ಪ್ರಶಸ್ತಿ

ಕುಶಾಲನಗರದ ಸಹಕಾರ ಸಾರಥಿ ಟಿ ಆರ್ ಶರವಣಕುಮಾರ್ ಅವರು ಕರ್ನಾಟಕ ಸಹಕಾರ ಶಿರೋಮಣಿ -2025 ರಾಜ್ಯ ಪ್ರಶಸ್ತಿಗೆ ಭಾಜನ

ಕುಶಾಲನಗರ, ಜ 18:ಕುಶಾಲನಗರದ ಸಹಕಾರ ಸಾರಥಿ ಟಿ ಆರ್ ಶರವಣಕುಮಾರ್ ಅವರು ಕರ್ನಾಟಕ ಸಹಕಾರ ಶಿರೋಮಣಿ -2025 ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ವತಿಯಿಂದ ರಾಜ್ಯದ ಪ್ರತಿ ಜಿಲ್ಲೆಯ ಸಾಧಕರಿಗೆ ನೀಡಲಾಗುತ್ತಿರುವ ಈ ಪ್ರಶಸ್ತಿ ಮೂರು ದಶಕಗಳ ಕಾಲ ಸಹಕಾರ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡು ಕುಶಾಲನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮತ್ತು ಕೈಗಾರಿಕೋದ್ಯಮಗಳ ಮತ್ತು ವೃತ್ತಿ ನಿರತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಶರವಣ ಕುಮಾರ್ ಅವರ ಸಾಧನೆ ಗುರುತಿಸಿ ನೀಡಲಾಗಿದೆ.
ಅಖಿಲ ಭಾರತ ಸಹಕಾರ ಸಪ್ತಾಹ ಆಚರಣೆ ಹಿನ್ನೆಲೆಯಲ್ಲಿ ನೀಡಿರುವ ಕರ್ನಾಟಕ ಸಹಕಾರ ಶಿರೋಮಣಿ -2025 ಪ್ರಶಸ್ತಿಯನ್ನು ಈ ತಿಂಗಳ 24ರಂದು ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನೀಡಿ ಗೌರವಿಸಲಾಗುವುದು ಎಂದು ಪ್ರಕಟಣೆಯನ್ನು ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!