ಕುಶಾಲನಗರ, ಜು 02:ಹಾರಂಗಿ ಮೀನುಗಾರಿಕೆ ಇಲಾಖೆಯ ವತಿಯಿಂದ ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವಾಲಯದ ಮುಂಭಾಗದಲ್ಲಿ ಕಾವೇರಿ ನದಿಗೆ 1 ಲಕ್ಷದ 20 ಸಾವಿರಕ್ಕೂ ಹೆಚ್ಚು ವಿವಿಧ ಬಗೆಯ ಮೀನಿನ ಮರಿಗಳನ್ನು ನದಿಗೆ ಬಿಡಲಾಯಿತು.
ಮೀನಿನ ಸಂತತಿಯನ್ನು ವೃದ್ಧಿಸುವ ಹಿನ್ನೆಲೆಯಲ್ಲಿ ಮತ್ತು ಕಾವೇರಿ ನದಿ ಸಹಿ ನೀರಿನಲ್ಲಿ ಮೀನಿನ ಬೆಳವಣಿಗೆಗೆ ಅನುಕೂಲಕರವಾಗುವ ದೃಷ್ಟಿಯಿಂದ ಪ್ರತಿ ವರ್ಷದಂತೆ ಈ ಸಾಲಿನಲ್ಲಿ ಮೀನಿನ ಮರಿಗಳನ್ನು ನದಿಗೆ ಬಿಡಲಾಯಿತು.
ಈ ಸಂದರ್ಭದಲ್ಲಿ ಮೀನುಗಾರಿಕೆ ಇಲಾಖೆಯ ಅಪರ ನಿರ್ದೇಶಕ ಡಿ.ತಿಪ್ಪೇಸ್ವಾಮಿ, ಕಣಿವೆ ರಾಮಲಿಂಗೇಶ್ವರ ದೇವಾಲಯ ಸಮಿತಿಯ ಅಧ್ಯಕ್ಷ ಕೆ.ಎನ್. ಸುರೇಶ್, ಉಪಾಧ್ಯಕ್ಷ ಮಂಜುನಾಥ್, ಗೌರವಾಧ್ಯಕ್ಷ ಮಾಧುಸ್ವಾಮಿ, ಮೀನುಗಾರಿಕೆ ಇಲಾಖೆಯ ಮೈಸೂರು ವಲಯ ಜಂಟಿ ನಿರ್ದೇಶಕ ಗಣೇಶ್, ಮಡಿಕೇರಿ ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಸಿ.ಎಸ್. ಸಚಿನ್, ಹಾರಂಗಿ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಸಚಿನ್, ದೇವಾಲಯ ಸಮಿತಿಯ ನಿರ್ದೇಶಕ ರಾದ ಮಧು, ಕುಮಾರ್, ಪ್ರಶಾಂತ್, ಸೇರಿದಂತೆ ಇಲಾಖೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.
Back to top button
error: Content is protected !!