ಧಾರ್ಮಿಕ

ತೊರೆನೂರಿನಲ್ಲಿ ಯುಗಾದಿ ಅಂಗವಾಗಿ ಸಾಂಪ್ರದಾಯಿಕ ಹೊನ್ನಾರು ಉತ್ಸವ ಆಚರಣೆ

ಕುಶಾಲನಗರ, ಏ 09:  ತೊರೆನೂರು ಗ್ರಾಮದಲ್ಲಿ ಯುಗಾದಿ ಹಬ್ಬದ ಅಂಗವಾಗಿ ರೈತರು ಮಂಗಳವಾರ ಸಾಂಪ್ರದಾಯಿಕವಾದ ಹೊನ್ನಾರು ಉತ್ಸವ ಆಚರಿಸಿದರು.

ರೈತರು ಗ್ರಾಮದ ಬಸವೇಶ್ವರ ದೇವಾಲಯದ ಬಳಿ ಒಗ್ಗೂಡಿ ಸಾಮೂಹಿಕವಾಗಿ ಉಳುಮೆ ಮಾಡುವ ಎತ್ತುಗಳು ಹಾಗೂ ಹೈನುಗಾರಿಕೆಯ ಆಕಳುಗಳನ್ನು ಪೂಜಿಸಿದರು.

ಪೂಜೆ ಹಾಗೂ ಪ್ರಾರ್ಥನೆಯ ಬಳಿಕ ಗ್ರಾಮದ ಬಸವೇಶ್ವರ ದೇವಾಲಯದಿಂದ ಹೊರಟ ಹೊನ್ನಾರು ಉತ್ಸವ ಗ್ರಾಮದ ಮುಖ್ಯ ಬೀದಿಯಲ್ಲಿ ಸಾಗಿ ದೇವತಾ ಭೂಮಿಯನ್ನು ಒಂದು ಸುತ್ತು ಉಳುಮೆ ಮಾಡಿದವು.

ಗ್ರಾಮದ ಕೃಷಿಕರಾದ ಎಸ್.ಬಿ.ಲೋಕೇಶ್ ಅವರ ಮೊದಲ ಉಳುಮೆಯೊಂದಿಗೆ ಹೊನ್ನಾರು ಆರಂಭಿಸಲಾಯಿತು.

ಅಲಂಕೃತ ರಾಸುಗಳನ್ನು ಗ್ರಾಮದೊಳಗಿನ ಬಸವೇಶ್ವರ ದೇವಾಲಯದಿಂದ ಹೆದ್ದಾರಿ ಬದಿಯಲ್ಲಿರುವ ಬಸವೇಶ್ವರ ದೇವಾಲಯದ ತನಕ ಮೆರವಣಿಗೆಯಲ್ಲಿ ಕರೆತರಲಾಯಿತು.
ದೇವಾಲಯದಲ್ಲಿ ರಾಸುಗಳಿಗೆ ಪೂಜೆ ಸಲ್ಲಿಸಿದ ಬಳಿಕ ಮೆರವಣಿಗೆಯನ್ನು ಸಮಾಪ್ತಿಗೊಳಿಸಲಾಯಿತು.

ಈ ಸಂದರ್ಭ ಮಾತನಾಡಿದ ಗ್ರಾಮದ ದೇವಾಲಯ ಸಮಿತಿ ಅಧ್ಯಕ್ಷ ಟಿ.ಬಿ.ಜಗದೀಶ್, ಅನ್ನದಾತರ ಅತ್ಯಂತ ಶ್ರದ್ದೆಯ ಆಚರಣೆಯಾದ ಹೊನ್ನಾರು ಉತ್ಸವವನ್ನು ಗ್ರಾಮದಲ್ಲಿ ಪೂರ್ವಜರ ಕಾಲದಿಂದಲೂ ಆಚರಿಸಿಕೊಂಡು ಬರಲಾಗುತ್ತಿದೆ.

ಹೆಚ್ಚು ಕೃಷಿಕರು ಇರುವ ಗ್ರಾಮದಲ್ಲಿ ಹೊನ್ನಾರು ಉತ್ಸವ ಅಂದರೆ ಅದೊಂದು ಗ್ರಾಮೋತ್ಸವದ ಮಾದರಿಯಲ್ಲಿ ಆಚರಿಸಲಾಗುತ್ತದೆ. ಇದೀಗ ಕಾಡುತ್ತಿರುವ ಬರವನ್ನು ದೂರಮಾಡಿ ಕೃಷಿಕರ ಆತಂಕ ದೂರ ಮಾಡಲು ಮಳೆಯಾಗಲೆಂದು ಪ್ರಾರ್ಥಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭ ದೇವಾಲಯ ಸಮಿತಿ ಉಪಾಧ್ಯಕ್ಷ ಟಿ.ಬಿ.ಚಿದಾನಂದ, ಕಾರ್ಯದರ್ಶಿ ಟಿ.ಎಲ್.ಮಹೇಶ್, ಖಜಾಂಚಿ ಕೆ.ಎಸ್.ಕೃಷ್ಣೇಗೌಡ, ಪದಾಧಿಕಾರಿಗಳಾದ ತೋಟೇಶ್, ಟಿ.ಜಿ.ಶಿವಣ್ಣ, ಸಿದ್ದಪ್ಪ, ಈಶ್ವರ, ಗ್ರಾಮ ಪಂಚಾಯಿತಿ ಸದಸ್ಯರಾದ ಟಿ.ಸಿ.ಶಿವಕುಮಾರ್, ಮಂಜುನಾಥ್, ಗ್ರಾಮಸ್ಥರಾಸ ಟಿ.ಜಿ.ಪ್ರೇಮ್ ಕುಮಾರ್ ಹಾಗು ಇತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!