ಕುಶಾಲನಗರ, ಡಿ 29: ಜಮ್ಮು ಕಾಶ್ಮೀರದ ಪೂಂಚ್ ನಲ್ಲಿ ಸೇನೆಯ ವಾಹನ ಅಪಘಾತದಲ್ಲಿ ಗಂಭೀರ ಗಾಯಗೊಂಡು ಶ್ರೀನಗರದ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೋಮವಾರಪೇಟೆ ತಾಲೂಕಿನ ಆಲೂರು ಸಿದ್ದಾಪುರ ಸಮೀಪದ ಮಾಲಂಬಿ ಗ್ರಾಮದ ಯೋಧ ಪಿ.ಪಿ. ದಿವಿನ್ (28) ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ರಾತ್ರಿ ಕೊನೆಯುಸಿರು ಎಳೆದ್ದಿದ್ದಾರೆ.
ಡಿ 26 ರಂದು ಮುಂಚಾನೆ ಜಮ್ಮು ಕಾಶ್ಮೀರದ ಪೂಂಚ್ ನಲ್ಲಿ ಸೇನೆಯ ವಾಹನ ಅಪಘಾತವಾಗಿತ್ತು. ದಿವಿನ್ ತಾಯಿ ಜಯಲಕ್ಷ್ಮಿ ಶ್ರೀನಗರ ಮಿಲಿಟರಿ ಆಸ್ಪತ್ರೆಗೆ ತೆರಳಿದ್ದರು. ಶನಿವಾರ ಚಿಂತಾಜನಕ ಸ್ಥಿತಿಯಲ್ಲಿದ್ದ ದಿವಿನ್ ತಾಯಿಯ ಕೂಗಿಗೆ ಕಣ್ಣೀರಿನ ಮೂಲಕ ಸ್ಪಂದಿಸಿದ್ದರು. ಗ್ರಾಮಸ್ಥರ ಪಾರ್ಥನೆ, ವೈದ್ಯರ ಚಿಕಿತ್ಸೆ ಫಲಕಾರಿಯಾಗದೆ ದಿವಿನ್ ಕೊನೆಯುಸಿರೆಳೆದ್ದಿದಾರೆ.
Back to top button
error: Content is protected !!