ಟ್ರೆಂಡಿಂಗ್

ವಿರಾಜಪೇಟೆಯಲ್ಲಿ ಬೃಹತ್ ಮೀಲಾದ್ ಸಂದೇಶ ಜಾಥಾ

ಕುಶಾಲನಗರ, ಸೆ 28: ವಿರಾಜಪೇಟೆ ಅನ್ವಾರುಲ್ ಹುದಾ ಹಾಗೂ ಸುನ್ನಿ ಸಂಘ ಕುಟುಂಬಗಳ ಸಂಯುಕ್ತಾಶ್ರಯದಲ್ಲಿ ವಿರಾಜಪೇಟೆಯಲ್ಲಿ “ಅನುಪಮ ನಾಯಕ ಅನರ್ಘ್ಯ ಸಂದೇಶ” ಎಂಬ ದೇಯ ವಾಕ್ಯದಲ್ಲಿ ಬೃಹತ್ ಮೀಲಾದ್ ಸಂದೇಶ ಜಾಥಾ ನಡೆಯಿತು.

ವಿರಾಜಪೇಟೆ ಪಂಜರ್ ಪೇಟೆ ಯಿಂದ ಆರಂಭ ಗೊಂಡ ಜಾಥಾವನ್ನು ಕೂರ್ಗ್ ಜಮೀಯತುಲ್ ಉಲಮಾ ಅಧ್ಯಕ್ಷ ಸಯ್ಯದ್ ಶಿಯಾಬುದ್ದೀನ್ ತಂಙಳ್ ಕಿಲ್ಲೂರ್ ದುಆ ನೆರವೇರಿಸುದರ ಮೂಲಕ ಚಾಲನೆ ನೀಡಿದರು.

ನಂತರ ಜಾಥಾ ವಿರಾಜಪೇಟೆ ಪಟ್ಟಣದ ಪ್ರಮುಖ ಬೀದಿಗಳಾದ ಕೆಎಸ್ಆರ್ ಟಿಸಿ ಬಸ್ ನಿಲ್ದಾಣ,ದೊಡ್ಡಟ್ಟಿ ಚೌಕಿ,ಗಡಿಯಾರ ಕಂಬ,ಖಾಸಗಿ ಬಸ್ ನಿಲ್ದಾಣ ಹಾಗೂ ಮೀನುಪೇಟೆ ಮೂಲಕ ಸಂಚರಿಸಿ ಅನ್ವಾರ್ ಕ್ಯಾಂಪಸ್ ನಲ್ಲಿ ಸಮಾಪನ ಗೊಂಡಿತು.
ಜಾಥಾದಲ್ಲಿ ವಿದ್ಯಾರ್ಥಿಗಳ, ಯುವಕರ, ಹಿರಿಯರ ದಫ್ ಪ್ರದರ್ಶನ, ಫ್ಲವರ್ ಶೋ, ಸ್ಕೌಟ್ಸ್, ನೋಡುಗರ ಗಮನ ಸೆಳೆಯಿತು.
ವಿವಿಧ ಜಮಾಅತ್ ಗಳಿಂದ ಆಗಮಿಸಿ ಆಕರ್ಷಣೆಯ ದಫ್ ಪ್ರದರ್ಶನ ನೀಡಿದ ತಂಡ ನೋಡುಗರ ಗಮನ ಸೆಳೆಯಿತು.
ಬೃಹತ್ ಜಾಥಾವು ಯಾವುದೇ ಸಮಸ್ಯೆಗಳಾಗದೆ ಶಾಂತಿಯ ಸಂದೇಶವನ್ನು ಸಾರುತ್ತಾ ವಿರಾಜಪೇಟೆ ಪಟ್ಟಣದ ವಿವಿಧ ರಸ್ತೆಯ ಬದಿಯಲ್ಲಿ ಸಂಚರಿಸಿತು. ರಸ್ತೆಯಲ್ಲಿ ತೆರಳುವ ವಾಹನಗಳಿಗೆ ಯಾವುದೇ ಸಮಸ್ಯೆಯಾಗದೆ ಶಿಸ್ತುಬದ್ದ ಜಾಥಾ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ಜಾಥಾವು ವಿರಾಜಪೇಟೆಯ ಹೃದಯ ಭಾಗಕ್ಕೆ ತಲುಪಿದ ಸಂದರ್ಭ ಶಾಫಿ ಜುಮಾ ಮಸೀದಿ ಹಾಗೂ ಡೋನೇಟರ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹೂ ಗುಚ್ಚ ನೀಡಿ ಅದ್ದೂರಿ ಸ್ವಾಗತ ಕೋರಲಾಯಿತು.

ಈ ಸಂದರ್ಭ ಜಾಥಾವನ್ನುದ್ದೇಶಿಸಿ ಮಾತನಾಡಿದ ಕೂರ್ಗ್ ಜಮಿಯತ್ತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಹಾಗೂ ಅನ್ವಾರ್ ಸಾರಥಿ ಅಶ್ರಫ್ ಅಹ್ಸನಿ ಅವರು ವಿಶ್ವಕ್ಕೆ ಒಳ್ಳೆಯ ಸಂದೇಶವನ್ನು ನೀಡಿದ ವ್ಯಕ್ತಿತ್ವವಾಗಿದ್ದಾರೆ ಪ್ರವಾದಿ ಮಹಮ್ಮದ್ ಪೈಗಂಬರ್ ರವರು.ನಾವೆಲ್ಲರೂ ಅವರನ್ನು ಪ್ರೀತಿಸಿ ಅವರ ಜೀವನ ಚರಿತ್ರೆಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ಬಡವರ್ಗದಲ್ಲಿದ್ದ ಜನ ಸಮೂಹವನ್ನು ಕೇವಲ 32 ವರ್ಷಗಳಲ್ಲಿ ಉತ್ತಮಸ್ಥಾನಕ್ಕೆ ಕೊಂಡೋಯ್ಡ ವ್ಯಕ್ತಿತ್ವವಾಗಿದ್ದಾರೆ ಮೊಹಮ್ಮದ್ ಪೈಗಂಬರ್ ರವರು.ಸ್ವತ್ತು ಹೊಂದಿದ ತಂದೆ ತಾಯಿ ಮರಣ ಹೊಂದಿದರೆ ಅವರ ಸ್ವತ್ತುಗಳನ್ನು ಒಬ್ಬರು ಮಾತ್ರ ವಶಪಡಿಸಿಕೊಳ್ಳದೆ,ಗಂಡು, ಹೆಣ್ಣುಮಕ್ಕಳಿಗು ಸಮಾನವಾಗಿ ದೊರೆಯುವಂತೆ ಮಾಡಿದ ಏಕೈಕ ವ್ಯಕ್ತಿತ್ವವಾಗಿದ್ದಾರೆ ಮೊಹಮ್ಮದ್ ಪೈಗಂಬರ್ ರವರು ಎಂದರು.
ಪರಸ್ಪರ ಸ್ನೇಹ,ಸೌಹಾರ್ದತೆ, ಶಾಂತಿಯ ಸಂದೇಶಕ್ಕೆ ಇವರು ಸಾರಿದ ಮಾರ್ಗವನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮೊಹಮ್ಮದ್ ಪೈಗಂಬರ್ ರವರ ಕುರಿತು ಸವಿಸ್ತಾರವಾಗಿ ವಿವರಿಸಿ ಮಾತನಾಡಿದರು.

ಜಾಥಾವನ್ನು ಉದ್ದೇಶಿಸಿ ಮೊಹಮ್ಮದ್ ಶರೀಫ್ ಅನ್ವಾರಿ ಮಾತನಾಡಿ ಇವತ್ತಿನ ಜಾಥಾ ಬಹಳ ಯಶಸ್ವಿಯಾಗಿದೆ,ಸಂದೇಶ ಜಾಥಾ ಮಾದರಿಯೋಗ್ಯವಾದ ಜಾಥಾವಾಗಿದೆ.ಈ ಜಾಥಾವು ಎರಡು ಮೂರು ಕಿಲೋ ಮೀಟರ್ ಹಾದು ಬಂದಾಗ ಎಲ್ಲಿಯೂ ಕೂಡ ದಿಕ್ಕಾರ ಕೂಗುದಾಗಲಿ,ಯಾರನ್ನು ಸವಾಲಿಸುವುದಾಗಲಿ,ಕೋಮು ಪ್ರಚೋದನೆಗೆ ಆಸ್ಪದ ಕೊಡದೆ ಶಿಸ್ತುಬದ್ಧವಾಗಿ ಸಾಗಿದೆ.ಇತರ ಧರ್ಮಕ್ಕೆ ಗೌರವನ್ನು ಕೊಡುತ್ತ ಶಾಂತಿ ಸೌಹಾರ್ದತೆಗೆ ಕರೆಯನ್ನು ನೀಡುತ್ತಾ ಸಂಧಾನಕರವಾಗಿ ಜಾಥಾ ಆಯೋಜಿಸಿದ್ದೇವೆ.ಇದಕ್ಕೆ ಸಹಕರಿಸಿದ ಎಲ್ಲರಿಗು ಕೃತಜ್ಞತೆಯನ್ನು ಸಲ್ಲಿಸಿದರು.

ಸಂಜೆ ಅಸ್ಮಾಉಲ್ ಹುಸ್ನಾ ರಾತೀಬ್ ಗೆ ಸಯ್ಯದ್ ಉಬೈದ್ ತಂಙಳ್ ವಳಪಟ್ಟಣಂ ನೇತೃತ್ವ ವಹಿಸಿ ದುಆ ಆಶೀರ್ವಚನ ನೀಡಿದರು.

ಪ್ರಖ್ಯಾತ ವಾಗ್ಮಿ ಜಬ್ಬಾರ್ ಸಖಾಫಿ ಪಾತೂರ್ ಹುಬ್ಬುರಸೂಲ್ ಪ್ರಭಾಷಣ ನಡೆಸಿ ಮೊಹಮದ್ ಪೈಗಂಬರ್ (ಸ.ಅ) ರವರ ಆದರ್ಶ,ಶಾಂತಿಯ ನೆಲೆ,ಅವರ ಜೀವನ ಚರಿತ್ರೆಯ ಕುರಿತು ವಿವರಿಸಿದರು.

ಈ ಸಂದರ್ಭ ಕೂರ್ಗ್
ಜಮೀಯತುಲ್ ಉಲಮಾ ಕೋಶಾಧಿಕಾರಿ ಹುಸೈನ್ ಸಖಾಫಿ ಎಮ್ಮೆಮಾಡು,
ಅಬ್ದುಲ್ ಅಝೀಝ್ ತಂಙಳ್,ಅನ್ವಾರ್ ಉಪಾಧ್ಯಕ್ಷರಾದ ಅಬೂಬಕ್ಕರ್ ಹಾಜಿ,ಕುಂಜಿಲ ಮುದರ್ರಿಸ್ ನಿಝಾರ್ ಅಹ್ಸನಿ,ಕೆಎಂಜೆ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಾಜಿ ಕುಂಜಿಲ,ಎಸ್ ವೈಎಸ್ ಜಿಲ್ಲಾಧ್ಯಕ್ಷರಾದ ಹಮೀದ್ ಮುಸ್ಲಿಯಾರ್,ಪ್ರಧಾನ ಕಾರ್ಯದರ್ಶಿ ಅಹ್ಮದ್ ಮದನಿ ಎಸ್ ಎಸ್ ಎಫ್ ಜಿಲ್ಲಾಧ್ಯಕ್ಷರಾದ ಝುಬೈರ್ ಸಅದಿ,ಪ್ರಧಾನ ಕಾರ್ಯದರ್ಶಿ ಜುನೈದ್ ಅಮ್ಮತ್ತಿ,
ಇಸ್ಮಾಯಿಲ್ ಸಖಾಫಿ,ಖಾತಿಮ್ ತಂಙಳ್,
ಮೀಲಾದ್ ಜಾಥಾದ ಸ್ವಾಗತ ಸಮಿತಿಯ ಛೇರ್ಮನ್ ಖಾಲಿದ್ ಫೈಝಿ ಅಂಬಟ್ಟಿ,ಕನ್ವೀನರ್ ಹಂಝ ಮದನಿ ಗುಯ್ಯ,ಎಸ್ ಎಸ್ ಎಫ್ ರಾಷ್ಟ್ರೀಯ ಮಾಜಿ ಕಾರ್ಯದರ್ಶಿ ಯಾಕೂಬ್ ಮಾಸ್ಟರ್,ಎಸ್ ಎಸ್ ಎಫ್ , ಎಸ್ ವೈ ಎಸ್,ಕೆಎಂಜೆ,ಎಸ್ ಜೆಎಂ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!