ಚುನಾವಣೆ

ಹೆಬ್ಬಾಲೆ ಕ್ಷೇತ್ರದಲ್ಲಿ ಹೆಚ್.ಬಿ.ಚಂದ್ರಪ್ಪ ತಂಡದಿಂದ ಮತಯಾಚನೆ

ಕುಶಾಲನಗರ, ಅ 28: 387ನೇ ಕುಶಾಲನಗರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿಯ ಮುಂದಿನ ಸಾಲಿನ ಚುನಾವಣೆ ಅ.31 ರಂದು ನಡೆಯಲಿದ್ದು ವಿವಿಧ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳಿಂದ ಮತಯಾಚನೆ ಭರದಿಂದ ಸಾಗಿದೆ.

ಹೆಬ್ಬಾಲೆ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿರುವ ಸಂಘದ ಮಾಜಿ ಅಧ್ಯಕ್ಷರಾಗಿದ್ದ ಹೆಚ್‌.ಬಿ.ಚಂದ್ರಪ್ಪ ಸೇರಿದಂತೆ ಅವರ ತಂಡದವರಾದ ಬಿಸಿಎಂ ಎ ಕ್ಷೇತ್ರದಿಂದ ಹೆಚ್.ಎನ್.ಮಹದೇವ, ಮಹಿಳಾ ಮೀಸಲು ಕ್ಷೇತ್ರದಿಂದ ಹೆಚ್.ಟಿ.ಚಂದ್ರಕಲಾ ಅವರು ಬೆಂಬಲಿಗರೊಂದಿಗೆ‌ ಮತಯಾಚನೆಯಲ್ಲಿ ತೊಡಗಿದ್ದಾರೆ.
ಈ ಮೂವರು ಅಭ್ಯರ್ಥಿಗಳ ಆಟೋ ರಿಕ್ಷಾ ಚಿನ್ಹೆಗೆ ಕುಶಾಲನಗರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಹೆಬ್ಬಾಲೆ ಕ್ಷೇತ್ರ ವ್ಯಾಪ್ತಿಯ ಕೂಡುಮಂಗಳೂರು, ಕೂಡಿಗೆ, ಹೆಬ್ಬಾಲೆ, ತೊರೆನೂರು, ಶಿರಂಗಾಲ ಗ್ರಾಪಂ ವ್ಯಾಪ್ತಿಯ ಉಪಗ್ರಾಮಗಳಲ್ಲಿರುವ 667 ಮತದಾರರ ಸದಸ್ಯರುಗಳು ತಮ್ಮ ಅತ್ಯಮೂಲ್ಯ ಮತ ನೀಡಿ ವಿಜಯಶಾಲಿಗಳಾಗಿಸಲು ಹೆಚ್.ಬಿ.ಚಂದ್ರಪ್ಪ ಅವರು ಕೋರಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!