ಕುಶಾಲನಗರ ಅ 04; ಕುಶಾಲನಗರದ ದಾರುಲ್ ಉಲೂಂ ಮದ್ರಸ ಮತ್ತು ಹಿಲಾಲ್ ಮಸೀದಿ ಇವರ ಸಹಭಾಗಿತ್ವದಲ್ಲಿ ನುಸ್ರತುಲ್ ಇಸ್ಲಾಂ ಯೂತ್ ಅಸೋಸಿಯೇಷನ್ ವತಿಯಿಂದ ಜನಾಂಗದ ಬಾಂಧವರಿಗೆ ಮಿಲಾದ್ ಸೌಹಾರ್ದ ಕ್ರೀಡಾಕೂಟವನ್ನು ಇಂದಿರಾ ಬಡಾವಣೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕ್ರೀಡಾಕೂಟಕ್ಕೆ ಚಾಲನೆ ನೀಡಿದ ನುಸ್ರತುಲ್ ಇಸ್ಲಾಂ ಯೂತ್ ಅಸೋಸಿಯೇಷನ್ ನ ಅಧ್ಯಕ್ಷ ಮಹಮ್ಮದ್ ಹನೀಫ್ ಮಾತನಾಡಿ, ಇಂದಿನ ಯುವ ಜನತೆ ದುಶ್ಚಟಗಳಿಗೆ ದಾಸರಾಗದೆ ತಮ್ಮ ಜೀವನದಲ್ಲಿ ಅತ್ಯುತ್ತಮ ಹವ್ಯಾಸ ಅಳವಡಿಸಿಕೊಂಡು ವಿದ್ಯೆಯೊಂದಿಗೆ ಕ್ರೀಡೆ ಸಹ ಮುಖ್ಯ ಎಂಬುದನ್ನು ಅರಿತು ಬದುಕಿನ ಯಶಸ್ಸಿನ ಮೆಟ್ಟಿಲೇರುತ್ತಾ ತಮ್ಮ ಕಾರ್ಯ ಸಾಧನೆಗಳ ಮೂಲಕ ಪ್ರಸಿದ್ದಿ ಪಡೆಯುವಂತಾಗಬೇಕು ಎಂಬ ನಿಟ್ಟಿನಲ್ಲಿ ಈ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದರು.
ಸದಸ್ಯ ಶರೀಫ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಕ್ಕಳೂ ಮೊಬೈಲ್ ಗೇಮ್‌ಗಳಿಗೆ ದಾಸರಾಗುತ್ತಿದ್ದಾರೆ. ಕ್ರೀಡೆಯಲ್ಲಿ ಶಿಸ್ತಿನೊಂದಿಗೆ ಮನೋಬಲ ಹಾಗೂ ದೇಹ ಬಲವನ್ನು ಹೆಚ್ಚಿಸಿಕೊಳ್ಳಬಹುದು.
ಇದು ಉತ್ತಮ ಅವಕಾಶ ಕೂಡ ಆಗಲಿದೆ. ಅಲ್ಲದೆ, ಸ್ಥಳೀಯವಾಗಿಯೂ ಯುವಕರನ್ನು ಕ್ರೀಡೆಯ ಕಡೆಗೆ ಸೆಳೆಯಲು ಇದು ಉಪಯುಕ್ತವಾಗಲಿದೆ ಎಂದರು.
ಎಲ್ಲರೂ ಉತ್ಸಾಹದಿಂದ ಕ್ರೀಡಾಕೂಟದಲ್ಲಿ ಭಾಗವಹಿಸಿ. ಸೋಲು–ಗೆಲುವಿಗಿಂತ ಕ್ರೀಡಾ ಮನೋಭಾವ ಮುಖ್ಯ ಎಂಬುದನ್ನು ಸಾರಿದರು.
ವಾಲೀಬಾಲ್ ಹಗ್ಗಜಗ್ಗಾಟ, ಸಂಗೀತ ಕುರ್ಚಿ, ಇನ್ನಿತರ ಕ್ರೀಡಾಕೂಟದಲ್ಲಿ ಹುಮ್ಮಸ್ಸಿನಿಂದ ಭಾಗವಹಿಸಿ ಗೆಲುವಿಗಾಗಿ ಸೆಣಸಾಡಿದರು.
ವಾಲೀಬಾಲ್ ಪಂದ್ಯಾಟದಲ್ಲಿ ಬಾಷಾ ನಾಯಕತ್ವದ ರಾಯಲ್ ಫ್ರೆಂಡ್ಸ್ ತಂಡ ಪ್ರಥಮ ಸ್ಥಾನ ಪಡೆದರೆ. ಅರ್ಷದ್ ಫ್ರೆಂಡ್ಸ್ ತಂಡ ದ್ವಿತೀಯ ಸ್ಥಾನ ಪಡೆಯಿತು.
ಈ ಸಂದರ್ಭ ನುಸ್ರತುಲ್ ಇಸ್ಲಾಂ ಯೂತ್ ಅಸೋಸಿಯೇಷನ್
ಗೌರವ ಅಧ್ಯಕ್ಷ ಕಮಲ್.ಪಿ.ಎಂ, ಉಪಾಧ್ಯಕ್ಷ ಸಾಧಿಕ್, ಸಹ ಕಾರ್ಯದರ್ಶಿ ಆರೀಫ್, ಕಾರ್ಯದರ್ಶಿ ಮಹಮ್ಮದ್ ನೂರುಲ್ಲಾ ಸದಸ್ಯರಾದ ಇಕ್ಬಾಲ್, ಹಿಲಾಲ್ ಮಸೀದಿಯ ಸದಸ್ಯ
ರಫೀಕ್ ಮತ್ತು ಅಜೀಜ್ ಸೇರಿದಂತೆ ಮತ್ತಿತರರು ಹಾಜರಿದ್ದರು.
Back to top button
error: Content is protected !!