ಸಿದ್ದಾಪುರ, ಡಿ 02 :- ಕಾಫಿ ತೋಟಗಳಲ್ಲಿ ಬಿಡು ಬಿಟ್ಟು ಕೃಷಿ ಪಸಲು ನಾಶ ಮಾಡುವುದರ ಮೂಲಕ ಕಾರ್ಮಿಕರು, ಬೆಳಗಾರರಲ್ಲಿ ಆತಂಕ ಸೃಷ್ಟಿ ಮಾಡುತ್ತಿದ್ದ 9 ಕಾಡಾನೆಗಳನ್ನು ಮತ್ತೆ ಕಾಡಿಗಟ್ಟುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.
ಇತ್ತೀಚೆಗೆ ಕಾಫಿ ತೋಟಗಳಲ್ಲಿ ಬಿಡು ಬಿಟ್ಟಿದ್ದ ಕಾಡಾನೆಗಳು ಕೃಷಿ ಪಸಲುಗಳನ್ನು ತಿಂದು ತುಳಿದು ನಾಶ ಮಾಡುವುದರ ಮೂಲಕ ಗ್ರಾಮ ವ್ಯಾಪ್ತಿಯಲ್ಲಿ
ಹಾಡಗಲಿನಲ್ಲೂ ರಾಜಾರೋಷವಾಗಿ ತಿರಗಾಡುತ್ತಿತ್ತು.
ಕಾರ್ಮಿಕರು ಕೆಲಸಕ್ಕೆ ತೆರಳಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.
ಶಾಲಾ ವಿದ್ಯಾರ್ಥಿಗಳು ಕಾಡು ಪ್ರಾಣಿಗಳ ಭಯದಿಂದ ಶಾಲೆಗೆ ತೆರಳಲು ಸಾಧ್ಯವಾಗದಂತಹ ಪರಿಸ್ಥಿತಿ ಎದುರಾಗಿತ್ತು.
ಆನೆಗಳನ್ನು ಕಾಡಿಗಟ್ಟಬೇಕೆಂದು ಸ್ಥಳೀಯರು ಒತ್ತಾಯಿಸಿದ ಹಿನ್ನೆಲೆ ಅರಣ್ಯ ಇಲಾಖೆ ಸಿಬ್ಬಂದಿಗಳು ಬಾಡಗ ಬಾಣಂಗಾಲ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಮೂರು ಮರಿಯೊಂದಿಗೆ ಒಂಬತ್ತು ಕಾಡಾನೆಗಳು
ಕಾಣಿಸಿಕೊಂಡಿದ್ದವು
ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಕಾಡಿಗಟ್ಟವ ಕಾರ್ಯಚರಣೆ ಮುಂದುವರಿಸಿ ಮಾರ್ಗೊಲ್ಲಿ ಘಟ್ಟದಳ್ಳ ಮಾರ್ಗವಾಗಿ ದುಬಾರೆ ಅರಣ್ಯಕ್ಕೆ ಅಟ್ಟುವಲ್ಲಿ ಯಶಸ್ವಿಯಾದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗೋಪಾಲ್ ಇವರ ನಿರ್ದೇಶನದ ಮೇರೆಗೆ ವಲಯ ಅರಣ್ಯಾಧಿಕಾರಿ ಗಂಗಾಧರ್ ಅವರ ನೇತೃತ್ವದಲ್ಲಿ ಚೆನ್ನಂಗಿ ಶಾಖೆಯ ಉಪವಲಯ ಅರಣ್ಯ ಅಧಿಕಾರಿ ಶಶಿ ಪಿಟಿ , ಇಟಿಎಪ್ ಉಪ ವಲಯ ಅರಣ್ಯಾಧಿಕಾರಿ ದೇವರಾಜ್,
ದುಬಾರೆ ಉಪವಲಯನ್ಯಾಧಿಕಾರಿ ರಂಜನ್ ಕೆ ಪಿ ,
ಗಸ್ತು ಅರಣ್ಯ ಪಾಲಕ ರಾಜೇಶ್,
ಆರ್ ಆರ್ ಟಿ ಹಾಗೂ ಇ ಟಿ ಎಫ್ ಸಿಬ್ಬಂದಿಗಳಾದ ಶಂಕರ, ಭರತ್, ರಂಜಿತ್, ರೋಶನ್, ಪ್ರದೀಪ್, ಮುತ್ತಣ್ಣ, ಸುಂದರ, ದಿನು, ಧನು, ಸಚಿನ್ , ಪೊನ್ನಣ್ಣ, ಕೃಷ್ಣಪ್ಪ, ಸಂಜು , ಶಿವು
ಚಾಲಕರಾದ ಗಗನ್, ರೋಹಿತ್ ಮತ್ತು ಪೋಲಿಸ ಸಿಬ್ಬಂದಿಗಳು
ವನ್ಯಜೀವಿ ವಲಯದ ಸಿಬ್ಬಂದಿಗಳು
ಹಾಜರಿದ್ದರು
ಮತ್ತೆ ಬರುವ ಕಾಡಾನೆಗಳು: ಹಲವು ವರ್ಷಗಳಿಂದಲೂ ಆನೆ ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಇಲ್ಲದಂತಾಗಿದ್ದು ಕಾಡು ಪ್ರಾಣಿಗಳು ಸುತ್ತಮುತ್ತಲ ಗ್ರಾಮ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಬಿಡು ಬಿಟ್ಟು ಕೃಷಿ ಪಸಲು ನಾಶ ಮಾಡುವುದರ ಮೂಲಕ ಕಾರ್ಮಿಕರು, ಬೆಳೆಗಾರರು, ಶಾಲಾ ವಿದ್ಯಾರ್ಥಿಗಳಲ್ಲಿ ಆತಂಕ ಸೃಷ್ಟಿ ಮಾಡುತ್ತಿವೆ.
ಅರಣ್ಯ ಇಲಾಖೆ ಶಾಶ್ವತ ಯೋಜನೆಯನ್ನ ರೂಪಿಸದೆ ಕಾಟಾಚಾರಕ್ಕೆ ಕಾಫಿ ತೋಟದಿಂದ ಕಾಡಿಗೆಟ್ಟುವ ಕಾರ್ಯಚರಣೆ ಮಾಡುತ್ತಿದೆ ಇದರಿಂದ ಯಾವುದೇ ಪ್ರಯೋಜನ ಇಲ್ಲದಂತಾಗಿದೆ
ಕಾಫಿ ತೋಟಗಳಲ್ಲಿ ಬಿಡು ಬಿಟ್ಟ ಕಾಡಾನೆಗಳಿಗೆ ನೀರು ಆಹಾರ ಸರಾಗವಾಗಿ ಸಿಗುತ್ತಿದ್ದು ಇದರಿಂದ ಕಾಫಿ ತೋಟಗಳಲ್ಲಿ ಬಿಡು ಬಿಡುತ್ತಿದೆ.
ಅರಣ್ಯ ವ್ಯಾಪ್ತಿಯಲ್ಲಿ ನೀರು ಆಹಾರ ಸೇರದಂತೆ ಪ್ರಾಣಿಗಳಿಗೆ ಬೇಕಾದ ಆಹಾರಗಳು ಯಾವುದು ಸಿಗದ ಪರಿಣಾಮ ಮತ್ತೆ ಕಾಡಿನಿಂದ ನಾಡಿನತ್ತ ಮುಖ ಮಾಡುತ್ತಿದೆ ಅರಣ್ಯದಂಚಿನ ಬಹುತೇಕ ಪ್ರದೇಶಗಳಲ್ಲಿ
ಆನೆ ಕಂದಕ, ಸೋಲಾರ್ ಬೇಲಿ, ರೈಲ್ವೆ ಬ್ಯಾರಿಕ್ಯಾಡ್ ಅಳವಡಿಕೆ ಕಾರ್ಯ ಪೂರ್ಣಗೊಂಡಿಲ್ಲ
ಕಾಡು ಪ್ರಾಣಿಗಳಿಗೆ ಯಾವುದೇ ಅಡೆತಡೆ ಇಲ್ಲದಿರುವುದರಿಂದ ಪ್ರಾಣಿಗಳು ನಿರಂತರವಾಗಿ ಕಾಣಿಸಿಕೊಳ್ಳುತ್ತೇವೆ
ಕೂಡಲೇ ಅರಣ್ಯ ಇಲಾಖೆ ಶಾಶ್ವತ ಯೋಜನೆಯನ್ನು ರೂಪಿಸಿ ಕಾಡುಪ್ರಾಣಿಗಳ ಹಾವಳಿಯನ್ನು ಶಾಶ್ವತವಾಗಿ ತಡೆಗಟ್ಟಬೇಕೆಂದು
ಕಾರ್ಮಿಕ ಮುಖಂಡ ಮಹದೇವ್
ಒತ್ತಾಯಿಸಿದರು.
Back to top button
error: Content is protected !!