ಆರೋಪ

ಹಾರಂಗಿ ಎಡದಂಡೆ‌ ನಾಲೆ ದುರಸ್ಥಿ ಕಾಮಗಾರಿ ಕಳಪೆ ಆರೋಪ

ನಾಲೆ ಸೈಡ್ ವಾಲ್ ಕುಸಿತಕ್ಕೆ ಆಕ್ರೋಷ

ಕುಶಾಲನಗರ, ಆ 06:ಕಾವೇರಿ ನೀರಾವರಿ ನಿಗಮ ಹಾರಂಗಿ ಎಡದಂಡೆ ನಾಲೆಯ ದುರಸ್ತಿಯ ಕಾಮಗಾರಿ ಕಳಪೆ ಇಂದ ಕೂಡಿದ್ದು ಮಳೆ ಬಂದ ಸಂದರ್ಭದಲ್ಲಿ ನಾಲ ಸೈಡ್ ವಾಲ್ ಗಳು ಕುಸಿಯುತ್ತಿವೆ.

ಸುಮಾರು 40 ರಿಂದ 48 ಕೋಟಿ ಸರ್ಕಾರದ ಹಣ ನಿರುಪಾಲು, ಇದರಿಂದ ಯಾರಿಗೋ ಲಾಭ.ಇದಕ್ಕೆ ಸಂಬಂಧಪಟ್ಟಂತೆ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಇನ್ನು ಉತ್ಕೃಷ್ಟವಾದ ರೈತರಿಗೆ ಅನುಕೂಲವಾಗುವಂತೆ ಕಾಮಗಾರಿ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮೈಸೂರು ಮತ್ತು ಕೊಡಗು ಜಿಲ್ಲಾ ಸಂಚಾಲಕ ಡಾ. ಅರುಣ್ ಕುಮಾರ್,ಕೊಡಗು ಜಿಲ್ಲಾಧ್ಯಕ್ಷ ಶರತ್ ಕುಮಾರ್ ಹಾಗೂ ಉಪಾಧ್ಯಕ್ಷ ಪ್ರಸನ್ನ ರೆಡ್ಡಿ ಆಗ್ರಹಿಸಿದ್ದಾರೆ.

ಎಡದಂಡೆಯ ಹಾರಂಗಿ ನಾಲೆಯು ರೈತರ ವ್ಯವಸಾಯಕ್ಕೆ ಉಪಯೋಗ ಆಗುವಂತೆ ನೀರು ಒದಗಿಸುವ ಮುಖ್ಯನಾಲೆ ಆಗಿದ್ದು ದುರಸ್ತಿ ಕಾಮಗಾರಿಯು ಇನ್ನು ಉನ್ನತ ಉತ್ಕೃಷ್ಟ ಮಟ್ಟದ ದೀರ್ಘ ಕಾಲ ಬಾಳಿಕೆ ಬರುವಂತೆ ಹಾಗೂ ರೈತರಿಗೆ ಉಪಯೋಗವಾಗುವಂತೆ ಸುಸಜ್ಜಿತವಾಗಿ ಕಾಮಗಾರಿ ನಡೆಸಬೇಕು,ಇಲ್ಲವೆಂದರೆ ಕಾಮಗಾರಿ ಮಾಡಿದರು ಪ್ರಯೋಜನವಿಲ್ಲ.ಮಳೆಯ ಸಂದರ್ಭದಲ್ಲಿ ನಾಳೆಯ ಸೈಡ್ ವಾಲ್ ಗಳು ಕಳಚಿ ಬಿದ್ದಿವೆ ಎಂದರೆ ಏನರ್ಥ!ಅಂತಹ ದೊಡ್ಡ ಮಟ್ಟದ ಪ್ರವಾಹ ಆಗಿದೆಯೇ ಇದರ ಬಗ್ಗೆ ಅಧಿಕಾರಿಗಳೇ ಯೋಚನೆ ಮಾಡಬೇಕು ಸರ್ಕಾರದ ಹಣವನ್ನು ರೈತರಿಗೆ ಅನುಕೂಲವಾಗುವಂತೆ ಪ್ರಾಮಾಣಿಕರೀತಿ ಯಲ್ಲಿ ಸೌಲಭ್ಯವನ್ನು ಕಲ್ಪಿಸಬೇಕು. ನಾಲೆಯೂ ಸಂಪೂರ್ಣ ಹದಗೆಟ್ಟಿದ್ದು ನಾಲೆ ಒಳಗೆ ಮರಗಿಡ ಬೆಳೆದು ಕಲ್ಲು ದೊಡ್ಡ ದೊಡ್ಡ ಬಂಡೆಗಳು ಬಿದ್ದು ಹೋಗಿವೆ.ಇವೆಲ್ಲವನ್ನು ತೆಗೆದು ದುರಸ್ತಿ ಕಾಮಗಾರಿ ಮಾಡಬೇಕು, ರೈತರಿಗೆ ಅನುಕೂಲವಾಗುವಂತೆ ವಾಲ್ ಗಳನ್ನು ಹಾಕಬೇಕು. ನಾಲ ದುರಸ್ತಿಯ ಕಾಮಗಾರಿಯು ದೀರ್ಘಕಾಲವೀರಬೇಕು ಎರಡು ಮೂರು ವರ್ಷಗಳಲ್ಲೇ ಎಲ್ಲಾ ಹೊಡೆದು ಕುಸಿದುಹೋದಲ್ಲಿ, ಉಪಯೋಗವೇನು, ಇದಕ್ಕೆ ಸಂಬಂಧಪಟ್ಟಂತಹ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿಕೊಟ್ಟು ಶೀಘ್ರದಲ್ಲಿ ದುರಸ್ತಿ ಕಾಮಗಾರಿಯನ್ನು ಪೂರ್ಣಗೊಳಿಸಿ, ವ್ಯವಸಾಯಕ್ಕೆ ನೀರನ್ನು ಒದಗಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಮೈಸೂರು ಮತ್ತು ಕೊಡಗು ಜಿಲ್ಲಾ ಸಂಚಾಲಕ ಡಾಕ್ಟರ್ ಅರುಣ್ ಕುಮಾರ್ H R ಆಗ್ರಹಿಸಿದ್ದಾರೆ. ಇಲ್ಲವಾದಲ್ಲಿ ರೈತರೊಂದಿಗೆ ಹಾರಂಗಿ ನೀರಾವರಿ ನಿಗಮ ಕಚೇರಿ ಎದುರು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!