ಕುಶಾಲನಗರ, ಜು 14: ಕುಶಾಲನಗರದ ಇಗ್ಗುತ್ತಪ್ಪ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಅಸೋಸಿಯೇಷನ್ ವತಿಯಿಂದ ಇಸ್ಕಾ ಕುಶಾಲನಗರ ಬ್ಯಾಡ್ಮಿಂಟನ್ ಲೀಗ್ 2022 ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು.
ಕ್ರೀಡಾಕೂಟವನ್ನು ಅಸೋಸಿಯೇಷನ್ ಅಧ್ಯಕ್ಷ ಕರ್ನಂಡ ಅರುಣ್ ಮೊಣ್ಣಪ್ಪ ಉದ್ಘಾಟಿಸಿ ಮಾತನಾಡಿ, ಕ್ರೀಡಾಕೂಟ ಮನುಷ್ಯನ ಆರೋಗ್ಯ ವೃದ್ದಿ ಹಾಗು ಸ್ನೇಹ ಸಾಮರಸ್ಯ ಬೆಸೆಯಲು ಉತ್ತಮ ಸಾಧನವಾಗಿದೆ. ಪ್ರತಿಯೊಬ್ಬರು ಕ್ರೀಡಾ ಮನೋಭಾವ ಮೈಗೂಡಿಸಿಕೊಳ್ಳಬೇಕು. ಹಾಗೆಯೇ ಸ್ಥಳೀಯ ಕ್ರೀಡಾ ಪ್ರತಿಭೆಗಳಿಗೆ ಷಟಲ್ ಪಂದ್ಯಾವಳಿಯ ಅವಕಾಶಗಳನ್ನು ಹೆಚ್ವಾಗಿ ಒದಗಿಸುವ ಸದುದ್ದೇಶ ಅಸೋಸಿಯೇಷನ್ ಗುರಿ ಎಂದು ಅವರು ಹೇಳಿದರು.
ಈ ಸಂದರ್ಭ ಉಪಾಧ್ಯಕ್ಷ ಸೋಮೆಯಂಡ ಜಗ್ಗ ಪೂವಯ್ಯ, ಕಾರ್ಯದರ್ಶಿ ಮೇವಡ ಮಧು ಮಾದಯ್ಯ, ಖಜಾಂಚಿ ಮೂವೆರ ಗಣೇಶ್, ಕ್ರೀಡಾ ಕಾರ್ಯದರ್ಶಿ ಮಂಡೇಪಂಡ ಚಿಮ್ಮ ಉತ್ತಪ್ಪ, ನಿರ್ದೇಶಕರಾದ ಚಂದಪಂಡ ಕಾವ್ಯ ಸೂರಜ್, ಅಪ್ಪಚೆಟ್ಟೋಳಂಡ ಅಜಿತ್ ಅಚ್ಚಯ್ಯ, ಪಾಲಚಂಡ ಸುರೇಶ್ ಮಾದಪ್ಪ, ಚೌರೀರ ಪಿ.ಸುಧೀಶ್ ಹಾಗು ಕ್ರೀಡಾ ಕೂಟದ ಸಂಯೋಜಕರಾದ ಚಂದಪಂಡ ಸೂರಜ್, ಮಾತಂಡ ನವೀನ್, ಕ್ರೀಡಾ ತರಬೇತುದಾರ ನಿರಂಜನ್ ಇದ್ದರು.
ಪಂದ್ಯಾವಳಿಯಲ್ಲಿ ವಿವಿಧ ಏಳು ತಂಡಗಳ 90 ಆಟಗಾರರು ಭಾಗವಹಿಸಿದ್ದರು.
Back to top button
error: Content is protected !!