ರಾಜಕೀಯ

ರಾಜ್ಯ ಸರಕಾರದಲ್ಲಿ ಅನುದಾನ ಕೊರತೆ: ರೈಲ್ವೇ ಯೋಜನೆ‌ ನೆನೆಗುದಿಗೆ-ಸಂಸದ ಯದುವೀರ್

ಕುಶಾಲನಗರ, ಡಿ 24: ಕೊಡಗು-ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮಂಗಳವಾರ ಕುಶಾಲನಗರ ತಾಲೂಕಿನ ವಿವಿಧೆಡೆ ಪ್ರವಾಸ ಕೈಗೊಂಡರು.
ಹೆಬ್ಬಾಲೆ, ಶಿರಂಗಾಲ, ತೊರೆನೂರು, ಚಿಕ್ಕ ಅಳುವಾರ, ಕುಶಾಲನಗರ, ಗುಡ್ಡೆಹೊಸೂರು ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು.
ನಂತರ ಆಯಾ ಗ್ರಾಮಗಳಲ್ಲಿ ನಡೆದ ಸಭೆಯಲ್ಲಿ ಗ್ರಾಮಸ್ಥರು ಹಾಗೂ ಕಾರ್ಯಕರ್ತರಿಂದ ಅಹವಾಲು ಸ್ವೀಕರಿಸಿದರು.‌

ಈ ಸಂದರ್ಭ ಮಾತನಾಡಿದ ಅವರು, ಕೊಡಗು ಜಿಲ್ಲೆಯ ಉತ್ತರ ಕೊಡಗಿನ ಗ್ರಾಮಗಳು ಮೈಸೂರು ಜಿಲ್ಲೆಗೆ ಹೊಂದಿಕೊಂಡಂತಿದ್ದು ಬೇಸಾಯದಲ್ಲಿ ಹೆಚ್ಚಾಗಿ ತೊಡಗಿಸಿಕೊಂಡು ವಿವಿಧ ಬೆಳೆಗಳನ್ನು ‌ಕೈಗೊಂಡಿರುವ ರೈತರಿಗೆ ನಗರ ಪ್ರದೇಶಕ್ಕೆ ತಮ್ಮ ಉತ್ಪನ್ನ ಸಾಗಾಟಗೊಳಿಸಲು ರೈಲ್ವೇ ಯೋಜನೆ ಅನುಕೂಲವಾಗಲಿದೆ. ಕೇಂದ್ರ ಸರಕಾರ ಅನುದಾನಗಳನ್ನು ಗ್ರಾಮಾಂತರ ಪ್ರದೇಶಗಳಿಗೂ ಕಾಯ್ದಿರಿಸಿ ಕ್ರಿಯಾ ಯೋಜನೆ ಅನುಗುಣವಾಗಿ ಗ್ರಾಮಗಳ ಅಭಿವೃದ್ಧಿಗೆ ಕ್ರಮವಹಿಸಲಾಗುವುದು.
ಸಂಸದರ ನಿಧಿಯಿಂದ ಗ್ರಾಮವ್ಯಾಪ್ತಿಯಲ್ಲಿ ಕಾಮಗಾರಿಗಳನ್ನು ಪ್ರಾಮಾಣಿಕವಾಗಿ ಕೈಗೊಳ್ಳಲಾಗುವುದು ಎಂದರು.
ಕೊಡಗಿನಲ್ಲಿ‌ ಬಿಎಸ್ಎನ್ಎಲ್ ಟವರ್ ಸಮಸ್ಯೆ‌ ನಿವಾರಣೆಗೆ ಈಗಾಗಲೆ‌ ಸಂಬಂಧಿಸಿದವರಿಗೆ ಪತ್ರ ವ್ಯವಹಾರ ನಡೆಸಲಾಗಿದೆ.
ಕುಶಾಲನಗರದವರೆಗೆ
ರೈಲ್ವೆ ಯೋಜನೆಗೆ ಭೂಮಿ ಖರೀದಿಗೆ ರಾಜ್ಯ ಸರಕಾರ ಮನಸ್ಸು ಮಾಡದ ಕಾರಣ ಯೋಜನೆ ನೆನೆಗುದಿಗೆ ಬಿದ್ದಿದೆ. ಈ ಹಿನ್ನಲೆಯಲ್ಲಿ ಕೇಂದ್ರ ರೈಲ್ವೇ ಸಚಿವರ ಮೂಲಕ ಕೇಂದ್ರ ಸರಕಾರದಿಂದಲೇ ಭೂಮಿ ಖರೀದಿ ಮಾಡಲು ಚಿಂತನೆ ಹರಿಸಲಾಗಿದೆ, ಮೈಸೂರು-ಕುಶಾಲನಗರ ಚತುಷ್ಪತ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಅವರು ತಿಳಿಸಿದರು.
ಕೊಡಗು ಬಿಜೆಪಿ‌ ಭದ್ರಕೋಟೆಯಾಗಿದ್ದು
ಮುಂಬರುವ ಚುನಾವಣೆಗಳಲ್ಲಿ ಬಿಜೆಪಿ ಅಧಿಕಾರ ಹಿಡಿಯಲಿದೆ. ಕರಿಮೆಣಸು ಮೇಲಿನ‌ ಜಿಎಸ್ಟಿ‌ ವಿನಾಯ್ತಿಯಿಂದ ಬೆಳೆಗಾರರಿಗೆ ಅನುಕೂಲ ಒದಗಲಿದೆ. ರಾಜ್ಯ ಸರಕಾರದಲ್ಲಿ ಅನುದಾನ ಕೊರತೆಯಿಂದ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿದೆ ಎಂದು‌ ಅವರು ಆರೋಪಿಸಿದರು.

ಈ ಸಂದರ್ಭ ಮಾಜಿ ಶಾಸಕ ಅಪ್ಪಚ್ಚುರಂಜನ್, ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ರಕ್ಷಿತ್ ಮಾವಾಜಿ, ಸೋಮವಾರಪೇಟೆ ಮಂಡಲ‌ ಬಿಜೆಪಿ ಅಧ್ಯಕ್ಷ ಗೌತಮ್, ಪ್ರಧಾನ ಕಾರ್ಯದರ್ಶಿ ಮೋಕ್ಷಿಕ್ ರಾಜ್, ಕಾರ್ಯದರ್ಶಿ ಸೋಮೇಶ್,
ಕುಶಾಲನಗರ ಬಿಜೆಪಿ ಅಧ್ಯಕ್ಷ ಚರಣ್, ಯುವಮೋರ್ಚಾ , ಕಾರ್ಯದರ್ಶಿ ಎಂ.ಸಿ.ಸಚಿನ್
ಪ್ರಮುಖರಾದ ಸುಜು ಪೊನ್ನಣ್ಣ, ಮಂಡಲ ಯುವ ಮೋರ್ಚಾ ಮಾಜಿ ಅಧ್ಯಕ್ಷ ಹೇರೂರು ಚಂದ್ರಶೇಖರ್ ಸೇರಿದಂತೆ ಹೆಬ್ಬಾಲೆ, ತೊರೆನೂರು, ಶಿರಂಗಾಲ, ಅಳುವಾರ, ಗುಡ್ಡೆಹೊಸೂರು ಗ್ರಾಮಗಳ ಜನಪ್ರತಿನಿಧಿಗಳು, ಶಕ್ತಿ ಕೇಂದ್ರದ ಪ್ರಮುಖರು, ಮಂಡಲ ಬಿಜೆಪಿ ಪ್ರಮುಖರು, ಕಾರ್ಯಕರ್ತರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!