ಪಿರಿಯಾಪಟ್ಟಣ, ಜು 02:ವೈದ್ಯರ ಸಮರ್ಪಣಾ ಸೇವೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಹಿರಿಯ ವಕೀಲ ಹಾಗೂ ರೊಟೇರಿಯನ್ ಬಿ.ವಿ.ಜವರೇಗೌಡ ತಿಳಿಸಿದರು.
ಪಟ್ಟಣದ ಲಕ್ಷ್ಮಿ ಹೆಲ್ತ್ ಕೇರ್ ಸೆಂಟರ್ ನಲ್ಲಿ ವೈದ್ಯರ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಲ್ಲ ವೃತ್ತಿಗಳಿಗಿಂತ ವೈದ್ಯ ವೃತ್ತಿಯು ಅತ್ಯಂತ ಶ್ರೇಷ್ಠವಾಗಿದೆ. ಸಾವಿನ ಮನೆ ಬಾಗಿಲು ತಟ್ಟುವ ವ್ಯಕ್ತಿಗೆ ಭರವಸೆಯ ಚಿಕಿತ್ಸೆ ನೀಡುವ ಮೂಲಕ ಬದುಕಿನ ಅಂಗಳಕ್ಕೆ ತಂದು ಬಿಡುವ ಅದ್ಭುತವಾದ ಚಮತ್ಕಾರವನ್ನು ವೈದ್ಯರು ಮಾಡುತ್ತಾರೆ. ಹೀಗಾಗಿಯೇ ವೈದ್ಯರನ್ನು ನಾರಾಯಣನ ಸ್ವರೂಪ ಎಂದು ಭಾವಿಸುತ್ತಾರೆ. ವೈದ್ಯರ ಸೇವೆ ಇಂದು ಸೇವೆಯಾಗಿ ಉಳಿಯದೆ ಉದ್ಯೋಗವಾಗಿ ಪರಿವರ್ತನೆಯಾಗಿದೆ ಆದರೂ ನಮ್ಮ ತಾಲ್ಲೂಕಿನಲ್ಲಿ ಲಕ್ಷ್ಮಿ ಹೆಲ್ತ್ ಕೇರ್ ಸೆಂಟರ್ ನ ಮುಖ್ಯಸ್ಥರಾದ ಡಾ.ಕೆ.ಪ್ರಕಾಶ್ ಬಾಬು ರಾವ್ ರವರ ತಂಡ ಆತ್ಮ ಸಮರ್ಪಣಾ ಭಾವದಿಂದ ಸೇವೆ ಸಲ್ಲಿಸುತ್ತಿರುವುದು ರೋಗಿಗಳಲ್ಲಿ ಅರ್ಧ ರೋಗ ವಾಸಿಯಾಗುವುದಕ್ಕೆ ಕಾರಣವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ರೋಟರಿ ಮಿಡ್ ಟೌನ್ ಅಧ್ಯಕ್ಷ ಎಂ.ಎಂ.ರಾಜೇಗೌಡ ಮಾತನಾಡಿ, ಸಮಾಜಕ್ಕೆ ಹಾಗೂ ಜನರಿಗೆ ವೈದ್ಯರ ಪಾತ್ರ ಬಹುಮುಖ್ಯ. ಅವರ ಪ್ರಾಮುಖ್ಯತೆ ಮತ್ತು ಜವಾಬ್ದಾರಿ ಮಹತ್ವ ಪಡೆದುಕೊಂಡಿರುತ್ತದೆ. ವೈದ್ಯರ ಕೆಲಸ, ಪ್ರವೃತ್ತಿ, ಜವಾಬ್ದಾರಿ ಹಾಗೂ ಪ್ರಾಮುಖ್ಯತೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಅಗತ್ಯವಿದ್ದು, ವೈದ್ಯರಿಗೆ ಆತ್ಮವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ರೋಟರಿ ಸಂಸ್ಥೆ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದೆ ಎಂದರು.
ರೋಟರಿ ಸಂಸ್ಥೆ ಕಾರ್ಯದರ್ಶಿ ಜೆ.ಪಿ.ಹೆಗಡೆ ಮಾತನಾಡಿ, ಭಾರತದಲ್ಲಿ ಪ್ರಸಿದ್ಧ ವೈದ್ಯಬಿ.ಸಿ.ರಾಯ್ ಅವರ ಗೌರವಾರ್ಥ ವೈದ್ಯರ ದಿನವನ್ನು ಜು.1ರಂದು ಆಚರಿಸಲಾಗುತ್ತದ್ದು, ವೈದ್ಯರ ನಿಷ್ಠೆ ಶ್ರಮ ಹಾಗೂ ನಿಸ್ವಾರ್ಥ ಭಾವದಿಂದ ನೀಡುವ ಆರೈಕೆಗೆ ಮೌಲ್ಯ ಕಟ್ಟಲುಸಾಧ್ಯವಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಲಕ್ಷ್ಮಿ ಹೆಲ್ತ್ ಕೇರ್ ಸೆಂಟರ್ ನ ವೈದ್ಯಾಧಿಕಾರಿಗಳಾದ ಡಾ.ಕೆ.ಪ್ರಕಾಶ್ ಬಾಬು ರಾವ್, ಡಾ.ಲತಾ ಟಿ.ರೇ, ಡಾ.ವಸುಂಧರಾ ಪ್ರಭಾಕರ್ ಜಾಧವ್, ಡಾ.ಯಶಸ್ವಿನಿ, ಡಾ.ನಿಶಾ ಜೋಗಿ, ಡಾ.ಅತಿರಾ ರವಿಂದ್ರನ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ರೋಟರಿ ನಿರ್ಗಮಿತ ಅಧ್ಯಕ್ಷ ತಿರುಮಲಾಪುರ ರಾಜೇಗೌಡ, ಕಾರ್ಯದರ್ಶಿ ಎಂ.ಪಿ.ರಾಜು, ರೋಟರಿ ಸಂಸ್ಥೆ ಪದಾಧಿಕಾರಿಗಳಾದ ಸತ್ಯನಾರಾಯಣ, ವಿನಯ್ ಶೇಖರ್, ಪ್ರಸಾದ್, ಜಗನ್, ವಾಣಿ ಪ್ರಕಾಶ್, ಅಶೋಕ್ ಲೈಲ್ಯಾಂಡ್ ಮಾಲೀಕ ವಿಟ್ಲ ಹರೀಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Back to top button
error: Content is protected !!