ಕುಶಾಲನಗರ, ಡಿ 25: ಕುಶಾಲನಗರ ತಾಲೂಕಿನಲ್ಲಿ ಗೋಕಳ್ಳರ ಹಾವಳಿ ಮಿತಿಮೀರಿದೆ. ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ಹಸುವೊಂದನ್ನು ದುಷ್ಕರ್ಮಿಗಳು ಅಪಹರಿಸಿದ ಘಟನೆ ನಡೆದಿದೆ.
ಪುರಸಭೆ ಸದಸ್ಯ ಜಿ.ಬಿ.ಜಗದೀಶ್ ಅವರ ಹಸುವನ್ನು ಕರಿಯಪ್ಪ ಬಡಾವಣೆ ವ್ಯಾಪ್ತಿಯಿಂದ ಅಪಹರಿಸಲಾಗಿದೆ. ಸಮೀಪದ ಮನೆಗಳ ಸಿಸಿ ಕ್ಯಾಮೆರ ಪರಿಶೀಲಿಸಿದಾಗ ರಿಡ್ಜ್ ಕಾರೊಂದು ತಡರಾತ್ರಿ ಸಂಚರಿಸಿರುವ ದೃಶ್ಯ ಕಂಡುಬಂದಿದೆ. ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯಲ್ಲಿ ಕೂಡ ಗೋಕಳ್ಳರು ರಿಡ್ಜ್ ಕಾರಿನಲ್ಲಿ ಆಗಮಿಸಿ ಹಸುಗಳ ಅಪಹರಣ ನಡೆಸಿದ ದೃಶ್ಯಗಳು ಸೆರೆಯಾಗಿದ್ದವು. ಇದೀಗ ಕುಶಾಲನಗರದಲ್ಲಿ ಕೂಡ ಇದು ಮರುಕಳಿಸಿದೆ. ಈ ಸಂಬಂಧ ಪೊಲೀಸ್ ಇಲಾಖೆ ಸೂಕ್ತ ಕ್ರಮವಹಿಸಬೇಕಿದೆ ಎಂದು ಜಿಬಿ ಜಗದೀಶ್ ಒತ್ತಾಯಿಸಿದ್ದಾರೆ. ಹಸು ಕಾಣೆಯಾಗಿರುವ ಕುರಿತು ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದಾರೆ.
Back to top button
error: Content is protected !!