ಮನವಿ

ಹೆಬ್ಬಾಲೆ ಗ್ರಾಪಂ ಆಡಳಿತ ಮಂಡಳಿ ಒಗ್ಗೂಡಿ ಗ್ರಾಮದ ಅಭಿವೃದ್ಧಿಗೆ ಶ್ರಮಿಸಿ: ನಟೇಶ್ ಗೌಡ

ಕುಶಾಲನಗರ ಆ. 31: ಹೆಬ್ಬಾಲೆ ಗ್ರಾಮ ಪಂಚಾಯತಿಯ ಆಡಳಿತ ಮಂಡಳಿಯ ಸದಸ್ಯರುಗಳ ಹೊಂದಾಣಿಕೆ ಮತ್ತು ಕಳೆದ ಒಂದು ವರ್ಷಗಳಿಂದಲೂ ಖಾಯಂ ಅಭಿವೃದ್ಧಿ ಅಧಿಕಾರಿಯ ನೇಮಕ ಇಲ್ಲದೆ , ಹಾಗೂ ಆಡಳಿತ ಮಂಡಳಿ ಸಾಮಾನ್ಯ ಸಭೆಯು ಸಹ ನಿಯಮಾನುಸಾರವಾಗಿ ನಡೆಯಲು ಸದಸ್ಯರುಗಳಲ್ಲಿ ಪರವಿರೋಧದ ನೆಡುವೆ ಅನೇಕ ಬಾರಿ ಮಾನಸಿ ಸಭೆಗಳು ಮುಂದುಡಲ್ಪಟ ಹಿನ್ನೆಲೆಯಲ್ಲಿ ಗ್ರಾಮ‌ದ ಮೂಲಭೂತ ಸೌಕರ್ಯಗಳ ಜೊತೆ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗುತ್ತಿವೆ. ಅದರಿಂದಾಗಿ ಅಡಳಿತ ಮಂಡಳಿಯರು ಗ್ರಾಮದ ಹಿತದೃಷ್ಟಿಯಿಂದ ಒಗ್ಗೂಡಿ ಗ್ರಾಮದ ಪ್ರಗತಿಗೆ ಶ್ರಮಿಸುವಂತೆ ಈ ವ್ಯಾಪ್ತಿಯ ನೂರಾರು ಗ್ರಾಮಸ್ಥರು, ಸಂಘ ಸಂಸ್ಥೆಗಳ ಪ್ರಮುಖರು, ಹಾಗೂ ಕೆ.ಪಿ.ಸಿ.ಸಿ.ಸದಸ್ಯ ನಟೇಶ್ ಗೌಡ ಒತ್ತಾಯ ಮಾಡಿರುತ್ತಾರೆ.

ಗ್ರಾಮ ಪಂಚಾಯತಿ ಸದಸ್ಯರು ಪರ ವಿರೋಧ ಹೇಳಿಕೆ, ಅಭಿವೃದ್ಧಿಗೆ ಪೂರಕವಾದ ಯೋಜನೆಯ ಕ್ರಿಯಾ ಯೋಜನೆ ತಯಾರಿಸುವ ಸಂದರ್ಭದಲ್ಲಿ ವ್ಯಯಕ್ತಿಕ ವಿಷಯಗಳ ಬಗ್ಗೆ ಚರ್ಚಿಸದೆ ಗ್ರಾಮದ ಅಭಿವೃದ್ಧಿಗೆ ಎಲ್ಲಾ ಸದಸ್ಯರು ಕಾರಣಿಭೂತರಾಗಬೇಕಾಗಿದೆ ,ಜಿಲ್ಲೆಯಲ್ಲಿ ಅತಿ ಜನಸಂಖ್ಯೆಯನ್ನು ಹೊಂದಿರುವ ಗ್ರಾಮ ಪಂಚಾಯತಿ ಆಗಿರುವ ಹೆಬ್ಬಾಲೆ ಗ್ರಾಮ ಪಂಚಾಯತಿ ಅಭಿವೃದ್ಧಿ ಎಲ್ಲಾ ಸದಸ್ಯರು ಸಂಬಂಧಿಸಿದ ಅಭಿವೃದ್ಧಿ ಅಧಿಕಾರಿಯ ಮೂಲಕ ಗ್ರಾಮದ ಪ್ರಗತಿ ಎಲ್ಲರೂ ಕೈಜೋಡಿಸಬೇಕೇಂದು ಗ್ರಾಮಸ್ಥರ ಒತ್ತಾಯವಾಗಿದೆ.
ಗ್ರಾಮ ಪಂಚಾಯತಿ ವ್ಯಾಪ್ತಿಯ ಅನೇಕ ವಾರ್ಡ್ ಗಳಲ್ಲಿ ಮೂಲಭೂತ ಸೌಕರ್ಯಗಳ ವ್ಯವಸ್ಥೆ, ಮತ್ತು ಹೊಸ ಕಾಮಗಾರಿಗಳ ಪ್ರಗತಿ ಅಗುತ್ತಿಲ್ಲಾ ಎಂದು ಕೆಲವು ಉಪ ಗ್ರಾಮಗಳ ಗ್ರಾಮಸ್ಥರು ಪ್ರತಿಭಟನೆ ಮಾಡಿದರು .ಅದರಿಂದಾಗಿ ಎಲ್ಲರೂ ಅಭಿವೃದ್ಧಿ ಚಿಂತಕರಾಗಿ
ಗ್ರಾಮ ವ್ಯಾಪ್ತಿಯಲ್ಲಿ ಅನೇಕ ಮೂಲಭೂತ ಸಮಸ್ಯೆಗಳು ಇರುವುದರಿಂದಾಗಿ ಅವುಗಳ ಪರಿಹಾರಕ್ಕೆ ಸಂಬಂಧಿಸಿದ ಜನಪ್ರತಿನಿಧಿಗಳು ಅಧಿಕಾರಿ ವರ್ಗದವರು ಮುಂದಾಗಬೇಕೆಂದು ನೂರಾರು ಗ್ರಾಮಸ್ಥರ ಆಗ್ರಹವಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!