ಕುಶಾಲನಗರ, ಫೆ 08: ಮಡಿಕೇರಿ ಅರಣ್ಯದ ಮೇಲೆ ನಗರೀಕರಣದ ಪರಿಣಾಮ ಎಂಬ ಪ್ರಬಂಧಕ್ಕೆ ಕುಶಾಲನಗರದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಹೆಚ್.ಎ.ಚಿಂತನಾ ಎಂಬವರಿಗೆ ಹರಿಯಾಣದ ಅಮೇಥಿ ವಿಶ್ವವಿದ್ಯಾಲಯ ಒಂದು ಲಕ್ಷ ರೂಗಳ ನಗದು ನೀಡಿ ಗೌರವಿಸಿದೆ.
ಕುಶಾಲನಗರದ ಉದ್ಯಮಿ ಹೆಚ್.ಎಸ್.ಅಶೋಕ್ ಹಾಗೂ ಸುಮಾ ದಂಪತಿಗಳ ಪುತ್ರಿಯಾಗಿರುವ ಚಿಂತನಾ ಹರಿಯಾಣದ ಅಮೇಥಿಯ ವಿಶ್ವವಿದ್ಯಾಲಯದಲ್ಲಿ ಮಾಸ್ಟರ್ ಆಫ್ ಪ್ಲಾನಿಂಗ್ ಅರ್ಬನ್ ಹಾಗೂ ರೀಜನಲ್ ಎಂಬ ಕೋರ್ಸ್ ಪೂರ್ಣಗೊಳಿಸಿದ್ದು ಇಡೀ ವಿಶ್ವವಿದ್ಯಾಲಯಕ್ಕೆ ಮೊದಲ ಸ್ಥಾನದಲ್ಲಿ ಸಾಧನೆ ತೋರಿದ ಕಾರಣ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಗಾಳಿಬೀಡು ನವೋದಯ ಶಾಲೆಯಲ್ಲಿ ಪ್ರೌಢ ಶಿಕ್ಷಣ ಮುಗಿಸಿದ ಚಿಂತನಾ, ಮಂಗಳೂರಿನ ನಿಟ್ಟೆ ಕಾಲೇಜಿನಲ್ಲಿ ಬಿಇ ಆರ್ಟಿಟೆಕ್ಚರ್ ಪದವಿ ಪೂರೈಸಿದ್ದರು.
ಬಳಿಕ ಹರಿಯಾಣದ ಅಮೇಥಿ ವಿಶ್ವವಿದ್ಯಾಲಯದಲ್ಲಿ ಎರಡು ವರ್ಷಗಳ ಉನ್ನತ ಶಿಕ್ಷಣದಲ್ಲಿ ಪ್ರಥಮ ಹಂತದಲ್ಲಿ ತೇರ್ಗಡೆಯಾದ ಕಾರಣ ದೆಹಲಿಯ ಮನೇಕ್ಷಾ ಸೆಂಟರ್ ಆಡಿಟೋರಿಯಂ ನಲ್ಲಿ ನಡೆದ ಕಾರ್ಯಕ್ರಮದಲ್ಲಿ
ಇವರ ಸಾಧನೆಗೆ ಚಿನ್ನದ ಪದಕ ನೀಡಿ ಗೌರವಿಸಲಾಗಿದೆ.
Back to top button
error: Content is protected !!