ಕುಶಾಲನಗರ,ನ 23:
ಕುಶಾಲನಗರ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ವತಿಯಿಂದ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಲಾಯಿತು.
ಸರಕಾರಿ ಬಸ್ ನಿಲ್ದಾಣ ಆವರಣದಲ್ಲಿ ನಡೆದ ವೇದಿಕೆ ಕಾರ್ಯಕ್ರಮವನ್ನು ಕುಶಾಲನಗರ ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿ ಚಂದ್ರು ಉದ್ಘಾಟಿಸಿ ಶುಭ ಕೋರಿದರು.
ಸಂಘದ ಕಟ್ಟಡ ನಿವೇಶನದ ದಾನಿಗಳಾದ ಜಯಶ್ರೀ ನಾಗೇಶ್ ಅವರು ಕನ್ನಡ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಆಟೋ ಚಾಲಕ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಕೃಷ್ಣ ದರ್ಶನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ ಕುಶಾಲನಗರ ತಾಲೂಕು ಅಧ್ಯಕ್ಷ ಕೆ.ಎಸ್ ನಾಗೇಶ್, ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಸದಸ್ಯೆ ಪಿ.ಎಂ. ರುಕ್ಮಿಣಿ, ಸಂಘದ ಉಪಾಧ್ಯಕ್ಷರಾದ ದೇವರಾಜ್, ಗಣೇಶ್, ಮಹದೇವ್ ಗೌಡ, ಪ್ರಧಾನ ಕಾರ್ಯದರ್ಶಿ ಎಂ ಎಸ್ ಸಂತೋಷ್ ಕುಮಾರ್ ಗೌಡ, ಕಾರ್ಯದರ್ಶಿ ಎಲ್ ಎ ಪ್ರಸನ್ನ, ಖಜಾಂಚಿ ಎಂ ಬಿ ಮುನೀರ್ , ಮಾಜಿ ಖಜಾಂಚಿ ಜಿ ರಮೇಶ್, ಮಾಜಿ ಕಾರ್ಯದರ್ಶಿ ಪಿ ಮಂಜು, ಖಾಯಂ ಆಹ್ವಾನಿತರಾದ ವಿ ಎನ್ ತೇಜಸ್, ಕಾವೇರಿ ನದಿ ಸ್ವಚ್ಚತಾ ಆಂದೋಲನ ರಾಜ್ಯ ಸಂಚಾಲಕ ಎಂ ಎನ್ ಚಂದ್ರಮೋಹನ್, ಪತ್ರಕರ್ತರಾದ ರಘುಕೋಟಿ, ಟಿ.ಆರ್. ಪ್ರಭುದೇವ್, ಶಿವರಾಜ್ ಮತ್ತು ಸಂಘದ ನಿರ್ದೇಶಕರು ಪದಾಧಿಕಾರಿಗಳು ಇದ್ದರು.
ಸಂಘದ ಮಾಜಿ ಕಾರ್ಯದರ್ಶಿ ಕೆ ಸಿ ದಿನೇಶ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಣೆ ಮಾಡಿದರು.
ಇದೇ ಸಂದರ್ಭ ಸಂಘದ ಆಶ್ರಯದಲ್ಲಿ ಹಿಲ್ ಬ್ಲೂಮ್ ಆಸ್ಪತ್ರೆ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಡಾ ನವೀದ್ ಮತ್ತು ಡಾ ಮನೋಜ್ ಅವರ ನೇತೃತ್ವದಲ್ಲಿ ವೈದ್ಯಕೀಯ ಸಿಬ್ಬಂದಿಗಳು ಸಾರ್ವಜನಿಕರಿಗೆ ರಕ್ತ ಪರೀಕ್ಷೆ ರಕ್ತದೊತ್ತಡ ಇಸಿಜಿ ಮತ್ತಿತರ ಪರೀಕ್ಷೆಗಳನ್ನ ನಡೆಸಿಕೊಟ್ಟರು.
ಮಧ್ಯಾಹ್ನ ಪ್ರೌಢಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಸಮೂಹ ನೃತ್ಯ ಸ್ಪರ್ಧೆ ಏರ್ಪಡಿಸಲಾಗಿತ್ತು. ನಂತರ ಡ್ಯಾನ್ಸ್ ಡ್ಯಾನ್ಸ್ ಕಾರ್ಯಕ್ರಮ ನಡೆಯಿತು.
ಭಾನುವಾರ ಕನ್ನಡಾಂಬೆಯ ಮೆರವಣಿಗೆ ಹಾಗೂ ಆಟೋ ಚಾಲಕರಿಗೆ ಆಟೋ ಅಲಂಕಾರ ಸ್ಪರ್ಧೆ ಏರ್ಪಡಿಸಲಾಗಿದೆ. ಮಧ್ಯಾಹ್ನ ಅನ್ನ ಸಂತರ್ಪಣೆ ಕಾರ್ಯಕ್ರಮ ಹಾಗೂ ಸಂಜೆ 5 ಗಂಟೆಗೆ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಕೃಷ್ಣ ದರ್ಶನ್ ತಿಳಿಸಿದ್ದಾರೆ.
Back to top button
error: Content is protected !!