ಕಾರ್ಯಕ್ರಮ

ಎಂ.ಎಸ್. ಪಿ. ಸಿ. ಸಂಸ್ಥೆ ಸದಸ್ಯರಿಗೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಪುನಶ್ಚೇತನ ತರಬೇತಿ ಕಾರ್ಯಗಾರ

ಕುಶಾಲನಗರ, ಆ.17: ಶಿಶು ಅಭಿವೃದ್ಧಿ ಯೋಜನಾ ಇಲಾಖೆ, ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೋಮವಾರಪೇಟೆ ತಾಲ್ಲೂಕು ಇವರ ವತಿಯಿಂದ ಅಂಗನವಾಡಿ ಫಲಾನುಭವಿಗಳಿಗೆ ಪೂರೈಕೆ ಯಾಗುವ ಪೂರಕ ಪೌಷ್ಟಿಕ ಆಹಾರ ಪದಾರ್ಥಗಳನ್ನು ತಯಾರಿಸುವ ಎಂ.ಎಸ್‌. ಪಿ.ಸಿ. ಸಂಸ್ಥೆಯ ಸದಸ್ಯರುಗಳಿಗೆ ಪುನಶ್ಚೇತನ ತರಬೇತಿ ಕಾರ್ಯಾಗಾರವು ಕೂಡಿಗೆಯಲ್ಲಿರುವ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಭಾಂಗಣದಲ್ಲಿ ನಡೆಯಿತು.
ತರಬೇತಿಗೆ ಚಾಲನೆಯನ್ನು ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀ ದೇವಿ ಬಿ. ಮುಧೋಳ ಚಾಲನೆ ನೀಡಿದರು.
ಜಿಲ್ಲೆಯ ಆಹಾರ ಸುರಕ್ಷತೆ ವಿಭಾಗದ ನಿಯೋಜಿತ ಅಧಿಕಾರಿ ಎಫ್, ಎಸ್. ಎಸ್. ಎ.ಐ. ಮಂಜುನಾಥನವರು ಎಂ.ಎಸ್. ಪಿ.ಸಿ. ಮತ್ತು ಎ.ಡಬ್ಲ್ಯೂ ಸಿ. ಯಲ್ಲಿ ಆಹಾರ ಗುಣಮಟ್ಟ ಕಾಯ್ದೆ ಅಡಿ ಪೂರಕ ಪೌಷ್ಟಿಕ ಆಹಾರ ಪದಾರ್ಥಗಳನ್ನು ನಿರ್ವಹಣೆಯ ಕುರಿತು ಸವಿಸ್ತಾರವಾದ ಮಾಹಿತಿಯನ್ನು ನೀಡಿದರು.
ಕುಶಾಲನಗರ ಆರೋಗ್ಯ ಇಲಾಖೆಯ ಮಕ್ಕಳ ತಜ್ಞರಾದ ಡಾ. ಶಿವಕುಮಾರ್, ಬಾಣಂತಿಯರು,ಮತ್ತು ಮಕ್ಕಳ ಪೌಷ್ಟಿಕ ಆಹಾರದ ಬಗ್ಗೆ ತರಬೇತಿ ನೀಡಿದರು.
ಮೈಸೂರಿನ ವಿಭಾಗೀಯ ಪ್ರತಾಗಾರ ಕಛೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿ ,ಹಿರಿಯ ಸಹಾಯಕ ನಿರ್ದೇಶಕರಾದ ಹೆಚ್.ಎಲ್ ಮಂಜುನಾಥ ನವರು ಕಛೇರಿಯ ಪತ್ರಗಳ ರೆಕಾರ್ಡ್ ರೂಮಿನ ನಿರ್ವಹಣೆ ಮಾಹಿತಿ ಬಗ್ಗೆ ತರಬೇತಿಯನ್ನು ನೀಡಿದರು.
ತರಬೇತಿ ಕಾರ್ಯಗಾರದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀದೇವಿ ಬಿ. ಮುಧೋಳ, ಮೇಲ್ವಿಚಾರಕಿ ಸಾವಿತ್ರವ್ವಾ, ಇಲಾಖೆಯ ಸಿಬ್ಬಂದಿ ವರ್ಗದವರು, ಅಂಗನವಾಡಿ ಕಾರ್ಯಕರ್ತೆಯರು, ಎಂ.ಎಸ್. ಪಿ ಸಿ. ಸಂಸ್ಥೆಯ ಸಿಬ್ಬಂದಿಗಳು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!