ಪ್ರಶಸ್ತಿ

ಉ.ರಾ.ನಾಗೇಶ್ ಅವರಿಗೆ ಸ್ಪಾರ್ಕ್ ನಿರೂಪಣಾ ರತ್ನ ರಾಜ್ಯ ಪ್ರಶಸ್ತಿ

ಕುಶಾಲನಗರ, ಜ 22: : ಪಟ್ಟಣದ ಹೆಸರಾಂತ ಕಾರ್ಯಕ್ರಮ ನಿರೂಪಕರು, ಚಿತ್ರಕಲಾ ನಿವೃತ್ತ ಶಿಕ್ಷಕರು ಆಗಿರುವ ಉ.ರಾ.ನಾಗೇಶ್ ಅವರಿಗೆ ಸೂರ್ಯ ಪೌಂಡೇಶನ್ ಸ್ಪಾರ್ಕ್ ಅಕಾಡೆಮಿ ಹಾಗೂ ಬೆಂಗಳೂರಿನ ಲಕ್ಷ್ಯ ಕೆರಿಯರ್ ಪೌಂಡೇಶನ್ ಜಂಟಿಯಾಗಿ ನೀಡುವ ವಾರ್ಷಿಕ ಸ್ಪಾರ್ಕ್ ನಿರೂಪಣಾ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಿವೆ.

ನಾಡಿನಾದ್ಯಂತ ನಡೆಯುವ ಸಭೆ ಸಮಾರಂಭಗಳಲ್ಲಿ ತಮ್ಮ ವಿಶಿಷ್ಠ ಕಂಠಸಿರಿ,ಪದಸಿರಿ ಸಂಪತ್ತಿನಿಂದ ಯಶಸ್ವಿಯಾಗಿ ವೇದಿಕೆ ಸಮಾರಂಭಗಳನ್ನು ನಿರ್ವಹಿಸುವವರನ್ನು ಗುರುತಿಸಿ ಗೌರವಿಸಲಾಗುತ್ತದೆ.
ಆದ್ದರಿಂದ ಕುಶಾಲನಗರದ ಉ.ರಾ.ನಾಗೇಶ್ ಅವರನ್ನು ಈ ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ತಾ.25 ರಂದು ಬೆಂಗಳೂರಿನ ಕಾಳತಮ್ಮನಹಳ್ಳಿ ಯಲ್ಲಿರುವ ಲಕ್ಷ್ಯ ಕೆರಿಯರ್ ಅಕಾಡೆಮಿ ಸಭಾಂಗಣದಲ್ಲಿ ಪ್ರಶಸ್ತಿ ಪ್ರಧಾನ ನಡೆಯಲಿದೆ ಎಂದು ಸೂರ್ಯ ಪೌಂಡೇಶನ್ ಸ್ಥಾಪಕ ಅಧ್ಯಕ್ಷ ಸೋಮೇಶ್ ನವೋದಯ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!