ಪ್ರಶಸ್ತಿ

ಉತ್ತಮ ಪ್ರಗತಿ ಸಾಧಿಸಿದ ಕೂಡುಮಂಗಳೂರು ಗ್ರಾ ಪಂ ಗೆ ಪ್ರಶಸ್ತಿ.

ಕುಶಾಲನಗರ ಅ 04: ಕೊಡಗು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್ ಮತ್ತು ಅಭಿವೃದ್ಧಿ ಅಧಿಕಾರಿ ಸಂತೋಷ್ ರವರು ಪ್ರಶಸ್ತಿ ಸ್ವೀಕರಿಸಿದರು ನಂತರ ಮಾತನಾಡಿದ ಭಾಸ್ಕರ್ ನಾಯಕ್, ಗ್ರಾಮೀಣ ಪ್ರದೇಶಗಳಲ್ಲಿನ ಜನರಲ್ಲಿ ನೈರ್ಮಲ್ಯ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಈ ವರ್ಷವು ಸಹ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಲಶಕ್ತಿ ಮಂತ್ರಾಲಯ ಹಾಗೂ ಕೇಂದ್ರ ನಗರ ವಸತಿ ವ್ಯವಹಾರಗಳ ಸಚಿವಾಲಯವು 14ನೇ ಸೆಪ್ಟೆಂಬರ್ 2024 ರಿಂದ 2ನೇ ಅಕ್ಟೋಬ‌ರ್ 2024 ರವರೆಗೆ ‘ಸ್ವಚ್ಛತಾ ಹೀ ಸೇವಾ 2024″ ಅಂದೋಲನವನ್ನು ಹಮ್ಮಿಕೊಂಡಿದೆ. ಈ ಸಂಬಂಧ ಮಾರ್ಗಸೂಚಿಗಳನ್ವಯ 17ನೇ ಸೆಪ್ಟೆಂಬರ್ 2024 ರಿಂದ 1ನೇ 2024 ವರೆಗೆ ವಿವಿಧ ಸ್ವಚ್ಛತಾ ಚಟುವಟಿಕೆಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ಸೂಚಿಸಲಾಗಿತ್ತು. ಈ ಸದರಿ ಪಾಕ್ಷಿಕದ ಅವಧಿಯಲ್ಲಿ Cleanliness Target Unit (CTU), ಶುಚಿಗೊಳಿಸುವಿಕೆ ಸಫಾಯಿ ಮಿತ್ರ ಸುರಕ್ಷ ಶಿಬಿರ, ಶಾಲಾ ಕಾರ್ಯಕ್ರಮಗಳು ತಾಯಿ ಹೆಸರಿನಲ್ಲಿ ಗಿಡ ನೆಡುವುದು, ಶ್ರಮದಾನ ಚಟುವಟಿಕೆಗಳು, ನೈರ್ಮಲ್ಯ, ಶುಚಿತ್ವ ವಿಷಯಗಳಲ್ಲಿ ವ್ಯಾಪಕವಾದ ಅರಿವು ಮೂಡಿಸುವುದು ಸೇರಿದಂತೆ ವಿವಿಧ ಸ್ವಚ್ಛತಾ ಹೀ ಸೇವಾ-2024ರ ಕಾರ್ಯಕ್ರಮಗಳನ್ನು ನಮ್ಮ
ಕೂಡುಮಂಗಳೂರು ಗ್ರಾಮ ಪಂಚಾಯಿತಿಯಲ್ಲಿ ಯಶಸ್ವಿಯಾಗಿ ಅನುಷ್ಠಾನ ಮಾಡಿ ಉತ್ತಮ ಪ್ರಗತಿ ಸಾಧಿಸಿದ್ದು ಜಿಲ್ಲಾ ಪಂಚಾಯಿತಿ ಇಂದ ನಮ್ಮ ಪಂಚಾಯತಿಯನ್ನು ಗುರುತಿಸಿ ಪ್ರಶಸ್ತಿ ಪ್ರಧಾನ ಮಾಡಿರುವುದು ಸಂತಸ ತಂದಿದೆ ಈ ಪ್ರಶಸ್ತಿಗಾಗಿ ಶ್ರಮಿಸಿದ ಎಲ್ಲಾ ಗ್ರಾಮ ಪಂಚಾಯಿತಿಯ ಸದಸ್ಯರುಗಳು ಸಿಬ್ಬಂದಿಗಳಿಗೂ ಹಾಗೂ ಸಾರ್ವಜನಿಕರಿಗೂ ಧನ್ಯವಾದಗಳು ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!