ಕುಶಾಲನಗರ, ಜು 20: ಕುಶಾಲನಗರದ ಏಂಜಲ್ಸ್ ವಿಂಗ್ಸ್ ಸ್ಕೂಲ್ ಆಫ್ ಡ್ಯಾನ್ಸ್ ಸಂಸ್ಥೆಯು ರಾಜ್ಯದಲ್ಲಿಯೇ ಮನೆಮಾತಾಗಿದೆ. ಈಗ ಇದೇ ಏಂಜಲ್ಸ್ ವಿಂಗ್ಸ್ ನೃತ್ಯ ಶಾಲೆ ಮತ್ತೊಂದು ಮಹತ್ ಸಾಧನೆ ಮಾಡಿದೆ. ನೃತ್ಯದಲ್ಲಿಯೇ ಹೊಸ ಮೈಲುಗಲ್ಲು ಸಾಧಿಸುತ್ತಿರುವ ಏಂಜಲ್ಸ್ ವಿಂಗ್ಸ್ ನೃತ್ಯ ಶಾಲೆಯ, ಚೈತನ್ಯ ಡಿ, ದೇವಿಕಾ. ಎಂ.ಆರ್, ವಿದ್ಯಾ ಜಿ.ಡಿ,ಆರ್ಯ ಪಿ.ಎಸ್ ,ಲಕ್ಷ್ಮಿ ಶ್ರೀ, ಶೀತಲ್ ಆರ್ಯ, ಲಿಯೋನೆಲ್ ಲ್ಯೂಕ್ ಡಿಸೋಜ , ವಿಷ್ರುತ್ ಎಸ್ , ಗಗನ್ ವಿ, ದುಂದುಭಿ ವೈ.ಎನ್ , ಮನಸ್ವಿ ಆರ್ ಶಂಕರ್ , ಶೈನಾ, ಒಟ್ಟು 12 ವಿದ್ಯಾರ್ಥಿಗಳು ರಾಬಾ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ಭಾಗವಹಿಸಿ ಲೋಕ ಕಲಾನಿಧಿ ಎಂಬ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಹೌದು, ರಾಬಾ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಸಂಸ್ಥೆಯು ಹಮ್ಮಿಕೊಂಡಿದ್ದ ಇಂಟರ್ ನ್ಯಾಷನಲ್ ಟ್ಯಾಲೆಂಟ್ ಹಂಟ್ ನಲ್ಲಿ ಏಂಜಲ್ ವಿಂಗ್ಸ್ ಸಂಸ್ಥೆಯ 12 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇಲ್ಲಿ ಅದ್ಭುತ ಪ್ರದರ್ಶನ ತೋರಿ, ರಾಬಾ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಫೆಸ್ಟಿವಲ್ ನಲ್ಲಿ ಭಾಗವಗಹಿಸಲು ಅವಕಾಶ ಪಡೆದುಕೊಂಡಿದ್ದರು.
ಇತ್ತೀಚೆಗೆ ಚೆನ್ನೈ ನ ಫಿನಿಕ್ಸ್ ಮಾರ್ಕೆಟ್ ಸಿಟಿ ರಾಬಾ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಫೆಸ್ಟಿವಲ್ ನಡೆಯಿತು. ಇಲ್ಲಿಯೂ ಭರ್ಜರಿ ಪ್ರದರ್ಶನ ನೀಡಿದ ನೃತ್ಯಪಟುಗಳು, ತೀರ್ಪುಗಾರರ ಮೆಚ್ಚುಗೆಗೆ ಪಾತ್ರರಾದರು. ಜೊತೆಗೆ ಲೋಕ ಕಲಾನಿಧಿ ಎಂಬ ಬಿರುದನ್ನು ಪಡೆದರು. ಆ ಮೂಲಕ ರಾಬಾ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ಡ್ಯಾನ್ಸರ್ಸ್ ಆಂಡ್ ಸ್ಕೇಟರ್ಸ್ ಸೈಮಲ್ಟೇನಿಯಸ್ ಫರ್ಪಾರ್ಮಿಂಗ್ ಫಾರ್ ಗಣಪತಿ ಸಾಂಗ್ ಎಂದು ದಾಖಲಾಗಿದೆ.
ಏಂಜಲ್ ವಿಂಗ್ಸ್ ನೃತ್ಯ ಶಾಲೆಯು ರಾಬಾ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ದಾಖಲಾದ ಕೊಡಗಿನ ಏಕೈಕ ನೃತ್ಯ ಸಂಸ್ಥೆ ಎಂಬ ಹೆಗ್ಗಳಿಕೆಗೂ ಭಾಜನವಾಗಿದೆ.
ಸಂಸ್ಥೆಯ ನಿರ್ದೇಶಕ, ಮಾಸ್ಟರ್ ಅನೂಪ್ ಡಿಸೋಜ ಹಾಗೂ ನಿರ್ದೇಶಕಿ ಏಂಜಲ್ ರಶ್ಮಿ ಡಿಸೋಜ ಕೂಡ ಕೀರ್ತಿಗೆ ಭಾಜನರಾಗಿದ್ದಾರೆ.
Back to top button
error: Content is protected !!