ಮಡಿಕೇರಿ, ಸೆ 26 ಮೂರ್ನಾಡು ಪ್ರೌಢ ಶಾಲೆಯಲ್ಲಿ ನಡೆದ ಮೂರ್ನಾಡು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಹೊದವಾಡದ ರಾಫೆಲ್ಸ್ ಇಂಟರ್ನ್ಯಾಷನಲ್ ಸ್ಕೂಲ್ ಮತ್ತು ಪಿಯು ಕಾಲೇಜು ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿ ಸಾಧನೆಗೈದಿದ್ದಾರೆ.
1 ರಿಂದ 4ನೇ ತರಗತಿ ವಿಭಾಗದ ಅರೇಬಿಕ್ ಧಾರ್ಮಿಕ ಪಠಣದಲ್ಲಿ ಉಮೈಝ್ ಪ್ರಥಮ, ಚಿತ್ರಕಲೆ ಸ್ಪರ್ಧೆಯಲ್ಲಿ ಲಾಜಿಯಾ ಫಾತಿಮಾ ಪ್ರಥಮ,ಆಶಯ ಭಾಷಣ ಜಿಯಾನ ಜಿ.ಯು ತೃತೀಯ,ಛದ್ಮವೇಷ ರಾಹಿದ್ ಎಂ.ಎನ್ ತೃತೀಯ,ಹಿಂದಿ ಕಂಠಪಾಠದಲ್ಲಿ ಸಫ್ವಾನ್ ಎ.ಆರ್ ತೃತೀಯ ಸ್ಥಾನಗಳಿಸಿದ್ದಾರೆ.
5 ರಿಂದ 7ನೇ ತರಗತಿ ವಿಭಾಗದಲ್ಲಿ ಅರೇಬಿಕ್ ಧಾರ್ಮಿಕ ಪಠಣ ಹೈಝ್ ಸಿ.ಎಚ್ ಪ್ರಥಮ, ಭಕ್ತಿಗೀತೆ ಫಾತಿಮತ್ ವಫಾ ಪ್ರಥಮ, ಹಾಗೂ ಚಿತ್ರಕಲೆ ಸ್ಪರ್ಧೆಯಲ್ಲಿ ನಿಸಾಜ್ ತೃತೀಯ ಸ್ಥಾನಗಳಿಸಿದ್ದಾರೆ.
8ನೇ ತರಗತಿಯಿಂದ 12ನೇ ತರಗತಿ ವಿಭಾಗದಲ್ಲಿ ನಡೆದ ರಂಗೋಲಿ ಸ್ಪರ್ಧೆಯಲ್ಲಿ ಫಜೀಲ ಪಿ.ಎಂ ತೃತೀಯ,ಹಿಂದಿ ಭಾಷಣ ಫೈಜಾ ಕೆ.ಆರ್ ತೃತೀಯ,ಆಶು ಭಾಷಣ ಅಸ್ಮತ್ ರುಮಾನ ತೃತೀಯ,ಕನ್ನಡ ಪ್ರಬಂಧ ಸಲ್ಮಾನ್ ಫಾರಿಸ್ ದ್ವಿತೀಯ, ಗಜಲ್ ಸ್ಪರ್ಧೆಯಲ್ಲಿ ಸಲ್ಮಾನ್ ಫಾರಿಸ್ ಪ್ರಥಮ ಸ್ಥಾನಗಳಿಸಿದ್ದಾರೆ.
ಕವಾಲಿ ಸ್ಪರ್ಧೆಯಲ್ಲಿ ಉನೈಸ್ ನೇತೃತ್ವದ ರಾಝಿಕ್ ಎ.ಸೆಡ್,ಬಿಲಾಲ್ ಹೆಚ್.ಎ,ಬಿಲಾಲ್ ಆರ್.ಜೆ,ಮಹ್ರೂಫ್ ಪಿ.ಯು ಮತ್ತು ಸಲ್ಮಾನ್ ಫಾರಿಸ್ ಯು.ಕೆ ತಂಡವು ದ್ವಿತೀಯ ಸ್ಥಾನಗಳಿಸಿದ್ದಾರೆ.
Back to top button
error: Content is protected !!