ಸಾಂಸ್ಕೃತಿಕ

ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ ಕೂಡಿಗೆ “ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿ” ವಿದ್ಯಾರ್ಥಿಗಳ ಸಾಧನೆ

ಕುಶಾಲನಗರ, ಡಿ 02:
ದಿನಾಂಕ: 30-11-2024 ರ ಶನಿವಾರ ಕುಶಾಲನಗರ ಶ್ರೀ ಗಣಪತಿ ದೇವಸ್ಥಾನ ಸೇವಾ ಸಮಿತಿ (ರಿ) ಹಾಗೂ ಜಾತ್ರೋತ್ಸವ ಸಾಂಸ್ಕೃತಿಕ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಗುಂಪು ನೃತ್ಯ ಸ್ಪರ್ಧೆಯಲ್ಲಿ ಕೂಡಿಗೆಯ ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದರು. ಈ ನೃತ್ಯ ಸ್ಪರ್ಧೆಗೆ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ತಾಲ್ಲೂಕುಗಳಿಂದ ಸುಮಾರು 18 ಕ್ಕೂ ಅಧಿಕ ನೃತ್ಯ ತಂಡಗಳು ಭಾಗವಹಿಸಿದ್ದರು, ಅದರಲ್ಲಿ ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿಯ ನೃತ್ಯ ಶಾಲೆಯ ಒಟ್ಟು 35 ವಿದ್ಯಾರ್ಥಿಗಳು ಭಾಗವಹಿಸಿ ಉಳಿದ ತಂಡಗಳಿಗಿಂತ ಅತ್ಯುತ್ತಮ ಪೈಪೋಟಿಯನ್ನು ನೀಡಿ ತೀರ್ಪುಗಾರರ ಹಾಗೂ ನೆರೆದಿದ್ದ ಜನರ ಮನಮುಟ್ಟುವ ನೃತ್ಯ ಪ್ರಕಾರವನ್ನು ಮಾಡಿ ಇವರ ಮೆಚ್ಚುಗೆಗೆ ಪಾತ್ರರಾಗಿ ದ್ವಿತೀಯ ಸ್ಥಾನವನ್ನು ತನ್ನ ಮುಡಿಗೇರಿಸಿಕೊಂಡರು. ಈ ನೃತ್ಯ ಸ್ಪರ್ಧೆಗೆ ತೀರ್ಪುಗಾರರಾಗಿ ಕರ್ನಾಟಕದ ಹೆಸರಾಂತ ಟಿ.ವಿ ವಾಹಿನಿ ಝೀ ಕನ್ನಡ, ಕಲರ್ಸ್ ಕನ್ನಡ ಹಾಗೂ ತಮಿಳು, ತೆಲುಗು ವಾಹಿನಿಯಲ್ಲಿ ಗುರುತಿಸಿಕೊಂಡ ತಾಂಡವಂ ನೃತ್ಯ ಶಾಲೆಯ ಮಂಗಳೂರಿನ ಶ್ರೀ ಸತೀಶ್ ಸುವರ್ಣ ಹಾಗೆಯೇ ಝೀ ಕನ್ನಡ ವಾಹಿನಿಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಮೋಹನ್ ಮಾಸ್ಟರ್ ಸಹಾಯಕ ನಿರ್ದೇಶಕ ಹಾಗೂ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ವಿಜೇತರಾದ ಅವತಾರ್ ಇನ್ಸ್ಟಿಟ್ಯೂಟ್ ನ ಸಂಸ್ಥಾಪಕ ಚಾಮರಾಜನಗರ ಶ್ರೀ ಪ್ರವೀಣ್ ಅವತಾರ್ ಹಾಗೆಯೇ ಮಡಿಕೇರಿಯ ಶ್ರೀಮತಿ ಮಿಲನ ಭರತ್ ನೃತ್ಯ ಸಂಯೋಜಕರೂ ಮತ್ತು ಮೈಸೂರಿನ ಶ್ರೀ ಮಂಜೆಶ್ ನೃತ್ಯ ಸ್ಪರ್ಧೆಗೆ ಉತ್ತಮ ತೀರ್ಪುಗಾರಿಕೆಯನ್ನು ಮಾಡಿದರು. ಈ ನೃತ್ಯ ಸ್ಪರ್ಧೆಗೆ ಕುಶಾಲನಗರ ಜಾತ್ರೋತ್ಸವ ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷರು ಶ್ರೀ ವಿ.ಪಿ ಶಶಿಧರ್ ಹಾಗೂ ಕುಶಾಲನಗರ ಪುರಸಭೆ ಸದಸ್ಯರು ಶ್ರೀ ವಿ. ಎಸ್ ಆನಂದ್ ಕುಮಾರ್ ಮತ್ತು ಜಾತ್ರೋತ್ಸವ ಸಾಂಸ್ಕೃತಿಕ ಸಮಿತಿಯ ಸಂಚಾಲಕರು ಶ್ರೀ ಚಂದನ್ ಕುಮಾರ್ ಇನ್ನಿತರ ಗಣ್ಯರು ವಿಜೇತರಾದ ನೃತ್ಯ ತಂಡಗಳಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನವನ್ನು ವಿತರಿಸಿ ಪ್ರೋತ್ಸಾಹಿಸಿ ಅಭಿನಂದಿಸಿದರು. ವಿಜೇತರಾದ ಎಲ್ಲಾ ತಂಡಗಳು ನಲಿದು ಸಂಭ್ರಮಿಸಿದರು.

Leave a Reply

Your email address will not be published. Required fields are marked *

Back to top button
error: Content is protected !!