ಕುಶಾಲನಗರ, ಸೆ 26: ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಟಿ.ಶೆಟ್ಟಿಗೇರಿ ಗ್ರಾಮದ ನಿವಾಸಿಯಾದ ಪ್ರೇಮಾ ಹಾಗೂ ಅವರ ತಂಗಿ ವೀಣಾ ದಿನಾಂಕ: 06-02-2022 ರಂದು ಪೊನ್ನಂಪೇಟೆಯ ಕೊಡವ ಸಮಾಜದಲ್ಲಿನ ಮದುವೆ ಕಾರ್ಯಕ್ರಮಕ್ಕೆ ತೆರಳಿ ಮನೆಗೆ ಹಿಂದಿರುಗುವಾಗ ಸಂಜೆ ಸುಮಾರು 05.00 ಗಂಟೆಗೆ ಮನೆಯ ಸಮೀಪದ ರಸ್ತೆಯಲ್ಲಿ ಪ್ರೇಮಾ ಹಾಗೂ ವೀಣಾ ಅವರ ಮೇಲೆ ಹರಿತವಾದ ಆಯುಧದಿಂದ ತಲೆ & ಕುತ್ತಿಗೆಗೆ ಹಲ್ಲೆ ನಡೆಸಿದ್ದು, ಪ್ರೇಮಾ ರವರನ್ನು ಕೊಲೆ ಮಾಡಿರುವ ಮತ್ತು ವೀಣಾ ರವರಿಗೆ ಗಂಭೀರ ಗಾಯಗೊಳಿಸಿರುವ ಕುರಿತು ದಿ: 07-02-2022 ರಂದು ದೂರು ಸ್ವೀಕರಿಸಿದ್ದು, ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಕಲಂ: 302, 307 ಐಪಿಸಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿರುತ್ತದೆ.
ಸದರಿ ಪ್ರಕರಣದಲ್ಲಿ ಗಂಭೀರವಾಗಿ ಹಲ್ಲೆಗೊಳಗಾಗಿದ್ದ ವೀಣಾ ರವರ ವಿಚಾರಣೆ ಸಂದರ್ಭ ಮೃತ ಪ್ರೇಮಾ ರವರ ಪತಿ ಸೋಮಶೇಖರ್ ರವರ ಅಕ್ಕನ ಮಗನಾದ ರಾಜೇಶ್ ಎಂಬಾತನು ಆಸ್ತಿ ವಿಚಾರಕ್ಕಾಗಿ ಕೊಲೆ ಮಾಡಿರುವುದು ತನಿಖೆಯಲ್ಲಿ ತಿಳಿದುಬಂದಿರುತ್ತದೆ.
ಸದರಿ ಪ್ರಕರಣದ ಘಟನೆ ಸ್ಥಳಕ್ಕೆ ಹಿರಿಯ ಅಧಿಕಾರಿ/ಸಿಬ್ಬಂದಿಯವರುಗಳು ಭೇಟಿ ನೀಡಿ ಕೃತ್ಯಕ್ಕೆ ಸಂಬಂಧಿಸಿದ ಮಾಹಿತಿ ಹಾಗೂ ಸಾಕ್ಷಾಧಾರಗಳನ್ನು ಕಲೆ ಹಾಕಿ ತಲೆಮರೆಸಿಕೊಂಡಿರುವ ಆರೋಪಿ ಪತ್ತೆಗಾಗಿ ಆರ್.ಮೋಹನ್ ಕುಮಾರ್, ಡಿಎಸ್ ಪಿ, ವಿರಾಜಪೇಟೆ ಉಪವಿಭಾಗ, ಮಂಜಪ್ಪ.ಸಿ.ಎ, ಪಿಐ, ಕುಟ್ಟಿ ವೃತ್ತ, ರವೀಂದ್ರ, ಪಿಎಸ್‌ಐ, ಶ್ರೀಮಂಗಲ ಪೊಲೀಸ್ ಠಾಣೆ & ಪ್ರಮೋದ್, ಎಎಸ್‌ಐ, ಶ್ರೀಮಂಗಲ ಪೊ.ಠಾ ಹಾಗೂ ಮಹದೇವಸ್ವಾಮಿ, ಪಿಸಿ, ಪೊನ್ನಂಪೇಟೆ ಪೊ.ಠಾ ಅಪರಾಧ ಪತ್ತೆ ಸಿಬ್ಬಂದಿಗಳು ಕೈಗೊಳ್ಳಲಾಗಿರುತ್ತದೆ. & ತಾಂತ್ರಿಕ ಸಿಬ್ಬಂದಿಗಳ ವಿಶೇಷ ತಂಡವನ್ನು ರಚಿಸಿ ತನಿಖೆಯನ್ನು
ಸದರಿ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಟಿ.ಶೆಟ್ಟಿಗೇರಿ ನಿವಾಸಿಯಾದ ಆರೋಪಿ ರಾಜೇಶ, (42 ವರ್ಷ) ಎಂಬಾತನ ಪತ್ತೆಗಾಗಿ ಸತತ 2 ವರ್ಷಗಳಿಂದ ವಿಶೇಷ ತನಿಖಾ ತಂಡವು ಕಾರ್ಯಾಚರಣೆ ನಡೆಸಿ ದಿನಾಂಕ: 25-09-2024 ರಂದು ದಕ್ಷಿಣಕನ್ನಡ ಜಿಲ್ಲೆ ಪುತ್ತೂರು ಸಮೀಪದ ಕುಂಬ್ರ ಎಂಬ ಸ್ಥಳದಲ್ಲಿ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ.
ಆರೋಪಿ ರಾಜೇಶನ ಮಾವ ಸೋಮಶೇಖರ್ ರವರು 2021 ನೇ ಸಾಲಿನಲ್ಲಿ ಮೃತರಾಗಿದ್ದು, ಮಾವನ ಸಾವಿಗೆ ಅವರ ಪತ್ನಿ ಪ್ರೇಮಾ ಕಾರಣವಾಗಿರಬಹುದು ಹಾಗೂ ರಾಜೇಶನ ಕುಟುಂಬಕ್ಕೆ ಸೇರಿದ ಆಸ್ತಿಯನ್ನು ಪ್ರೇಮಾ ರವರು ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ದಿ: 06-02-2022 ರಂದು ಕೊಲೆ ಮಾಡಿ ಮುರುಡೇಶ್ವರಕ್ಕೆ ತೆರಳಿ ನಂತರ ಭಟ್ಕಳದಲ್ಲಿ ಮೊಬೈಲನ್ನು ನಾಶಗೊಳಿಸಿ ಮಹಾರಾಷ್ಟ್ರ ರಾಜ್ಯದ ಪನ್‌ವೇಲ್‌ನಲ್ಲಿ ಕೆಲಸ ಮಾಡಿಕೊಂಡಿರುವುದು ವಿಚಾರಣೆಯಲ್ಲಿ ತಿಳಿದುಬಂದಿರುತ್ತದೆ.
ಸದರಿ ಪ್ರಕರಣ ಆರೋಪಿಯನ್ನು ಪತ್ತೆ ಹಚ್ಚಿವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿರವರುಗಳನ್ನು ಕೆ. ರಾಮರಾಜನ್, ಐಪಿಎಸ್, ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ, ಮಡಿಕೇರಿ ರವರು ಶ್ಲಾಘಿಸಿರುತ್ತಾರೆ.
Back to top button
error: Content is protected !!