ಚುನಾವಣೆ

ಟಿ.ಆ‌ರ್. ಶರವಣಕುಮಾ‌ರ್ ನೇತೃತ್ವದ ಪಕ್ಷಾತೀತ ತಂಡದಿಂದ‌ ಬಿರುಸಿನ ಚುನಾವಣಾ ಪ್ರಚಾರ

ಕುಶಾಲನಗರ, ಡಿ 29: ಕುಶಾಲನಗರದ ನಂ.122ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2025 ರಿಂದ 2030 ರವರೆಗಿನ ಆಡಳಿತ ಮಂಡಳಿಗೆ ನಡೆಯುವ ಚುನಾವಣೆಗೆ ಭರದ ಪ್ರಚಾರ ನಡೆಯುತ್ತಿದೆ.

ಸಂಘದ ಹಾಲಿ ಅಧ್ಯಕ್ಷ .ಆ‌ರ್ ಶರವಣಕುಮಾ‌ರ್ ನೇತೃತ್ವದ ಪಕ್ಷಾತೀತ ತಂಡದ ಸದಸ್ಯರು ಮತದಾರರ ಮನೆಗಳಿಗೆ‌ ಭೇಟಿ ನೀಡಿ ಮತಯಾಚನೆಯಲ್ಲಿ ತೊಡಗಿದ್ದಾರೆ.

ಶತಮಾನೋತ್ಸವ ಭವನ ನಿರ್ಮಾಣ ಕಾರ್ಯವನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿ ರಾಜ್ಯದ ಮುಖ್ಯಮಂತ್ರಿಗಳೂ ಸಹಕಾರ ಮಂತ್ರಿಗಳೂ, ಇನ್ನಿತರರಿಂದ ವಿಜೃಂಭಣೆಯಿಂದ ಉದ್ಘಾಟನೆ ಮಾಡಿಸುವುದು.

ಶತಮಾನೋತ್ಸವ ಭವನದ 2 ಸಭಾ ಭವನಗಳ ಬಾಡಿಗೆದರದಲ್ಲಿ ಸಂಘದ ಸದಸ್ಯರುಗಳ ಕಾರ್ಯಕ್ರಮಗಳಿಗೋಸ್ಕರ ರಿಯಾಯಿತಿ ನೀಡುವುದು.

ಮುಂದಿನ ಐದು ವರ್ಷಗಳಲ್ಲಿ ಸಂಘದ ದುಡಿಯುವ ಬಂಡವಾಳವನ್ನು 100 ಕೋಟಿಗಳಿಗೆ ಹೆಚ್ಚಿಸಿ ಸಂಘದ ವಹಿವಾಟನ್ನು 500 ಕೋಟಿಗಳಿಗೆ ಹೆಚ್ಚಿಸುವ ಗುರಿ.

ಸಂಘದ ಎಲ್ಲಾ ರೀತಿಯ ಠೇವಣಿಗಳ ಮೊತ್ತವನ್ನು ಈಗಿರುವ 55 ಕೋಟಿಯಿಂದ 80 ಕೋಟಿಗಳಿಗೆ ಹೆಚ್ಚಿಸುವುದು.

ಸಂಘದಲ್ಲಿ ಈಗಾಗಲೇ ನೀಡುತ್ತಿರುವ ಎಲ್ಲಾ ಸಾಲಗಳ ಮಿತಿಯನ್ನು ಹೆಚ್ಚಿಸುವುದು.

ಸಂಘವು ಈಗ ನೀಡಿರುವ ಒಟ್ಟು 42.66 ಕೋಟಿಗಳಷ್ಟೂ ಸಾಲವನ್ನು 80 ಕೋಟಿಗಳಿಗೆ ಹೆಚ್ಚಿಸುವುದು.

ಸಂಘದಲ್ಲಿ ಈಗಾಗಲೇ ಸದಸ್ಯರಿಗೆ ನೀಡುತ್ತಿರುವ ಅನೇಕ ಸೌಲಭ್ಯಗಳನ್ನು ಹೆಚ್ಚಿಸುವುದು.

ಸಂಘದ ಸ್ಥಿರಾಸ್ತಿಗಳನ್ನು 7.55 ಕೋಟಿಯಿಂದ 30 ಕೋಟಿಗಳಿಗೆ ಹೆಚ್ಚಿಸುವುದು.

ಸಂಘದ ಮರಣೋತ್ತರ ಸಾಲ ಪರಿಹಾರ ನಿಧಿ ಮತ್ತು ಮರಣ ನಿಧಿ ಮೊತ್ತಗಳನ್ನು ಹೆಚ್ಚಿಸುವುದು.

ಸಂಘವು ಆರ್ಥಿಕವಾಗಿ ಸಧೃಡವಾಗಿ ಮುಂದುವರೆಯಲು ಎಲ್ಲಾ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.

ಸಂಘದ ಎಲ್ಲಾ ಸದಸ್ಯರಿಗೂ ಸೂಕ್ತ ವಿಮಾ ಸೌಲಭ್ಯ ಒದಗಿಸುವುದು.

ಸಂಘದ ಶತಮಾನೋತ್ಸವ ಭವನ ನಿರ್ಮಾಣಕ್ಕೆ ದೊಡ್ಡ ಮೊತ್ತವನ್ನು ಹೂಡಿಕೆ ಮಾಡಿದ ನಂತರವು ಸಂಘವನ್ನು ನಿರಂತರವಾಗಿ ಲಾಭದಲ್ಲಿ ಕೊಂಡೊಯ್ಯುವುದು.

ಸಂಘದಲ್ಲಿ ನೂತನವಾಗಿ ಸದಸ್ಯರ ಮಕ್ಕಳ ಹೆಚ್ಚಿನ ವ್ಯಾಸಂಗಕ್ಕಾಗಿ ವಿದ್ಯಾಭ್ಯಾಸ ಸಾಲ ಹಾಗೂ ಇನ್ನಿತರ ನೂತನ ಸಾಲ ಯೋಜನೆಗಳನ್ನು ನೀಡಲು ಕ್ರಮ ಕೈಗೊಳ್ಳುವ ಮುಂದಿನ ಯೋಜನೆಗಳನ್ನು ಈ ತಂಡ ಹೊಂದಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!