ಕುಶಾಲನಗರ, ಸೆ 28: ಕೆದಕಲ್ ಗ್ರಾಮದ ನೆಗದಾಳ್ ನಿವಾಸಿಯಾದ ಶಿವಪ್ರಕಾಶ್ @ಶಶಿ ಎಂಬಾತನು ದಿ:08-03-2022 ರಂದು ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆಸಿರುವ ಕುರಿತು ದೂರು ಸ್ವೀಕರಿಸಿದ್ದು, ಕೊಡಗು ಮಹಿಳಾ : 354(a), 376(2) (1) IPC & 4 & 8 POCSO ದಾಖಲಿಸಿ ತನಿಖೆ ಕೈಗೊಂಡು ದಿನಾಂಕ: 10-03-2022 ರಂದು ಆರೋಪಿ ಶಿವಪ್ರಕಾಶ್ @ ಶಶಿಯನ್ನು ದಸ್ತಗಿರಿ ಮಾಡಿ ಘನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ.
ಸದರಿ ಪ್ರಕರಣದ ತನಿಖಾಧಿಕಾರಿಯಾದ ಮುದ್ದುಮಾದೇವ, ಪಿಐ, ಕೊಡಗು ಮಹಿಳಾ ಪೊಲೀಸ್ ಠಾಣೆ ಮತ್ತು ಅಚ್ಚಮ್ಮ ಕೆ.ಬಿ, ಪಿಎಸ್‌ಐ, ಕುಮಾರಿ, ಮಹೆಚ್ಸಿ-108, ಶ್ರೀ ಶ್ರೀನಿವಾಸ್ ಹೆಚ್.ಆರ್. ಹೆಚ್.ಸಿ-108 ರವರುಗಳು ತನಿಖಾ ಸಹಾಯಕರಾಗಿ ಪ್ರಕರಣದ ಸಂಪೂರ್ಣ ತನಿಖೆಯನ್ನು ಕೈಗೊಂಡು ಆರೋಪಿ ಶಿವಪ್ರಕಾಶ್ @ ಶಶಿ ವಿರುದ್ಧ ದೋಷಾರೋಪಣ ಪತ್ರವನ್ನು ದಿ: 07-05-2022 ರಂದು ಘನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಮಡಿಕೇರಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದು, ಘನ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆಯನ್ನು ನಡೆಸಿ ದಿನಾಂಕ: 27-09-2024 ರಂದು ಸದರಿ ಪ್ರಕರಣದ ಆರೋಪಿಯಾದ ಶಿವಪ್ರಕಾಶ್ ಶಶಿ, 47 ವರ್ಷ ಈತನಿಗೆ ಕಲಂ: 376(2) (ಎಫ್) ಐಪಿಸಿ ರಲ್ಲಿ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ರೂ. 20,000/- ಗಳ ದಂಡ ಮತ್ತು ಕಲಂ: 354(ಎ)(1) ಐಪಿಸಿ ರಲ್ಲಿ ಒಂದು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ರೂ. 5000/- ಗಳ ದಂಡವನ್ನು ವಿಧಿಸಿ ಹಾಗೂ ನೊಂದ ಬಾಲಕಿಗೆ ರೂ. 4,00,000/- ಗಳ ಪರಿಹಾರವನ್ನು ಒದಗಿಸುವಂತೆ ಘನ ನ್ಯಾಯಾಲಯದ ಮಾನ್ಯ ನ್ಯಾಯಾಧೀಶರಾದ ಹೊಸಮನಿ ಪುಂಡಲೀಕ ರವರು ತೀರ್ಪು ನೀಡಿರುತ್ತಾರೆ.
ಸದರಿ ಪ್ರಕರಣದ ತನಿಖಾಧಿಕಾರಿಗಳಾದ ಮುದ್ದುಮಾದೇವ, ಪಿಐ, ಕೊಡಗು ಮಹಿಳಾ ಪೊಲೀಸ್ ತಾಣೆ ಹಾಗೂ ತನಿಖಾ ಸಹಾಯಕರವರುಗಳು ಆರೋಪಿಗಳ ವಿರುದ್ಧ ಸಾಕ್ಷ್ಯಾಧಾರಗಳನ್ನು ಕಲೆಹಾಕಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸುವಲ್ಲಿ ಉತ್ತಮ ಕಾರ್ಯ ನಿರ್ವಹಿಸಿರುತ್ತಾರೆ ಮತ್ತು ಸರ್ಕಾರಿ ಅಭಿಯೋಜಕರಾದ .ರುದ್ರಪ್ರಸನ್ನ ರವರು ಸದರಿ ಮೇಲ್ಕಂಡ ಆರೋಪಿಯ ವಿರುದ್ಧ ಘನ ನ್ಯಾಯಾಲಯದಲ್ಲಿ ಉತ್ತಮವಾಗಿ ವಾದ ಮಂಡಿಸಿ ಶಿಕ್ಷೆಯನ್ನು ವಿಧಿಸುವಲ್ಲಿ ಉತ್ತಮ ಕಾರ್ಯ ನಿರ್ವಹಿಸಿರುತ್ತಾರೆ.
Back to top button
error: Content is protected !!