ಕುಶಾಲನಗರ, ಸೆ. 26: ಹೆಬ್ಬಾಲೆಯಲ್ಲಿರುವ
ಕಾಳಿಕಾಂಬ ವಿಶ್ವಕರ್ಮ ಕುಶಲ ಕೈಗಾರಿಕಾ ಸಹಕಾರ ಸಂಘದ
ವಾರ್ಷಿಕ ಮಹಾಸಭೆಯು ಸಂಘದ ಕಚೇರಿ ಆವರಣದಲ್ಲಿ ಸಂಘದ ಅಧ್ಯಕ್ಷ ಹೆಚ್.ಬಿ. ಲಿಂಗಮೂರ್ತಿ ಅಧ್ಯಕ್ಷತೆಯಲ್ಲಿ ನಡೆಯಿತು.
2023- 24 ನೇ ಸಾಲಿನ ಲೆಕ್ಕ ಪರಿಶೋಧನಾ ವರದಿ, ಸಂಘದ ಜಮಾ ಖರ್ಚು, ಲಾಭ ನಷ್ಟದ ಕುರಿತು ಸರ್ವ ಸದಸ್ಯರೊಂದಿಗೆ ಚರ್ಚಿಸಲಾಯಿತು. ಹೊಸದಾಗಿ ಯಾವುದಾದರೂ ಒಂದು ಉಪಯೋಗವಾಗುವ ಕೈಗಾರಿಕೆಯನ್ನು ನಿರ್ಮಿಸುವುದು ಹಾಗೂ ಹೊಸ ಹೊಸ ಯೋಜನೆಗಳನ್ನು ಕೈಗೊಳ್ಳುವ ನಿರ್ಧಾರದ ಬಗ್ಗೆ ಚರ್ಚೆಗಳು ನಡೆದವು.
ಅಧ್ಯಕ್ಷ ಲಿಂಗಮೂರ್ತಿ ಮಾತನಾಡಿ, ಹೆಚ್ಚು ಹೆಚ್ಚು ಸದಸ್ಯರನ್ನು ಸೇರಿಸಿಕೊಂಡು ಸಂಘದ ಅಭಿವೃದ್ಧಿಗೆ ಸರ್ವ ಸದಸ್ಯರು ಕೈಜೋಡಿಸಬೇಕೆಂದು ಮನವಿ ಮಾಡಿಕೊಂಡರು.
ಸಭೆಯಲ್ಲಿ ಸಂಘದ ಗೌರವ ಕಾರ್ಯದರ್ಶಿ ಬಿ.ಬಿ. ನಾಗರಾಜ್, ಸಹ ಕಾರ್ಯದರ್ಶಿ ಹೆಚ್.ಆರ್, ಲೋಕನಾಥಾಚಾರಿ, ನಿರ್ದೇಶಕರಾದ ದೇವದಾಸ್ ,ದಿನೇಶಾಚಾರಿ, ಹೆಚ್.ಬಿ, ಕೃಷ್ಣ, ವಿ.ನಂಜುಂಡಾಚಾರಿ, ಉಷಾ, ಶೋಭಾ ರಾಣಿ, ಸಂಘದ ಸದಸ್ಯರು ಹಾಜರಿದ್ದರು.
Back to top button
error: Content is protected !!