ವಿಶ್ವ ಪರಿಸರ ದಿನಾಚರಣೆ ಸಂದರ್ಭ 7ನೇ ಹೊಸಕೋಟೆ ಗ್ರಾಪಂ ಗ್ರೇಡ್ 2 ಕಾರ್ಯದರ್ಶಿ ಸುನಿತಾ ಬಿಜೆಪಿ ಪಕ್ಷದ ಟೋಪಿ ಧರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ವಿರುದ್ದ ಸೂಕ್ತ ಕ್ರಮಕೈಗೊಳ್ಳುವಲ್ಲಿ ಜಿಲ್ಲಾಡಳಿತ ನಿರ್ಲಕ್ಯ ತೋರಿದೆ ಎಂದು ಕಾಂಗ್ರೆಸ್ ಪ್ರಮುಖರು ಆರೋಪಿಸಿದರು.
ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ, ಜಿಪಂ ಮಾಜಿ ಸದಸ್ಯ ವಿ.ಪಿ.ಶಶಿಧರ್, ಓರ್ವ ಜವಾಬ್ದಾರಿಯುತ ಸರಕಾರಿ ಅಧಿಕಾರಿಯಾಗಿರುವ ಸುನಿತಾಕುಮಾರಿ ಬಿಜೆಪಿ ಪಕ್ಷದ ಟೋಪಿ ಧರಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ಖಂಡನೀಯ. ಇವರ ವಿರುದ್ದ ಸೂಕ್ತ ಕ್ರಮಕೈಗೊಳ್ಳುವಂತೆ ನೀಡಿದ ದೂರಿಗೆ ಇದುವರೆಗೆ ಯಾವುದೇ ರೀತಿಯ ಕ್ರಮಕೈಗೊಂಡಿಲ್ಲ. ಶಾಸಕ ಅಪ್ಪಚ್ಚುರಂಜನ್ ಅವರು ಸುನಿತಾ ಅವರಿಗೆ ಬೆನ್ನೆಲುಬಾಗಿ ನಿಂತಿರುವುದು ಈ ಮೂಲಕ ಜಗ್ಗಜಾಹೀರಾಗಿದೆ. ಜಿಪಂ ಸಿಇಒ ಕೂಡ ಶಾಸಕರ ಒತ್ತಡಕ್ಕೆ ಮಣಿದು ಕ್ರಮಕೈಗೊಳ್ಳಲು ಹಿಂದೇಟು ಹಾಕುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಮುಂದಿನ ಒಂದು ವಾರದೊಳಗೆ ಸುನಿತಾ ಕುಮಾರಿ ಅವರನ್ನು ಅಮಾನತ್ತುಗೊಳಿಸಬೇಕುಮ ತಪ್ಪಿದಲ್ಲಿ ಸಿಇಒ ಕಛೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.
ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಜೆಪಿಯ ಅಗ್ನಿಪಥ್ ಕಾರ್ಯಕ್ರಮಕ್ಕೆ ಅವಕಾಶ ನೀಡಿರುವುದು ಪ್ರಾಂಶುಪಾಲರ ಕ್ರಮದ ವಿರುದ್ದ ಆಕ್ರೋಷ ವ್ಯಕ್ತಪಡಿಸಿದರು.
ಕಳೆದ ಮೂರು ವರ್ಷಗಳಿಂದ ಕುಶಾಲನಗರದಲ್ಲಿ ಪೊಲೀಸ್ ಅಧಿಕಾರಿಯಾಗಿರುವವರನ್ನು ಬೇರೆಡೆಗೆ ವರ್ಗಾಯಿಸದೆ ಇಲ್ಲೆ ಇರಿಸಿಕೊಂಡಿರುವು ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಶಶಿಧರ್ ಅಪ್ಪಚ್ಚುರಂಜನ್ ಅವರ ವಿರುದ್ದ ಹರಿಹಾಯ್ದರು.
ಶಾಸಕಾಂಗ ಮೌಲ್ಯಗಳಿಗೆ ಕಳಂಕಪ್ರಾಯರಂತೆ ಶಾಸಕರ ವರ್ತನೆಯನ್ನು ಅವರು ಖಂಡಿಸಿದರು.
ಜಿಪಂ ಮಾಜಿ ಸದಸ್ಯೆ ಕೆ.ಪಿ.ಚಂದ್ರಕಲಾ ಮಾತನಾಡಿ, ಇಡೀ ದೇಶದ ಜನತೆಗೆ ಬಿಜೆಪಿ ಟೋಪಿ ಹಾಕುತ್ತಿದ್ದು ಶಾಸಕ ಅಪ್ಪಚ್ಚುರಂಜನ್ ಇದನ್ನು ಸ್ಥಳೀಯವಾಗಿ ವಿಸ್ತರಿಸಿದ್ದಾರೆ ಎಂದರು.
ಗೋಷ್ಠಿಯಲ್ಲಿ ಗ್ರಾಪಂ ಸದಸ್ಯ ಮುಸ್ತಾಫ, ಕಾಂಗ್ರೆಸ್ ಮುಖಂಡರೂ ಆದ ಗ್ರಾಪಂ ಮಾಜಿ ಸದಸ್ಯರಾದ ಅಬ್ದುಲ್ ರಜಾಕ್, ಎ.ಪಿ. ರಮೇಶ್ ಇದ್ದರು.
Back to top button
error: Content is protected !!