ಪ್ರತಿಭಟನೆ

ಜನವಿರೋಧಿ ತೆರಿಗೆ ಹಿಂಪಡೆಯಲು ಆಗ್ರಹಿಸಿ ಕುಶಾಲನಗರದಲ್ಲಿ SDPI ಪ್ರತಿಭಟನೆ

ಕುಶಾಲನಗರ, ಜು 20: ಜಿಎಸ್ ಟಿ ಹೆಸರಿನಲ್ಲಿ ಜನದ್ರೋಹಿ ತೆರಿಗೆ ಹಿಂಪಡೆಯಲು ಆಗ್ರಹಿಸಿ ಎಸ್ ಡಿ ಪಿ ಐ ವತಿಯಿಂದ ಕುಶಾಲನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾಕಾರರು ಮೋದಿ ಸರಕಾರದ ವಿರುದ್ದ ಘೋಷಣೆಗಳನ್ನು ಕೂಗಿ ಜನಸಾಮಾನ್ಯರಿಗೆ ಮಾರಕವಾಗಿರುವ ತೆರಿಗೆಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದರು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್ಡಿಪಿಐ ಮುಖಂಡ‌ ಮಡಿಕೇರಿಯ ಅಮಿನ್‌ ಮೊಹಿಸಿನ್, ಮೋದಿ ಸರಕಾರದಿಂದ ದೇಶದಲ್ಲಿ ಅರಾಜಕತೆ ಸೃಷ್ಠಿಯಾಗುತ್ತಿದೆ.‌ ಶೀಘ್ರದಲ್ಲೇ ಶ್ರೀಲಂಕಾ ಮಾದರಿ ಪರಿಸ್ಥಿತಿ ಭಾರತದಲ್ಲಿ‌ ನಿರ್ಮಾಣವಾಗಲಿದೆ‌. ದೇಶದಲ್ಲಿ ಹಸಿವಿನ ಸೂಚ್ಯಂಕ 101 ರಷ್ಟಿದ್ದು ಇದು ಶೀಘ್ರದಲ್ಲೇ 500 ಕ್ಕೆ ಏರಲಿದೆ. ಬ್ರಿಟೀಷರ ಮಾದರಿ ಜನವಿರೋದಿ ನೀತಿಗಳನ್ನು ಮೋದಿ ಸರಕಾರ ಮರುಸ್ಥಾಪಿಸುತ್ತಿದೆ. ಇಂದು ದೇಶದ ನೀತಿಗಳು ಆರ್ಥಿಕ ತಜ್ಞರ ಬದಲಾಗಿ ಬಂಡವಾಳಶಾಹಿಗಳ ಕೊಠಡಿಯಲ್ಲಿ ರಚನೆಯಾಗುತ್ತಿದೆ. ಪ್ರತಿ ಮನೆ ಬಾಗಿಲಿಗೆ ಹಸಿವು, ನಿರುದ್ಯೋಗ ಸಮಸ್ಯೆ ಬಂದಾಗಿದೆ. ಇದರ ಬಗ್ಗೆ ಜನಸಾಮಾನ್ಯರು ಧ್ವನಿ ಎತ್ತಬೇಕಿದೆ. ಪ್ರಶ್ನಿಸಬೇಕಿದೆ ಎಂದರು.
ಪ್ರತಿಭಟನೆಯಲ್ಲಿ ಸೋಮವಾರಪೇಟೆಯ ಕಬೀರ್ ಸೇರಿದಂತೆ ಸ್ಥಳೀಯ ಪ್ರಮುಖರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!