ಕುಶಾಲನಗರ, ಡಿ 20: : ಇಲ್ಲಿಗೆ ಸಮೀಪದ ಆತ್ತೂರು ಗ್ರಾಮದಲ್ಲಿ ಇರುವ ಜ್ಞಾನಗಂಗಾ ವಸತಿ ಶಾಲೆಯಲ್ಲಿ ಕ್ರಿಸ್ ಮಸ್ ಅಂಗವಾಗಿ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಕ್ರಿಸ್ ಮಸ್ ಟ್ರೀ, ಗುಡಿಸಲು ಹಾಗೂ ಸಾಂತಾ ಕ್ಲಾಸ್ ಮಾದರಿ ಗಳನ್ನು ಸಜ್ಜುಗೊಳಿಸಲಾಗಿತ್ತು.
ವಿದ್ಯಾರ್ಥಿ ಗಳಲ್ಲಿ ಧಾರ್ಮಿಕ ಆಚರಣೆಗಳ ಮಹತ್ವಗಳನ್ನು ತಿಳಿಯಪಡಿಸುವ ಸಲುವಾಗಿ ಎಲ್ಲಾ ಧರ್ಮಗಳ ಪ್ರಮುಖ ಆಚರಣೆಗಳು, ರಾಷ್ಟ್ರೀಯ ಹಬ್ಬಗಳು ಹಾಗೂ ನಾಡು ಕಟ್ಟಿದ ಮಹನೀಯರ ಸ್ಮರಣೆ ಗಳನ್ನು ಕಾಲ ಕಾಲಕ್ಕೆ ಆಚರಿಸಲಾಗುತ್ತಿದೆ ಎಂದು ಸಂಸ್ಥೆಯ ಪ್ರಾಂಶುಪಾಲೆ ಸತ್ಯ ಸುಲೋಚನ ಹೇಳಿದರು.
ಶಾಲೆಯ ಕಾರ್ಯದರ್ಶಿ ಬಿ.ಎಸ್. ನಿಂಗಪ್ಪ ಹಾಗೂ ಶಾಲಾ ಶಿಕ್ಷಕರಾದ ಭಾವನಾ ಹಾಗೂ ಪ್ರೇಮ ಇದ್ದರು.
Back to top button
error: Content is protected !!