ಕಾರ್ಯಕ್ರಮ

ಕೆ.ಎಸ್. ಆರ್.ಟಿ.ಸಿ. ನೂತನ ಬಸ್ಸ್ ಮಾರ್ಗಕ್ಕೆ ಚಾಲನೆ

ಸೋಮವಾರಪೇಟೆ, ಆ 06: ಗ್ರಾಮೀಣ ಪ್ರದೇಶಗಳಿಗೆ ಸಾರಿಗೆ ಸೌಲಭ್ಯ ದೊರಕುವಂತಾಗಬೇಕು ಎಂದು ತಪೋಕ್ಷೇತ್ರ ಮನೇಹಳ್ಳಿ ಮಠದ ಶ್ರೀ.ಮಹಾಂತ ಶಿವಲಿಂಗ ಸ್ವಾಮೀಜಿ ಆಶಯ ವ್ಯಕ್ತಪಡಿಸಿದರು.
ರಾಜ್ಯ ರಸ್ತೆ ಸಾರಿಗೆ ನಿಗಮ ಅರಕಲಗೂಡು ಡಿಪೋದಿಂದ ಮಾಗಲು,ಅಂಕನಹಳ್ಳಿ ಮೂಲಕ ಮನೆಹಳ್ಳಿ ಮಠಕ್ಕೆ ಬರುವ ಕೆ.ಎಸ್ ಆರ್.ಟಿ.ಸಿ. ನೂತನ ಬಸ್ಸ್ ಮಾರ್ಗಕ್ಕೆ ಮಠದ ಆವರಣದಲ್ಲಿ ಚಾಲನೆ ನೀಡಿ ಮಾತನಾಡಿದರು.
ಕಳೆದ ಹಲವು ವರ್ಷಗಳಿಂದ ಈ ಭಾಗಕ್ಕೆ ಸರ್ಕಾರಿ ಬಸ್ಸ್ ನ ಬೇಡಿಕೆ ಇತ್ತು,ಇಲ್ಲಿನ ವಿದ್ಯಾರ್ಥಿಗಳು,ಗ್ರಾಮಸ್ಥರು ನಗರ ಪ್ರದೇಶಗಳಿಗೆ ತೆರಳಲು ಪರದಾಡುತ್ತಿದ್ದರು ಈ ಬಗ್ಗೆ ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ ಅವರನ್ನು ಭೇಟಿಮಾಡಿ ಮನವಿ ಸಲ್ಲಿಸಿದ ಹಿನ್ನಲೆಯಲ್ಲಿ ಸಚಿವರು ಇಂದಿನಿಂದ ಬಸ್ಸ್ ಸೌಲಭ್ಯ ಕಲ್ಪಿಸಿದ್ದಾರೆ ಎಂದರು.
ಬೆಳಿಗ್ಗೆ 8.30ಕೆ ಅರಕಲಗೂಡಿನಿಂದ ಹೊರಟು ಮಾಗಲು, ಅಂಕನಹಳ್ಳಿ ಮೂಲಕ ಶನಿವಾರಸಂತೆ ನಂತರ ಅರಕಲಗೂಡಿಗೆ ತೆರಳಲಿದೆ. ಸಂಜೆ 4 ಗಂಟೆಗೆ ಮತ್ತೊಂದು ಬಸ್ಸ್ ಇದೆ ಮಾರ್ಗವಾಗಿ ಸಂಚರಿಸಲಿದೆ ಎಂದರು.
ಹಿಂದುಳಿದಿರುವ ಅಂಕನಳ್ಳಿ, ಮನೇಹಳ್ಳಿಯಂತ ಗ್ರಾಮಗಳಿಗೆ ಸರ್ಕಾರಿ ಬಸ್ಸ್ ಸೌಲಭ್ಯ ಮರೀಚಿಕೆಯಾಗಿ ತ್ತು ಮಠ ಹಾಗೂ ಸ್ವಾಮೀಜಿಗಳ ಪ್ರಯತ್ನದಿಂದ ಸರ್ಕಾರಿ ಬಸ್ಸ್ ಓಡಾಡುವಂತಾಗಿದ್ದು ಶಾಲಾ ವಿದ್ಯಾರ್ಥಿಗಳಿಗೆ,ಗ್ರಾಮಸ್ಥರಿಗೆ ಅನುಕೂಲವಾಗಿದೆ ಎಂದು ಗ್ರಾಮಸ್ಥರು ಹರ್ಷವ್ಯಕ್ತ ಪಡಿಸಿದರು.
ಈ ಸಂದರ್ಭ ಮನೆ ಹಳ್ಳಿ ಮಠದ ಸಮಿತಿಯ ಪದಾಧಿಕಾರಿಗಳಾದ ಮಂಜುನಾಥ್,ಚಂದ್ರಶೇಖರ್,ಸೋಮಣ್ಣ.
ಪ್ರಾಮುಖರುಗಳಾದ ಬಸಪ್ಪ,ರಾಜಣ್ಣ,ಮಲ್ಲೇಶ್, ಬಿ. ಪಿ.ಬಸಪ್ಪ,ಚಂದ್ರಶೇಖರ್,ಧರ್ಮಪ್ಪ,ಶೈಲಮ್ಮ,ಶೀಲಮ್ಮ,ಉಮಾ,ಪುಷ್ಪ,ಕಮಲ ಹಾಗು ಮುಂತಾದವರು ಹಾಜರಿದ್ದರು.
ಅರ್ಚಕರಾದ ಮಲ್ಲೇಶಪ್ಪ ಹಾಗು ಚಿಕ್ಕ ವೀರರಾಜು ಪ್ಯುರೋಹಿತ್ವದಲ್ಲಿ ಕ್ಷೇತ್ರದಲ್ಲಿ ವಿಶೇಷ ಪೂಜೆ ನಡೆಯಿತು.

Related Articles

Leave a Reply

Your email address will not be published. Required fields are marked *

Back to top button
error: Content is protected !!