ಕುಶಾಲನಗರ, ಜ 17: ಕರ್ನಾಟಕ ಸರ್ಕಾರವು ಸಾರ್ವಜನಿಕರ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ಸರ್ಕಾರಕ್ಕೆ ಪಾವತಿಸಬೇಕಾದ ಶುಲ್ಕಗಳನ್ನು ಡಿಜಿಟಲ್ E-Stamp ಮೂಲಕ ಪಾವತಿ ಮಾಡುವಂತಹ ಅಪ್ಲಿಕೇಶನ್ ಒಂದನ್ನು ಹೊಸದಾಗಿ ಪರಿಚಯಿಸಿರುತ್ತಾರ. ಈ ಅಪ್ಲಿಕೇಶನ್ ನಿನ ಬಳಕೆಯು EStamp ನ್ನು ಉತ್ಪಾದಿಸುವಲ್ಲಿ ಸುಧಾರಿತ ಪಾರದರ್ಶಕತೆ, ಅನುಕೂಲತೆ ಹಾಗೂ ದಕ್ಷತೆಯನ್ನು ಸಾಧಿಸಲು ಸಹಾಯ ಮಾಡುತ್ತದೆ. ಹೊಸದಾಗಿ ಪರಿಚಯಿಸಲಾದ ಈ ಅಪ್ಲಿಕೇಶನ್ ನ್ನು ಬಳಸುವುದು ಹಾಗೂ ಡಿಜಿಟಲ್ E-Stamp ಬಗ್ಗೆ ಸಾರ್ವಜನಿಕರಲ್ಲಿ ತಿಳುವಳಿಕೆ ಮೂಡಿಸುವ ಬಗ್ಗೆ ದಿನಾಂಕ 20/01/2026 ರಂದು ಮಧ್ಯಾಹ್ನ 12 ಗಂಟೆಗೆ ಉಪ ನೋಂದಣಿ ಕಚೇರಿ, ಪಟೇಲ್ ಕಾಂಪ್ಲೆಕ್ಸ್, ಕುಶಾಲನಗರದಲ್ಲಿ ಎರಡನೇ ಹಂತದ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ತಾವೆಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ಈ ಮೂಲಕ ತಿಳಿಯಪಡಿಸಿದೆ.
Back to top button
error: Content is protected !!