ಕುಶಾಲನಗರ, ಆ 14: ಆಗಸ್ಟ್ 11 ಮತ್ತು 12ರಂದು ಬ್ಯಾಂಡಿ ಎಸ್ಸೋಸಿಯೇಷನ್ ಫಾರ್ ಇಂಡಿಯನ್ಸ್ ವತಿಯಿಂದ ಖೇಲೋ ಇಂಡಿಯಾದ ಆಯ್ಕೆ ಪ್ರಕ್ರಿಯೆ ಕ್ಯಾಂಪ್ನಲ್ಲಿ 16 ವರ್ಷದ ಒಳಗಿನ ಹುಡುಗಿಯರ ವಿಭಾಗದಲ್ಲಿ ಕೊಡಗಿನ ಏಂಜಲ್ಸ್ ವಿಂಗ್ಸ್ ಸ್ಕೂಲ್ ಆಫ್ ಡಾನ್ಸ್ ನೃತ್ಯ ಸಂಸ್ಥೆಯ ಮಾಸ್ಟರ್ ಅನೋದ್ ರವರ ನೇತೃತ್ವದಲ್ಲಿ ತರಬೇತಿ ಪಡೆಯುತ್ತಿರುವ ಲಕ್ಷ್ಮೀಶ್ರೀ ವಿ (11) ಚೈತನ್ಯ ಡಿ (12) ಆರ್ಯ ಪಿ ಎಸ್ (12) ಹಾಗೂ 10 ವರ್ಷದ ಒಳಗಿನ ಹುಡುಗರ ವಿಭಾಗದಲ್ಲಿ ಲಿಯೋನೆಲ್ ಲುಕ್ ಡಿಸೋಜಾ (9) ನಾಲ್ಕು ವಿದ್ಯಾರ್ಥಿಗಳು ಉತ್ತಮ ಆಟ ಆಡುವುದರ ಮೂಲಕ ಬೆಸ್ಟ್ ಪರ್ಫಾರ್ಮರ್ ಆಫ್ ದಿ ಕ್ಯಾಂಪ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿ ಅಮಿತಾಬ್ ಶರ್ಮ ಜಿ ಎಕ್ಸಿಕ್ಯೂಟಿವ್ ಕೌನ್ಸಿಲ್ ಮೆಂಬರ್ ಇಂಡಿಯನ್ ಒಲಂಪಿಕ್ ಹಾಗೂ ಜಗರಾಜ್ ಸಿಂಗ್ ಸಹಾನೆ ಹಾಗೂ ಬ್ಯಾಂಡಿ ಆಫೀಶಿಯಲ್ ಟೀಮ್ ರವರ ಸಮ್ಮುಖದಲ್ಲಿ ಚಿನ್ನದ ಪದಕವನ್ನು ಪಡೆದುಕೊಂಡು ನವೆಂಬರ್ ನಲ್ಲಿ ರಷ್ಯಾದಲ್ಲಿ ನಡೆಯಲಿರುವ ಟ್ರೈನಿಂಗ್ ಕ್ಯಾಂಪಿಗೆ ಆಯ್ಕೆಯಾಗಿರುತ್ತಾರೆ.
ಹಾಗೂ 12 ವರ್ಷದ ಒಳಗಿನ ಹುಡುಗಿಯರ ವಿಭಾಗದಲ್ಲಿ ಏಂಜಲ್ಸ್ ವಿಂಗ್ಸ್ ಸ್ಕೂಲ್ ಆಫ್ ಡಾನ್ಸ್ ನ ಮೂರು ವಿದ್ಯಾರ್ಥಿಗಳು ಕರ್ನಾಟಕವನ್ನು ಪ್ರತಿನಿಧಿಸಿ ಐಸ್ ಹಾಕಿ ಆಡಲಿದ್ದಾರೆ ಈ ಸಂದರ್ಭದಲ್ಲಿ ಕರ್ನಾಟಕ ಬ್ಯಾಂಡಿ ಅಸೋಸಿಯೇಷನ್ ಜನರಲ್ ಸೆಕ್ರೆಟರಿ ಆದಂತಹ ಗುರುಮೂರ್ತಿಯವರು ಸಹ ಉಪಸ್ಥಿತರಿದ್ದರು
Back to top button
error: Content is protected !!