ಅರಣ್ಯ ವನ್ಯಜೀವಿ

ಕೊನೆಯುಸಿರೆಳೆದ ಸಾಕಾನೆ ಶಿಬಿರದಲ್ಲಿದ್ದ ವಿರಾಟ್

ಕುಶಾಲನಗರ, ಏ 10:ದಿನಾಂಕ ರಂದು 09-04-2024 ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಅನೆಚೌಕೂರು ವನ್ಯಜೀವಿ ವಲಯದ ಮತ್ತಿಗೋಡು ಸಾಕಾನೆ ಶಿಬಿರದಲ್ಲಿದ್ದ ವಿರಾಟ್ ಎಂಬ ಸಾಕಾನೆಯು ವೀರನಹೊಸಹಳ್ಳಿ ವನ್ಯಜೀವಿ ವಲಯದಿಂದ ದಿನಾಂಕ 04-11-2023 ರಂದು ಸೆರೆ ಹಿಡಿದು ಶಿಬಿರಕ್ಕೆ ತರಲಾಗಿದ್ದು ಸದರಿ ಸಾಕಾನೆಯು ತುಂಬಾ ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು ಯಾವುದೇ ತರಹದ ಚಿಕತ್ಸೆಗೆ ಸ್ಪಂದಿಸದೆ ಇಂದು ದಿನಾಂಕ 09-04-2024 ರಂದು ಮುಂಜಾನೆ 02:30 ರ ಸಮಯಕ್ಕೆ ಅಸುನೀಗಿರುತ್ತದೆ, ಸದರಿ ಸ್ಥಳಕ್ಕೆ ದಯಾನಂದ್ ಡಿ.ಎಸ್ – ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ವನ್ಯಜೀವಿ ಉಪ ವಿಭಾಗ ಹುಣಸೂರು, ರಮೇಶ್ – ಮುಖ್ಯ ವಶುವೈದ್ಯಾಧಿಕಾರಿಗಳು ಹಾಗು ಆನೆ ಪ್ರಭಾರಕರು, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ಹುಣಸೂರು,  ದೇವರಾಜು.ಡಿ – ವಲಯ ಅರಣ್ಯಾಧಿಕಾರಿಗಳು, ವನ್ಯಜೀವಿ ವಲಯ ಅನೆಚೌಕೂರು ಹಾಗು ಸಿಬ್ಬಂದಿಗಳು ಭೇಟಿ ನೀಡಿ ಮೃತ ಸಾಕಾನೆಯನ್ನು ಪರಿಶೀಲನೆ ಮಾಡಿ ವಶು ವೈದ್ಯಾಧಿಕಾರಿಗಳಿಂದ ಮರಣೋತ್ತರ ಪರೀಕ್ಷೆ ಮಾಡಿಸಿ ನಂತರ ಸಾಕಾನೆಯ ಶವ ಸಂಸ್ಕಾರ ಮಾಡಲಾಯಿತು.

 

Related Articles

Leave a Reply

Your email address will not be published. Required fields are marked *

Back to top button
error: Content is protected !!