ಕುಶಾಲನಗರ, ಮಾ 06: ಕೇರಳ ರಾಜ್ಯ ಮಲಪ್ಪುರಂ ಜಿಲ್ಲೆ ನಿವಾಸಿ ತಮ್ಮಾದ್ ರವರು ಕೇರಳ ರಾಜ್ಯದಿಂದ ಹೆಚ್‌ಆರ್-26 ಸಿಎಲ್-5200 ರ ಕಾರಿನಲ್ಲಿ ತೆರಳಿ ಮೈಸೂರು ನಗರದ ಅಶೋಕಪುರ ರಸ್ತೆಯಲ್ಲಿರುವ ಶ್ರೀ ಯೋಗೇಶ್ ಎಂಬುವವರ ಜ್ಯುವೆಲರ್ಸ್ ಅಂಗಡಿಯಲ್ಲಿ 750ಗ್ರಾಂ ಚಿನ್ನವನ್ನು ಮಾರಾಟ ಮಾಡಿ ರೂ. 50,00,000/- ಗಳ ಹಣವನ್ನು ಪಡೆದುಕೊಂಡು ಕೇರಳ ರಾಜ್ಯಕ್ಕೆ ತೆರಳುವಾಗ ದಿನಾಂಕ: 09-12-2023 ರ ಬೆಳಗ್ಗಿನ ಸಮಯ ಸುಮಾರು 02.00 ಗಂಟೆಗೆ ಗೋಣಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ದೇವರಪುರ ಗ್ರಾಮದ ರಾಜ್ಯ ಹೆದ್ದಾರಿಯಲ್ಲಿ ಒಂದು ಪಿಕ್ ಅಪ್ ವಾಹನನ್ನು ರಸ್ತೆಗೆ ಅಡ್ಡವಾಗಿ ನಿಲ್ಲಿಸಿ 10-15 ಜನರು ಕಾರನ್ನು ಸುತ್ತುವರೆದು ಕಾರಿನಲ್ಲಿದ್ದ ಶಮ್ಮಾದ್ ಹಾಗೂ ಅಪ್ಪುರವರಿಗೆ ಹಲ್ಲೆ ನಡೆಸಿ ಬಲವಂತವಾಗಿ ಕಾರನ್ನು ಮತ್ತು ಕಾರಿನಲ್ಲಿದ್ದ 50,00,000/- ರೂ ನಗದು ಹಣವನ್ನು ದರೋಡೆ ಮಾಡಿರುವ ಕುರಿತು ದೂರು ಸ್ವೀಕರಿಸಿದ್ದು, ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿರುತ್ತದೆ.
ಶ್ರೀ ಕೆ.ರಾಮರಾಜನ್, ಐಪಿಎಸ್, ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ, ಶ್ರೀ ಕೆ.ಎಸ್.ಸುಂದರ್ ರಾಜ್, ಅಪರ ಪೊಲೀಸ್ ಅಧೀಕ್ಷಕರು. ಕೊಡಗು ಜಿಲ್ಲೆ ರವರ ಮಾರ್ಗದರ್ಶನದಲ್ಲಿ ಶ್ರೀ ಆರ್. ಮೋಹನ್ ಕುಮಾರ್, ಡಿಎಸ್ಪಿ, ವಿರಾಜಪೇಟೆ ರವರ ಉಸ್ತುವಾರಿಯಲ್ಲಿ ಉಪವಿಭಾಗ ಮಟ್ಟದ ಅಧಿಕಾರಿ/ಸಿಬ್ಬಂದಿಗಳನ್ನು ಒಳಗೊಂಡ ವಿಶೇಷ ತಂಡವನ್ನು ರಚಿಸಿ ತನಿಖೆ ಕೈಗೊಂಡು ಈಗಾಗಲೇ ದರೋಡೆ ಪ್ರಕರಣದ 08 ಜನ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ ಹಾಗೂ ತಲೆಮರೆಸಿಕೊಂಡಿರುವ ಆರೋಪಿಗಳನ್ನು ಪತ್ತೆ ಹಚ್ಚಲು ವಿಶೇಷ ತನಿಖಾ ತಂಡ ತನಿಖೆಯನ್ನು ಮುಂದುವರೆಸಿ ಮಾಹಿತಿ ಸಂಗ್ರಹಿಸಿ ದಿನಾಂಕ: 06-03-2024 ರಂದು ಕೇರಳ ರಾಜ್ಯ ತಲಚೇರಿ ಮೂಲದ 1) ಶಾಲಿನ್, 30 ವರ್ಷ, 2) ಟಿ.ಶ್ರೀಜಿತ್, 38 ವರ್ಷ 3) ವೈಷ್ಣವ್.ಕೆ. 27 ವರ್ಷ ಎಂಬ 03 ಜನ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ.
ಸದರಿ ಪ್ರಕರಣದಲ್ಲಿ ಬಾಕಿ ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ವಿಶೇಷ ತನಿಖಾ ತಂಡದಿಂದ ಪತ್ತೆ ಕಾರ್ಯ ಮುಂದುವರೆದಿರುತ್ತದೆ.
ಸದರಿ ದರೋಡೆ ಪ್ರಕರಣದಲ್ಲಿ ಒಟ್ಟು 11 ಜನ ಆರೋಪಿಗಳನ್ನು ಬಂದಿಸುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿರವರುಗಳನ್ನು ಶ್ರೀ ಕೆ. ರಾಮರಾಜನ್, ಐಪಿಎಸ್. ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ, ಮಡಿಕೇರಿ ರವರು ಶ್ಲಾಘಿಸಿರುತ್ತಾರೆ.
Back to top button
error: Content is protected !!