ಟ್ರೆಂಡಿಂಗ್

ಮನೆಗೊಂದು ಗಿಡ ಊರಿಗೊಂದು ವನ* ಗಿಡ ನೆಡುವ ಕಾರ್ಯಕ್ರಮ

ಕುಶಾಲನಗರ, ಮೇ 26:  ಜೆಸಿಐ ಕುಶಾಲನಗರ ಕಾವೇರಿ ವತಿಯಿಂದ ಅಳಿಲು ಸೇವಾ ಟ್ರಸ್ಟ್(ರಿ)ನ ಸಹಯೋಗದೊಂದಿಗೆ *ಮನೆಗೊಂದು ಗಿಡ ಊರಿಗೊಂದು ವನ* ಎಂಬ ಎಂಬ ಶೀರ್ಷಿಕೆಯೊಂದಿಗೆ ಬೃಹತ್ ಗಿಡ ನೆಡುವ ಕಾರ್ಯಕ್ರಮವನ್ನು ಇದೇ ತಿಂಗಳು ಮೇ 25 ರಿಂದ ಜೂನ್ 25ರ ತನಕ ಹಮ್ಮಿಕೊಳ್ಳ ಲಾಗಿದ್ದು ಇಂದು ಕಾರ್ಯಕ್ರಮಕ್ಕೆ

ಸಾಂಕೇತಿಕವಾಗಿ ಕುಶಾಲನಗರ ರಾಧಾಕೃಷ್ಣ ಬಡಾವಣೆಯಲ್ಲಿ ಸಾರ್ವಜನಿಕರಿಗೆ ಗಿಡ ಕೊಡುವುದರ ಮೂಲಕ ಚಾಲನೆ ನೀಡಲಾಯಿತು.

ಒಂದು ತಿಂಗಳ ಈ ಕಾರ್ಯಕ್ರಮದಲ್ಲಿ 1000ಕ್ಕೂ ಹೆಚ್ಚು ಉಪಯುಕ್ತ ಗಿಡಗಳನ್ನು( ಸೀಬೆ, ಬೇವು, ನೆಲ್ಲಿಕಾಯಿ, ಕರಿಬೇವು, ಇತ್ಯಾದಿ) ಕುಶಾಲನಗರದ ಸುತ್ತಮುತ್ತ ಬಡಾವಣೆಗಳಿಗೆ, ಶಾಲಾ ಕಾಲೇಜುಗಳ ಹತ್ತಿರ, ರಸ್ತೆ ಬದಿಗಳಲ್ಲಿ ನೆಡುವುದು ಹಾಗೂ ಇದರ ಬಗ್ಗೆ ಆಸಕ್ತಿ ಇರುವ ಪ್ರತಿಯೊಬ್ಬರಿಗೂ ಗಿಡ ಕೊಡುವುದರ ಜೊತೆಗೆ ಟ್ರೀ ಗಾರ್ಡ್ ಅಳವಡಿಸುವುದಾಗಲಿ ಗಿಡಕ್ಕೆ ನೀರೆಯುವುದರ ಜೊತೆಗೆ ಪೋಸಿಸಿ ಬೆಳೆಸುವುದು ಕೂಡ ಇದರ ಮೂಲ ಉದ್ದೇಶವಾಗಿರುತ್ತದೆ, ಈ ಕಾರ್ಯಕ್ರಮಕ್ಕೆ ಜೆಸಿಐ ನ ಪದಾಧಿಕಾರಿಗಳು ಹಾಗೂ ಟ್ರಸ್ಟ್ ನ ನಿರ್ದೇಶಕರುಗಳು ಪೂರ್ಣ ಪ್ರಮಾಣದ ಸಹಕಾರ ನೀಡುತ್ತಾರೆಂದು ಕುಶಾಲನಗರ ಕಾವೇರಿ ಜೆಸಿಐ ನ ಅಧ್ಯಕ್ಷರಾದ ಜಗದೀಶ್ ಬಿ ಅವರು ತಿಳಿಸಿರುತ್ತಾರೆ. ಇದೇ ಸಂದರ್ಭದಲ್ಲಿ ಟ್ರಸ್ಟ್ ನ ಅಧ್ಯಕ್ಷ ಕೆಜಿ ಮನು ಅವರು ಮಾತನಾಡಿ, ಒಂದು ವರ್ಷ ಗಿಡವನ್ನು ಪೋಷಿಸಿ ಚೆನ್ನಾಗಿ ಬೆಳೆಸಿದಂತವರಿಗೆ ಆಕರ್ಷಕ ಬಹುಮಾನ ಮತ್ತು ಮನ್ನಣೆ ನೀಡಲಾಗುವುದು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಜೆಎಸಿ ಅಧ್ಯಕ್ಷರಾದ ರಂಗಸ್ವಾಮಿ ಮತ್ತು ಜೆಸಿಐ ನ ಪದಾಧಿಕಾರಿಗಳಾದ ನಾಗೇಗೌಡ, ರಾಜೇಂದ್ರ, ಪ್ರವೀಣ್, ಪ್ರಶಾಂತ್, ಪುನೀತ್,ರಜನಿಕಾಂತ್, ತೇಜದಿನೇಶ್ ಹಾಗೂ ಟ್ರಸ್ಟ್ ನ ನಿರ್ದೇಶಕರುಗಳಾದ ಶಿವಾಜಿ ರಾವ್, ದಿನೇಶ್ ನಿಡ್ಡೆಮಲೆ, ಸಂಗೀತ ದಿನೇಶ್, ಚಂದ್ರಶೇಖರ್ ಸುಮನ್ ಮತ್ತಿತರರು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!