ಕುಶಾಲನಗರ,ಡಿ 25:ಕುಶಾಲನಗರದ ಬ್ರಾಹ್ಮಣ ಕ್ಷೇಮಾಭಿವೃದ್ದಿ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಕೆ.ಎಸ್.ರಾಜಶೇಖರ್ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಸಂಘದ ಸಾಧಕ ಬಾಧಕಗಳು ಹಾಗೂ ಸಮಾಜದ ಶ್ರೇಯೋಭಿವೃದ್ದಿಗೆ ಚರ್ಚೆ ನಡೆಸಲಾಯಿತು.
ಇದೇ ಸಂದರ್ಭ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳು ಹಾಗೂ ಹಿರಿಯ ಸಾಧಕರನ್ನು ಗುರುತಿಸಿ ಗೌರವಿಸಲಾಯಿತು.
ಈ ಸಂದರ್ಭ ಹಿರಿಯ ಸಾಹಿತಿ ಭಾರಧ್ವಜ್ ಆನಂದ ತೀರ್ಥ, ನಿವೃತ್ತ ಶಿಕ್ಷಕ ಪ್ರಮಥನಾಥನ್ ಹಾಗೂ ವಾಲ್ನೂರು ಶಶಿಧರ್ ಅವರನ್ನು ಗೌರವಿಸಲಾಯಿತು. ಈ ಸಂದರ್ಭ ಸಮಾಜದ ಪ್ರಮುಖರಾದ ಬಿ.ಆರ್.ನಾರಾಯಣ, ವಕೀಲರಾದ ಆರ್.ಕೆ.ನಾಗೇಂದ್ರ, ವೆಂಕಟರಮಣರಾವ್, ಹಿರಿಯರಾದ ಬಿ.ಎಸ್.ರಾಧಾಕೃಷ್ಣ, ವಿಜಯೇಂದ್ರ,
ಕ್ಷೇಮಾಭಿವೃದ್ದಿ ಸಂಘದ ಉಪಾಧ್ಯಕ್ಷರಾದ ಕೆ.ಕೆ.ಸುಬ್ಬರಾಮು, ರಮಾವಿಜಯೇಂದ್ರ, ನಿರ್ದೇಶಕರಾದ ಬಿ.ಆರ್.ರಾಜೀವ್, ಬಿ.ಆರ್.ಶಶಿಧರ್, ಶರ್ಮಿಳಾ ಮಂಜುನಾಥ್, ಶ್ರೀದೇವಿ ವೆಂಕಟರಮಣರಾವ್, ಎಂ.ವಿ.ನಾರಾಯಣ ಇದ್ದರು.
ಕಾರ್ಯದರ್ಶಿ ಅನಿಲ್ ಶೇಷಾದ್ರಿ ಸ್ವಾಗತಿಸಿದರು.
ರಮಾವಿಜಯೇಂದ್ರ ವರದಿ ವಾಚಿಸಿದರು.
Back to top button
error: Content is protected !!