ಅರಣ್ಯ ವನ್ಯಜೀವಿ

ನಂಜರಾಯಪಟ್ಟಣ ವ್ಯಾಪ್ತಿಯಲ್ಲಿ ಮುಳ್ಳು ಹಂದಿಗಳಿಂದ ಅಡಿಕೆ ಗಿಡಗಳ ಹಾನಿ: ಪರಿಹಾರಕ್ಕೆ ಗ್ರಾಮಸ್ಥರ ಅಗ್ರಹ

ಕುಶಾಲನಗರ, ಫೆ. 3: ನಂಜರಾಯಪಟ್ಟಣ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಿಂದ ಮೀನುಕೊಲ್ಲಿ ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿಯ ಕಡೆಯಿಂದ ಬಂದಿರುವ ಕಾಡು ಹಂದಿ ಮತ್ತು ಮುಳುಹಂದಿಗಳಿಂದ ಈ ವ್ಯಾಪ್ತಿಯ ಸಾವಿರಾರು ಅಡಿಕೆ ಗಿಡಗಳನ್ನು ತಿಂದು ತಂಡು ಮಾಡಿದ ಘಟನೆ ನಡೆದಿದೆ.
ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿಯ ಜೊತೆಯಲ್ಲಿ ಕಾಡುಹಂದಿ ಮತ್ತು ಮುಳ್ಳು ಹಂದಿಗಳು ರೈತರ ಜಮೀನಿಗೆ ದಾಳಿ ಮಾಡಿ ಒಂದರಿಂದ ಎರಡು ವರ್ಷಗಳ ಅವಧಿಯ ಅಡಿಕೆ ಗಿಡಗಳನ್ನು ಕಚ್ಚಿ ತಿಂದು ಮುರಿದು ನಷ್ಟ ಪಡಿಸಿವೆ.
ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಎಲ್.ವಿಶ್ವ, ತಿಲಕ್, ಯತೀಶ್, ಸೂರ್ಯಕುಮಾರ್, ಬಾಲಕೃಷ್ಣ ,ಪವನ್, ಸೇರಿದಂತೆ ಅನೇಕ ರೈತರ ಜಮೀನಿಗೆ ದಾಳಿ ಮಾಡಿರುವ ಮುಳ್ಳು ಹಂದಿ,ಮತ್ತು ಕಾಡು ಹಂದಿಗಳು ಅಪಾರ ಪ್ರಮಾಣದ ಅಡಿಕೆ ಗಿಡಗಳನ್ನು ನಾಶ ಪಡಿಸಿವೆ.
ಸಂಬಂಧಿಸಿದ ಅರಣ್ಯ ಇಲಾಖೆಯ ಅಧಿಕಾರಿ ವರ್ಗದವರು ಸ್ಧಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತವಾದ ಪರಿಹಾರವನ್ನು ಒದಗಿಸುವಂತೆ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಎಲ್. ವಿಶ್ವ ಸೇರಿದಂತೆ  ರೈತರ ಅಗ್ರಹಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!