ಕುಶಾಲನಗರ, ಡಿ 26: ಕುಶಾಲನಗರದ ನಂ.122 ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಜನವರಿಯಲ್ಲಿ ಚುನಾವಣೆ ನಡೆಯಲಿದ್ದು ಹಾಲಿ ಟಿ.ಆರ್.ಶರವಣಕುಮಾರ್ ನೇತೃತ್ವದ ತಂಡ ನಾಮಪತ್ರ ಸಲ್ಲಿಕೆ ಮಾಡಿತು.
ಹಾಲಿ ಆಡಳಿತ ಮಂಡಳಿ ಅಧ್ಯಕ್ಷರಾದ ಟಿ.ಆರ್.ಶರವಣಕುಮಾರ್ ನೇತೃತ್ವದಲ್ಲಿ ಪಕ್ಷಾತೀತ ತಂಡವನ್ನು ಕಟ್ಟಿಕೊಂಡು ಹಾಲಿ ಉಪಾಧ್ಯಕ್ಷ ವಿ.ಎಸ್.ಆನಂದಕುಮಾರ್ ಒಳಗೊಂಡಂತೆ ಸಂಘದ ಬಹುತೇಕ ಹಾಲಿ ನಿರ್ದೇಶಕರು ಮತ್ತೆ ಚುನಾವಣಾ ಕಣಕ್ಕೆ ಧುಮುಕಿದ್ದಾರೆ.
ಸಾಲಗಾರರ ಸದಸ್ಯರ ಕ್ಷೇತ್ರದಿಂದ 12 ಅಭ್ಯರ್ಥಿಗಳು ಹಾಗೂ ಸಾಲಗಾರರಲ್ಲದ ಕ್ಷೇತ್ರದಿಂದ 1 ಅಭ್ಯರ್ಥಿ ಸೇರಿದಂತೆ ಒಟ್ಟು 13 ಅಭ್ಯರ್ಥಿಗಳು ತಮ್ಮ ಅಪಾರವಾದ ಬೆಂಬಲಿಗರು ಮತ್ತು ವಿವಿಧ ಪಕ್ಷದ ಮುಖಂಡರ ಜೊತೆಯಲ್ಲಿ ಆಗಮಿಸಿ ನಾಮಪತ್ರವನ್ನು ಸಲ್ಲಿಸಿದರು.
ಈ ಸಂದರ್ಭ ಮಾತನಾಡಿದ ಸಂಘದ ಹಾಲಿ ಅಧ್ಯಕ್ಷ ಟಿ.ಆರ್.ಶರವಣಕುಮಾರ್, ಸದಸ್ಯರ ಆರ್ಶಿವಾದದಿಂದ ನಮ್ಮ ತಂಡವು ಸಂಘವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದು ,ಸಂಘದ ಶತಮಾನೋತ್ಸವನ್ನು ಅಚ್ಚುಕಟ್ಟಾಗಿ ನಡೆಸಿ ರಾಜ್ಯದ ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ ರೂ.16.50 ಕೋಟಿ ವೆಚ್ಚದಲ್ಲಿ ಶತಮಾನೋತ್ಸವ ಭವನ ನಿರ್ಮಾಣದ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಸಂಘದ ಸದಸ್ಯರಿಗೆ ಸಾಲದ ವ್ಯವಸ್ಥೆ, ರೈತರಿಗೆ ನೀಡುತ್ತಿರುವ ಸಹಕಾರ, ಸಂಘದ ಸದಸ್ಯರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ಧನ, ಸಂಘದ ಅಭಿವೃದ್ಧಿಗೆ ಕೈಗೊಂಡ ಹತ್ತು ಹಲವು ಕಾರ್ಯಗಳು ನಮ್ಮ ಕೈಹಿಡಿಯಲಿದೆ. ಈ ಬಾರಿ ಸಂಘದ ಸದಸ್ಯರು ನಮ್ಮ ಪಕ್ಷಾತೀತ ತಂಡಕ್ಕೆ ಸಂಪೂರ್ಣ ಮತವನ್ನು ನೀಡುವ ಮೂಲಕ ಮತ್ತೊಮ್ಮೆ ಗೆಲುವು ಸಾಧಿಸಿ ಸಂಘದ ಅಭಿವೃದ್ಧಿಗೆ ತೊಡಗಿಸಿಕೊಳ್ಳಲು ಅವಕಾಶ ಕಲ್ಪಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾಮ ಪತ್ರ ಸಲ್ಲಿಕೆ ಸಂದರ್ಭದಲ್ಲಿ ವಿವಿಧ ಪಕ್ಷದ ಮುಖಂಡರು ,ಕಾರ್ಯಕರ್ತರು, ಸಂಘದ ಸದಸ್ಯರು ಹಾಗೂ ಹಿತೈಷಿಗಳು ಇದ್ದರು.
Back to top button
error: Content is protected !!