಲಿ ತಾಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ರಾಮೇಶ್ವರ ಕೂಡುಮಂಗಳೂರು ಸಹಕಾರ ಸಂಘದ ಅಧ್ಯಕ್ಷ ಕೆ.ಕೆ. ಹೇಮಂತ್ ಕುಮಾರ್, ಕೂಡಿಗೆ ಗ್ರಾಮ ಪಂಚಾಯತಿ ಸದಸ್ಯರಾದ ಅನಂತ, ಶಿವಕುಮಾರ್, ಕೂಡಿಗೆ ಸಹಕಾರ ಸಂಘದ ನಿರ್ದೇಶಕ ಕೆ. ಪಿ. ರಾಜು ಮದಲಾಪುರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸುನಿಲ್ ರಾವ್, ಗ್ರಾಮದ ಪ್ರಮುಖರಾದ ಕೆ.ಸಿ. ರಾಜು. ಮದಲಾಪುರ ನಾಗೇಶ್, ರಂಗ, ಸಂತೋಷ್, ನಾಗರಾಜು, ಮಲ್ಲೇಶ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.
Back to top button
error: Content is protected !!