ಕುಶಾಲನಗರ,ಫೆ೧೯: ಕೂಡುಮಂಗಳೂರು ಗ್ರಾ.ಪಂ ನ ಸುಂದರನಗರದಲ್ಲಿ ಕೆಲವು ಕಾಫಿ ವರ್ಕ್ಸ್ ನಿಂದ ದೂಳಿನ ಸಮಸ್ಯೆಯಿದ್ದ ಕಾರಣ ಸ್ಥಳಕ್ಕೆ ಕೂಡುಮಂಗಳೂರು ಗ್ರಾ.ಪಂ ಸದಸ್ಯ ಕೆ.ಬಿ.ಶಂಶುದ್ಧೀನ್ ಹಾಗೂ ಪಿಡಿಓ ಸಂತೋಷ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸುಂದರನಗರದ ಕಾಫಿ ವರ್ಕ್ಸ್ ಗಳಿಂದ ಕಾಫಿಯ ದೂಳಿ ಹೊರಸೂಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನಲೆ ಸಂಬಂಧಪಟ್ಟ ವರ್ಕ್ಸ್ ನ ಮಾಲೀಕರ ಬಳಿ, ದೂಳಿನ ಸಮಸ್ಯೆ ಆಗದಂತೆ ಶೀಟ್ ಅಳವಡಿಕೆಯಂತಹ ಅಗತ್ಯ ಕ್ರಮ ಕೈಗೊಳ್ಳುವಂತೆ ಸದಸ್ಯರಾದ ಕೆ.ಬಿ.ಶಂಶುದ್ಧೀನ್ ತಿಳಿಸಿದರು.
ಸುಂದರನಗರದಲ್ಲಿ ಮಕ್ಕಳು, ವೃದ್ಧರಿಗೆ ಕಾಫಿಯ ದೂಳಿನಿಂದ ಉಸಿರಾಟದ ಸಮಸ್ಯೆ ಉಂಟಾಗುತ್ತಿದೆ. ರಾತ್ರಿ ವೇಳೆ ನಿದ್ರಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಕೂಡಲೇ ದೂಳಿನ ಸಮಸ್ಯೆಗೆ ಬೇಕಾದ ಕ್ರಮಕೈಗೊಳ್ಳುವಂತೆ ಸೂಚಿಸಿದರು. ಕಾಫಿ ಸೀಸನ್ ಕೂಡಾ ಆಗಿರುವುದರಿಂದ ಯಥೇಚ್ಛವಾಗಿ ದೂಳಿನ ಸಮಸ್ಯೆಯಾಗಿದ್ದು, ಸಾರ್ವಜನಿಕರಿಗೆ ತೊಂದರೆ ನೀಡಬೇಡಿ ಎಂದು ತಿಳಿಸಿದರು.
ಕಾಫಿ ಸೀಸನ್ ಆದ ಹಿನ್ನಲೆ ದೂಳಿನ ಸಮಸ್ಯೆ ಅಧಿಕವಾಗಿದೆ. ಆದಷ್ಟು ಬೇಗನೇ ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ಅಗತ್ಯಕ್ರಮ ಕೈಗೊಳ್ಳಲಾಗುವುದು ಎಂದು ವರ್ಕ್ಸ್ ನ ಮಾಲೀಕರು ತಿಳಿಸಿದರು.
ಈ ಸಂದರ್ಭ ಮಾತನಾಡಿದ ಗ್ರಾ.ಪಂ ಸದಸ್ಯರಾದ ಕೆ.ಬಿ.ಶಂಶುದ್ಧೀನ್, ಸುಂದರನಗರದ ಗ್ರಾಮಸ್ಥರಿಗೆ ವರ್ಕ್ಸ್ ಗಳಿಂದ ದೂಳಿನ ಸಮಸ್ಯೆ ಎದುರಾಗಿರುವ ಬಗ್ಗೆ ದೂರು ಬಂದ ಹಿನ್ನಲೆ ಸ್ಥಳ ಪರಿಶೀಲನೆ ನಡೆಸಿ, ಸಾರ್ವಜನಿಕರಿಗೆ ಸಮಸ್ಯೆ ಆಗದಂತೆ ಕೂಡಲೇ ಕ್ರಮವಹಿಸುವಂತೆ ವರ್ಕ್ಸ್ ಮಾಲೀಕರಿಗೆ ತಿಳಿಸಲಾಗಿದೆ ಎಂದರು.
ಈ ಸಂದರ್ಭ ಕೂಡುಮಂಗಳೂರು ಗ್ರಾ.ಪಂ ಪಿಡಿಓ ಸಂತೋಷ್, ಗ್ರಾ.ಪಂ ಮಾಜಿ ಅಧ್ಯಕ್ಷರಾದ ಕಾವೇರಮ್ಮ, ಗ್ರಾಮದ ಮುಖಂಡರಾದ ತಂಬಿ, ರಫಿಕ್, ವಾಟರ್ ಮ್ಯಾನ್ ವಸಂತ್ ಕುಮಾರ್ ಇದ್ದರು.
Back to top button
error: Content is protected !!