ಕ್ರೀಡೆ

ನವೆಂಬರ್, ಡಿಸೆಂಬರ್ ನಲ್ಲಿ‌ ಬೆಂಗಳೂರಿನಲ್ಲಿ ಕೆ.ಎಸ್.ಪಿ.ಎಲ್ ಲೀಗ್ ಟೂರ್ನಿ

ಅಕುಲ್ ಟೂರಿಂಸಂ ನೇತೃತ್ವದ ಕೊಡಗು ತಂಡ‌ ಭಾಗಿ

ಕುಶಾಲನಗರ, ಆ 05: ಕರ್ನಾಟಕ ರಾಜ್ಯ ಸಾಫ್ಟ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ಆಶ್ರಯದಲ್ಲಿ ಕರ್ನಾಟಕ ಸಾಫ್ಟ್ ಬಾಲ್ ಪ್ರೀಮಿಯರ್ ಲೀಗ್ (ಕೆ.ಎಸ್.ಪಿ.ಎಲ್) ನವೆಂಬರ್ ಹಾಗೂ ಡಿಸೆಂಬರ್ ಎರಡು ತಿಂಗಳು ಬೆಂಗಳೂರಿನ ಅಸೋಸಿಯೇಷನ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ಗಂಗಾಧರ್ ರಾಜು ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟೂರ್ನಿಯಲ್ಲಿ ಒಟ್ಟು 32 ತಂಡಗಳು ಪಾಲ್ಗೊಳ್ಳುತ್ತಿವೆ.
31 ಜಿಲ್ಲೆಗಳಿಂದ ಒಂದೊಂದು ತಂಡ, ಬೆಂಗಳೂರಿನಿಂದ ಎರಡು ತಂಡಗಳು ಭಾಗಿಯಾಗಲಿವೆ.‌ ಆಯಾ ಜಿಲ್ಲೆಗಳ ಕ್ರೀಡಾಪ್ರೇಮಿಗಳು, ತಂಡಗಳ‌ ಮಾಲೀಕರ ಸಹಕಾರದಿಂದ ಆಟಗಾರರನ್ನು ಒಗ್ಗೂಡಿಸಿ
ಮುಂಬೈ‌ ಸೆಲೆಕ್ಷನ್ ತಂಡದಿಂದ ಎಲ್ಲಾ ಜಿಲ್ಲೆಗಳಿಗೆ ಭೇಟಿ‌ ನೀಡಿ ಆಟಗಾರರ ಸಾಮರ್ಥ್ಯ ಗುರುತಿಸಿ ಆಯ್ಕೆ ಪ್ರಕ್ರಿಯೆ ನಡೆದಿದೆ. ಹೊರ‌ ಜಿಲ್ಲೆಗಳಿಂದ ಮೂರು ಆಟಗಾರರು ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಒಂದು
ತಂಡದಲ್ಲಿ 20 ಮಂದಿ ಆಟಗಾರರು ಒಳಗೊಂಡಿರುತ್ತಾರೆ. ಸಾಫ್ಟ್ ಬಾಲ್ ಕ್ರಿಕೆಟ್ ಅನ್ನು ಅಂತರಾಷ್ಟ್ರೀಯ ಮಟ್ಟಕ್ಕೆ‌ ಕೊಂಡೊಯ್ಯಲು, ಆಟಗಾರರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ‌ ಈ ಪ್ರಯತ್ನವನ್ನು‌ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಎಲ್ಲಾ ತಂಡಗಳ ಮಾಲೀಕರ ಅಭಿಪ್ರಾಯ ಸಂಗ್ರಹಿಸಿ ಮುಂದಿನ ದಿನಗಳಲ್ಲಿ ಬಹುಮಾನ ಮೊತ್ತ ನಿಗದಿಪಡಿಸಲಾಗುವುದು ಎಂದು ತಿಳಿಸಿದರು.

ಕೊಡಗು ಅಕುಲ್ ಟೂರಿಸಂ ತಂಡದ ಮಾಲೀಕ ಅಕುಲ್ ಮಾತನಾಡಿ, ತಂಡದ ಆಟಗಾರರಿಗೆ 6 ಲಕ್ಷ ಮೊತ್ತದ ಪ್ಯಾಕೆಜ್ ಸಿದ್ದಪಡಿಸಿದ್ದು, ಆಟಗಾರರ ಸಂಪೂರ್ಣ ಖರ್ಚು ವೆಚ್ಚಗಳನ್ನು ಅಸೋಸಿಯೇಷನ್ ‌ಭರಿಸಲಿದೆ.‌ ಕೊಡಗಿನ ಪ್ರತಿಭಾನ್ವಿತ ಅತ್ಯುತ್ತಮ ಆಟಗಾರರು ತ‌ಂಡದಲ್ಲಿದ್ದಾರೆ ಎಂದು ತಿಳಿಸಿದರು.

ಕೊಡಗು ತಂಡದ ಮೆಂಟರ್ ಮಹದೇವ್ ಮಾತನಾಡಿ, ಕರ್ನಾಟಕದಲ್ಲಿ ಇದೇ‌ ಮೊದಲ ಬಾರಿಗೆ ದೊಡ್ಡ ಮಟ್ಟದ ಟೂರ್ನಿ‌ ಹಮ್ಮಿಕೊಂಡಿದ್ದು ಆಟಗಾರರ ಪ್ರತಿಭೆ ಪ್ರದರ್ಶನಕ್ಕೆ ಉತ್ತಮ‌ ವೇದಿಕೆ ಕಲ್ಪಿಸಲಾಗಿದೆ ಎಂದರು.

ಕೊಡಗು ತಂಡದ ಸಲಹೆಗಾರ ಮಂಜೇಶ್ ಮಾತನಾಡಿದರು.

ಈ ಸಂದರ್ಭ ಅಸೋಸಿಯೇಷನ್ ಸದಸ್ಯ ಅರುಣ್ ಹಾಗೂ ಆಟಗಾರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!